ಜುಲೈ 16ರಂದು ಕೇತು ಗ್ರಸ್ಥ ಚಂದ್ರಗ್ರಹಣ! ನಿಮ್ಮ ರಾಶಿಯ ಮೇಲೆ ಗ್ರಹಣದ ಪ್ರಭಾವ ಬೀರುತ್ತದೆಯೇ? | Janata news

15 Jul 2019
1410
Lunar Eclipse On The 16th

ಬೆಂಗಳೂರು : ಜುಲೈ 16 ಮಂಗಳವಾರದಂದು ಚಂದ್ರಗ್ರಹಣ ಸಂಭವಿಸಲಿದೆ. ಇದನ್ನ ಇಂಗ್ಲಿಷ್ ಭಾಷೆಯಲ್ಲಿ ಲೂನಾರ್ ಎಕ್ಲಿಪ್ಸ್, ಮೂನ್ ಎಕ್ಲಿಪ್ಸ್, ಹಾಗೂ ಸೂಪರ್ ಮೂನ್ ಎಂದೆಲ್ಲಾ ಕರೆಯಲಾಗುತ್ತದೆ.

ಕೇತುಗ್ರಸ್ತ ಚಂದ್ರಗ್ರಹಣದ ಕಾರಣ ಗ್ರಹಣದ ಕಾರಣ ತಿರುಮಲ ತಿರುಪತಿ, ಕಾಳಹಸ್ತಿಯ ಕಾಳಹಸ್ತೇಶ್ವರ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ದರ್ಶನಕ್ಕೆ ಅವಕಾಶವಿರುವುದಿಲ್ಲ. ಚಂದ್ರಗ್ರಹಣ ಕಾಲದಲ್ಲಿ ದೇವಸ್ಥಾನದಲ್ಲಿರುವ ವಿಗ್ರಹಗಳ ಸುತ್ತಲಿರುವ ಪ್ರಭಾವಲಯದಲ್ಲಿ ಸ್ವಲ್ಪ ಲೋಪ ಉಂಟಾಗುತ್ತದೆ. ಮುಖ್ಯವಾಗಿ, ಗ್ರಹಣದ ಕಾರಣ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿರುತ್ತದೆ. ಆ ಕಾರಣ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ ಎನ್ನಲಾಗುತ್ತದೆ.

ಸೂರ್ಯಗ್ರಹಣದ ಬಳಿಕ ಜುಲೈ 16, 17ರ ಮಧ್ಯರಾತ್ರಿ ಚಂದ್ರಗ್ರಹಣ ಗೋಚರವಾಗಲಿದೆ. ಭಾರತದಲ್ಲಿ ಚಂದ್ರಗ್ರಹಣ ರಾತ್ರಿ 1. 31 ರಿಂದ ಬೆಳಗ್ಗಿನ ಜಾವ 4.31ರವರೆಗೆ ಗ್ರಹಣ ಕಾಣಿಸಿಕೊಳ್ಳಲಿದೆ. ಆದರೆ, ಧರ್ಮಶಾಸ್ತ್ರಗಳ ಪ್ರಕಾರ ಚಂದ್ರಗ್ರಹಣದ ಸೂತಕ ಗ್ರಹಣಕ್ಕೂ 9 ಗಂಟೆ ಮೊದಲು ಅಂದರೆ ಜುಲೈ 16ರ ಸಂಜೆ 4. 30ರಿಂದ ಆರಂಭವಾಗಲಿದೆ.

ಉತ್ತರಾಷಾಢ ನಕ್ಷತ್ರ ಧನುರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣವು ಸಂಭವಿಸುತ್ತದೆ. ಅದರ ನೇರ ಪರಿಣಾಮ ಕೃತ್ತಿಕಾ, ಉತ್ತರಾ, ಉತ್ತರಾಷಾಢ, ಪೂರ್ವಾಷಾಢ, ಶ್ರವಣ ನಕ್ಷತ್ರದವರ ಮೇಲಾಗುತ್ತದೆ. ಧನಸ್ಸು , ಮಕರ, ಕುಂಭ, ಮಿಥುನ, ಸಿಂಹ ರಾಶಿಯವರಿಗೆ ಚಂದ್ರಗ್ರಹಣದ ಕಾರಣ ಸ್ವಲ್ಪ ಮಟ್ಟಿಗೆ ಅನಿಷ್ಟ ಸಂಭವಿಸುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಪಂಡಿತರು.
ಯಾವುದೇ ಗ್ರಹಣಗಳು ಸಂಭವಿಸಿದಾಗ ಅವು ನಮ್ಮ ರಾಶಿಗಳ ಮೇಲೆಯೂ ಕೂಡ ಪ್ರಭಾವವನ್ನು ಬೀರುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
1. ಮೇಷ ರಾಶಿ
ಮೇಷ ರಾಶಿಯವರಿಗೆ ಈ ಗ್ರಹಣ ಮಿಶ್ರಫಲ ನೀಡಲಿದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸಿ.

2. ವೃಷಭ ರಾಶಿ
ವೃಷಭ ರಾಶಿಯವರಿಗೂ ಈ ಗ್ರಹಣ ಮಧ್ಯಮ ಫಲದಾಯಕವಾಗಿರುತ್ತದೆ.

3. ಮಿಥುನ ರಾಶಿ
ಚಂದ್ರಗ್ರಹಣದ ಪ್ರಭಾವದಿಂದ ಮಿಥುನ ರಾಶಿಯವರಿಗೆ ಲಾಭವಾಗಲಿದೆ. ಶತ್ರುಭಯದಿಂದ ಮುಕ್ತಿ ದೊರೆಯಲಿದೆ ಹಾಗೂ ಉದ್ಯೋಗದಲ್ಲಿರುವ ಜನರಿಗೆ ಬಡ್ತಿ ದೊರೆಯುವ ಸಂಭವವಿದೆ.

4. ಕರ್ಕಾಟಕ ರಾಶಿ
ಈ ರಾಶಿಯವರಿಗೆ ಈ ಗ್ರಹಣ ಶುಭ ಸಂಕೇತವನ್ನು ಹೊತ್ತು ಬರುತ್ತಿಲ್ಲ.

5. ಸಿಂಹ ರಾಶಿ
ಆರೋಗ್ಯದ ವಿಚಾರದಲ್ಲಿ ಏರಿಳಿತ ಉಂಟಾಗಬಹುದು. ಅಪಘಾತದ ಬಗ್ಗೆಯೂ ನೀವು ಎಚ್ಚರಿಕೆಯಿಂದ ಇರಬೇಕು.

6. ಕನ್ಯಾ ರಾಶಿ
ನೀವು ವ್ಯರ್ಥದ ಖರ್ಚುಗಳಿಂದ ಬಚಾವಾಗುವ ಅಗತ್ಯವಿದೆ ಎಂದು ಗ್ರಹಣ ಸಂಕೇತ ನೀಡುತ್ತಿದೆ.

7. ತುಲಾ ರಾಶಿ
ಚಂದ್ರಗ್ರಹಣ ನಿಮಗೆ ಪ್ರಯೋಜನಕಾರಿಯಾಗಲಿದೆ. ಈ ಸಮಯದಲ್ಲಿ ನಿಮ್ಮ ಎಲ್ಲ ಕಾರ್ಯಗಳು ಪೂರ್ತಿಯಾಗಲಿವೆ ಹಾಗೂ ಧನಲಾಭವಾಗಲಿದೆ.

8. ವೃಶ್ಚಿಕ ರಾಶಿ
ಈ ಚಂದ್ರಗ್ರಹಣ ನಿಮಗೆ ಮಿಶ್ರ ಪರಿಣಾಮಗಳನ್ನು ನೀಡಲಿದೆ. ಧನ ಲಾಭವಾಗಲಿದ್ದು, ಆದರೆ ಖರ್ಚು ಕೂಡ ಇರುತ್ತದೆ.

9. ಧನು ರಾಶಿ
ಈ ಗ್ರಹಣ ನಿಮ್ಮ ರಾಶಿ ಮೇಲೆ ಜರುಗಲಿದೆ. ಹೀಗಾಗಿ ಈ ಗ್ರಹಣ ನಿಮಗೆ ಮಿಶ್ರ ಫಲ ನೀಡಲಿದೆ.

10. ಮಕರ ರಾಶಿ
ಈ ಸಮಯದಲ್ಲಿ ನೀವು ವಾಹನಗಳಿಂದ ದೂರವಿರಿ ಇಲ್ಲದಿದ್ದರೆ ಗಾಯಗೊಳ್ಳುವ ಸಂಭವವಿರುತ್ತದೆ. ಜತೆಗೆ, ನಿಮ್ಮ ಆರೋಗ್ಯದ ಮೇಲೂ ಸಹ ವಿಶೇಷ ಗಮನವಿಡಿ. ಹಾಗೆ, ನಕಾರಾತ್ಮಕ ವಿಚಾರಗಳಿಂದ ದೂರವಿರಿ.

11. ಕುಂಭ ರಾಶಿ
ಚಂದ್ರಗ್ರಹಣ ನಿಮಗೆ ಒಳ್ಳೆಯ ಸಂಕೇತ ನೀಡುತ್ತಿಲ್ಲ.

12. ಮೀನ ರಾಶಿ
ಗ್ರಹಣ ನಿಮಗ ಅನೇಕ ಲಾಭಗಳನ್ನು ತರುತ್ತದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಗೌರವ ಸಿಗಲಿದೆ.

ಕೇತುಗ್ರಸ್ತ ಚಂದ್ರ ಗ್ರಹಣವು ರಾತ್ರಿಯ ಮೂರನೇ ಪ್ರಹರದಲ್ಲಿ ಸಂಭವಿಸುವುದರಿಂದ ಅಂದು ಮಧ್ಯಾಹ್ನ 3.30ರೊಳಗೆ ಆಹಾರ ಸ್ವೀಕರಿಸಬಹುದು. ಅಶಕ್ತರು ಹಾಗೂ ರೋಗಿಗಳು ರಾತ್ರಿ 9.15ರವರೆಗೆ ಆಹಾರ ಸ್ವೀಕರಿಸಬಹುದು.

English summary :Lunar Eclipse On The 16th

ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಪ್ರಧಾನಿ ಮೋದಿ ಅವರ ಮೂರನೇ ಅವಧಿಯ ಆರು ತಿಂಗಳೊಳಗೆ ಪಿಒಕೆ ಭಾರತದ ಭಾಗವಾಗಲಿದೆ - ಸಿಎಂ ಯೋಗಿ
ಸಂಸದ ಪ್ರಜ್ವಲ್‌ ರೇವಣ್ಣ  ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ಎಲ್ಲಾ ಡಿ.ಕೆ.ಶಿವಕುಮಾರ್‌ ಪ್ಲಾನ್ - ವಕೀಲ ದೇವರಾಜೇಗೌಡ
 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಸ್ತೆಬದಿ ಒಣಗಿರುವ ಮರಗಳು ಹಾಗೂ ರೆಂಬೆ ಕೊಂಬೆಗಳ ಮಾಹಿತಿ ಕೋರಿರುವ ಬಿಬಿಎಂಪಿ
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಸಿಎಂ ಕೇಜ್ರಿವಾಲ್ ಗೃಹ ಕಚೇರಿಯಲ್ಲಿ ಎಎಪಿ ರಾಜ್ಯಸಭಾ ಸಂಸದೆ ಮೇಲೆ ಹಲ್ಲೆ ಪ್ರಕರಣ : ದೂರು ದಾಖಲಿಸಿದ ಸ್ವಾತಿ ಮಲಿವಾಲ್
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಚುನಾವಣಾ ಪ್ರಚಾರಕ್ಕೆ ಜಾಮೀನು : ಅರವಿಂದ್ ಕೇಜ್ರಿವಾಲ್ ಅವರಿಗೆ ವಿಶೇಷ ಸವಲತ್ತು ನೀಡಲಾಗಿದೆ - ಕೇಂದ್ರ ಗೃಹ ಸಚಿವ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ಅವರಿಗೆ ಬಳೆಗಳನ್ನು ಧರಿಸುವಂತೆ ಮಾಡುತ್ತೇವೆ - ಪ್ರಧಾನಿ ಮೋದಿ
 ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ನ್ಯೂಸ್ MORE NEWS...