Mon,Dec02,2024
ಕನ್ನಡ / English

ನವರಾತ್ರಿಯ ಹಿನ್ನಲೆ, ಆಚರಣೆ, ನವದುರ್ಗೆಯರ ಪೂಜೆಯ ಮಹತ್ವ, ಪೂಜಾ ವಿಧಾನ! | Janata news

16 Oct 2020
8851

ಬೆಂಗಳೂರು : ನವರಾತ್ರಿ ಎಲ್ಲ ಜನರೂ ಆಚರಿಸುವ ಒಂದು ವಿಶಿಷ್ಟವಾದ ಹಬ್ಬ.

ಪುರಾಣದ ಪ್ರಕಾರ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿ ಲೋಕವನ್ನು ಕಾಪಾಡುತ್ತಾಳೆ. ನವರಾತ್ರಿಯಲ್ಲಿ ಚಾಮುಂಡೇಶ್ವರಿ /ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು .ನವರಾತ್ರಿಯೆಂದರೆ ಒಂಭತ್ತು ದಿನಗಳಿಗೆ ಸೀಮಿತ ವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ.

ಒಂಭತ್ತು ದಿನಗಳ ಕಾಲ ಶ್ರೀರಾಮ ಸೇನೆಯು ರಾವಣ ಸೇನೆಯೊಂದಿಗೆ ಯುದ್ಧ ಮಾಡಿ, ಕೊನೆಗೆ ಹತ್ತನೆಯ ದಿನದಂದು ಅಂದ್ರೆ ದಶಮಿಯಂದು ದಶಕಂಠ ರಾವಣನನ್ನು ಸಂಹರಿಸುವುದರ ಮೂಲಕ ವಿಜಯೋತ್ಸವನ್ನು ಅಚರಿಸಲಾಯ್ತು. ಈ ವಿಜಯೋತ್ಸವವನ್ನೇ ವಿಜಯ ದಶಮಿ ಎಂದು ಆಚರಿಸುತ್ತಾರೆ ಎಂಬ ಪ್ರತೀತಿ ಇದೆ.

ನವರಾತ್ರಿಯಲ್ಲಿ ದೇವಿತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ದೇವಿತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆದುಕೊಳ್ಳಲು ನವರಾತ್ರಿಯ ಕಾಲದಲ್ಲಿ ಶ್ರೀ ದುರ್ಗಾದೇವ್ಯೈ ನಮಃ| ಎಂಬ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.

janata



ನವರಾತ್ರಿ ಆಚರಣೆ, ಒಂಭತ್ತು ದಿನಗಳ ವಿಶೇಷತೆ
ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.. ದುರ್ಗಾ ಮಾತೆಯ ಒಂಬತ್ತುರೂಪಗಳೆಂದರೆ,
1. ಶೈಲಪುತ್ರಿ
2. ಬ್ರಹ್ಮಚಾರಿಣಿ
3. ಚಂದ್ರಘಂಟ
4. ಕುಶ್ಮಾಂಡ
5. ಸ್ಕಂದಮಾತ
6. ಕಾತ್ಯಾಯನಿ
7. ಕಾಳರಾತ್ರಿ ಮಾಹಾಯಾಮ
8. ಮಹಾಗೌರಿ
9. ಸಿದ್ಧಿಧಾತ್ರಿ

janata



ನವರಾತ್ರಿಯ ಮೊದಲನೆಯ ದಿನ ಕಳಸ ಬೆಳಗುವುದರೊಂದಿಗೆ ಅರಂಭವಾಗುತ್ತದೆ. ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಶಕ್ತಿ ದೇವತೆಯರನ್ನು ಪ್ರತಿಷ್ಟಾಪಿಸುತ್ತಾರೆ. ಒಂಭತ್ತು ದಿನಗಳ ಕಾಲ ಶಕ್ತಿ ದೇವತೆಯನ್ನು ನಿಯಮ ಬದ್ಧವಾಗಿ ಪೂಜಿಸಲಾಗುತ್ತದೆ. ನಂದಾದೀಪ ಹಚ್ಚಿ 9 ದಿನಗಳ ಕಾಲ ಆರದಂತೆ ನೋಡಿಕೊಳ್ಳಬೇಕು. ಚಂದ್ರನನ್ನು ಪ್ರತಿನಿಧಿಸುವ ಶೈಲಪುತ್ರಿಯ ಆರಾಧನೆಯಿಂದ ಕೆಟ್ಟ ಪರಿಣಾಮಗಳು ಹಾಗೀ ಶಕುನಗಳು ನಿವಾರಣೆಯಾಗುವುದೆಂಬ ನಂಬಿಕೆ ಇದೆ.

ಎರಡನೆಯ ದಿನದಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ದೇವಿಗೆ ಇಷ್ಟವಾದ ನೈವೇದ್ಯವನ್ನು ನೀಡಿ ಆಷ್ಟೋತ್ತರಗಳಿಂದ ಪೂಜೆ ಮಾಡಲಾಗುತ್ತದೆ. ಮಂಗಳ ಗ್ರಹವನ್ನು ಪ್ರತಿನಿಧಿಸುವ ಈಕೆಯನ್ನು ಶುದ್ಧ ಹೃದಯದಿಂದ ಪೂಜಿಸಿದರೆ ಜೀವನದಲ್ಲಿ ಎದುರಾಗುವ ಕೆಟ್ಟ ಸಂಗತಿಗಳನ್ನು ದೂರಮಾಡುತ್ತಾಳೆ.

ಮೂರನೆಯ ದಿನದಂದು ಮಹಿಶಾಸುರ ಮರ್ದಿನಿ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಒಂಬತ್ತು ಈ ದಿನಗಳಲ್ಲಿ ಶಕ್ತಿ ದೆವತೆಯನ್ನು ಪೂಜಿಸಿ ಏನೇ ಕೆಲಸ ಕೈಗೊಂಡರೂ ನೆರವೇರುತ್ತವೆ ಎಂಬ ನಂಬಿಕೆ ಕೂಡ ಇವೆ. ಶುಕ್ರಗ್ರಹವನ್ನು ಪ್ರತಿನಿಧಿಸುವ ಈಕೆಯನ್ನು ಪೂಜಿಸಿದರೆ ಧೈರ್ಯ ಹಾಗೂ ನಿರ್ಭಯತೆಯನ್ನು ತನ್ನ ಭಕ್ತರಿಗೆ ಕರುಣಿಸುತ್ತಾಳೆ.

ನಾಲ್ಕನೆಯ ದಿನದಂದು ಸಿಂಹವನ್ನು ವಾಹನವನ್ನಾಗಿಸಿಕೊಂಡ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಕಾಳಿ ದೇವತೆಯ ಮಂದಿರಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಕೊಲ್ಲೂರು ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹೋಮಗಳನ್ನು ಮಾಡಲಾಗುತ್ತದೆ. ಸೂರ್ಯನನ್ನು ಪ್ರತಿನಿಧಿಸುವ ಕೂಷ್ಮಾಂಡಿನಿಯನ್ನು ಪೂಜಿಸಿದರೆ ಭವಿಷ್ಯದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತದೆ.

ಐದನೇ ದಿನದಲ್ಲಿ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. 5ನೇ ದಿನವಾದ್ದರಿಂದ, ಪಂಚರಾತ್ರೋತ್ಸವವನ್ನು ಅಚರಿಸಬೇಕು ಮತ್ತು ಲಕ್ಷ್ಮಿ ಪೂಜೆ ಮಾಡಿಸುವುದು ಈ ದಿನದಲ್ಲಿ ಉತ್ತಮವಾಗಿರುತ್ತದೆ. ಬುಧಗ್ರಹವನ್ನು ಪ್ರತಿನಿಧಿಸುವ ದುರ್ಗಾಮಾತೆಯ ಐದನೇ ಅವತಾರವಾದ ಸ್ಕಂದ ಮಾತೆ ಸದಾ ತನ್ನ ಭಕ್ತರ ಮೇಲೆ ಸಹಾನುಭೂತಿ ತೋರುತ್ತಾಳೆ.

ಆರನೆಯ ದಿನದಂದು ಧನ ಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಧನ ಲಕ್ಷ್ಮಿಯನ್ನು ಪೂಜಿಸುವಾಗ, ಹಣದಿಂದ ಮಾಡಿದ ಹಾರವನ್ನು ದೇವಿಗೆ ಹಾರದ ರೂಪದಲ್ಲಿ ಹಾಕುವ ಪದ್ಧತಿಯೂ ಇದೆ. ದೀಪಗಳಿಂದ ಮಹಾ ಮಾತೆಯನ್ನು ಬೆಳಗಿ, ಅಷ್ಟ ಲಕ್ಷ್ಮಿಯೂ ಮನೆಯಲ್ಲಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ.

ಏಳನೆಯ ದಿನದಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಈ ದಿನದಲ್ಲಿ ಶಾರದ ಪೂಜೆಯನ್ನು ಮಾಡುವುದರ ಮೂಲಕ ಶಾರದೆಯ ಕೃಪೆಗೆ ಜನರು ಪಾತ್ರರಾಗುತ್ತಾರೆ.

ಶಾಂತ ಸ್ವರೂಪದಲ್ಲಿರುವ ಶಾರದಾ ಮಾತೆಯು ಏಳನೆಯ ದಿನದಿಂದ ಒಂಭತ್ತನೆಯ ದಿನಗಳ ಸಮಯದಲ್ಲಿ ತನ್ನ ಭಕ್ತರಿಗೆ ಬೇಡಿದ ವರವನ್ನು ಶಾಂತಿಯಿಂದ ಅನುಗ್ರಹಿಸುವಳು ಎಂಬ ನಂಬಿಕೆಯಿದೆ. ಶನಿ ಗ್ರಹವನ್ನು ಪ್ರತಿನಿಧಿಸುವ ಈಕೆಯು ಶೌರ್ಯವನ್ನು ಸಾಂಕೇತಿಸುತ್ತಾಳೆ.

ಎಂಟನೆಯ ದಿನವನ್ನು ದುರ್ಗಾಷ್ಟಮಿ ಎಂದು ಕರೆಯುತ್ತಾರೆ. ಅಂದರೆ, ದುರ್ಗಾದೇವಿಯನ್ನು ಪೂಜಿಸುವ ಎಂಟನೆಯ ದಿನವಾದ್ದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. ಈ ದಿನದಂದು ದುರ್ಗಾ ಮಾತೆಯನ್ನು ಪೂಜಿಸಲಾಗುತ್ತದೆ. ದೇವಿಗೆ ಪೂಜಿಸಿ, ಉಪವಾಸ ವ್ರತ ಮಾಡುತ್ತಾರೆ. ಈ ದಿನಗಳಲ್ಲಿ ಕುಂಕುಮಾರ್ಚನೆ ನಡೆಯುತ್ತದೆ. ವಿಶೇಷ ಮಹಾ ಅಷ್ಟಮಿಯ ದಿನವಾದ ಈ ದಿನ ಮಹಾಸನಾ, ಷೋಡಶೋಪಚಾರ ಪೂಜೆಯನ್ನೂ ಮಾಡಲಾಗುತ್ತದೆ.

ದೇವಾನುದೇವತೆಗಳಿಗೆ ವಿಪರೀತವಾಗಿ ಕಾಟ ಕೊಡುತ್ತಿದ್ದ ಮಹಿಷಾಸುರನನ್ನು ಚಾಮುಂಡೇಶ್ವರಿ, ದುರ್ಗೆ, ಬನಶಂಕರಿ ಎಂದು ಮೊದಲಾದ ನಾಮಾವಳಿಗಳಿಂದ ಸ್ತುತಿಸಲಾಗುವ ದೇವಿ ನವರಾತ್ರಿಯ ಒಂಬತ್ತನೇ ದಿನದಂದು ಸಂಹರಿಸಿ ಲೋಕಕ್ಕೆ ಶಾಂತಿಯನ್ನು ತಂದಳೆಂಬ ನಂಬಿಕೆಯ ದ್ಯೋತಕವಾಗಿ ಒಂಬತ್ತನೇ ದಿನದಂದು ಆಯುಧ ಪೂಜೆ ಮಾಡಲಾಗುತ್ತದೆ.
ಮಹಾಭಾರತ ಕಾಲದಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟ ನಂತರ ಆಶ್ವಯುಜ ನವಮಿಯಂದು ಶಸ್ತ್ರಾಸ್ತ್ರಗಳನ್ನು ತೆಗೆದು ಪೂಜಿಸಿ, ವಿಜಯ ದಶಮಿಯಂದು ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು.
ಅಂದು ಮನೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ತಾವು ಬಳಸುವ ಪ್ರತಿಯೊಂದು ವಸ್ತುಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಮ್ಮ ಜೀವನಕ್ಕೆ ಅನುವು ಮಾಡಿಕೊಡುವ ವಸ್ತುಗಳಲ್ಲಿ ದೇವಿಯ ರೂಪವನ್ನು ಕಾಣುವುದು. ತನ್ನ ಬಾಳಿಗೆ ಬೆಳಕಾಗಿ ಯಶಸ್ಸನ್ನು ತಂದು ಕೊಡು ಎಂದು ದೇವಿಯಲ್ಲಿ ಕೇಳಿಕೊಳ್ಳುವ ವಿಧಾನವೂ ಹೌದು.

ನವರಾತ್ರಿ ಹಬ್ಬದ ಕೊನೆಯ ದಿನವೂ ಹೌದು. ಹತ್ತನೆಯ ದಿನ, ಅಂದರೆ ವಿಜಯದಶಮಿಯಂದು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

janata



ನವರಾತ್ರಿ ಪೂಜೆಯ ಕ್ರಮಗಳಾವುವು ತಿಳಿದುಕೊಳ್ಳಿ. -
- ನವರಾತ್ರಿ ಪೂಜೆಯಲ್ಲಿ ಕುಳಿತಾಗಲೆಲ್ಲಾ, ತಾಯಿಗೆ ಪ್ರಿಯವಾದ ಕೆಂಪು, ಹಳದಿ, ಗುಲಾಬಿ ಮತ್ತು ಹಸಿರು ಬಟ್ಟೆಗಳನ್ನು ಧರಿಸಿ ಮತ್ತು ಪೂಜೆಯಲ್ಲೂ ಈ ಬಣ್ಣದ ಬಟ್ಟೆಗಳನ್ನೇ ಬಳಸಿ.

- 9 ದಿನಗಳ ನವರಾತ್ರಿಯಲ್ಲಿ 9 ವಿಧದ ಭೋಗವನ್ನು ಅಥವಾ ನೈವೇದ್ಯವನ್ನು ತತಾಯಿ ದುರ್ಗೆಯ ಪೂಜೆಯಲ್ಲಿ ನೀಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದುವೆಂದರೆ ಹಣ್ಣುಗಳನ್ನು, ಸಿಹಿತಿಂಡಿಗಳನ್ನು, ಕಲ್ಲು ಸಕ್ಕರೆ, ಸಕ್ಕರೆ, ಲವಂಗ ಮತ್ತು ಏಲಕ್ಕಿಯನ್ನು ದೇವಿಗೆ ಭೋಗವಾಗಿ ಅರ್ಪಿಸಬಹುದು. ಆದರೆ ಅನ್ನವನ್ನು ಅಥವಾ ಅಕ್ಕಿಯಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥವನ್ನು ನೈವೇದ್ಯವಾಗಿ ದೇವಿಗೆ ನೀಡುವಂತಿಲ್ಲ.

- ನವರಾತ್ರಿಯ 9 ದಿನಗಳ ಕಾಲ ಬ್ರಹ್ಮಚರ್ಯವನ್ನು ಅನುಸರಿಸಬೇಕು. ಪತಿ - ಪತ್ನಿಯರ ನಡುವೆ ಕೂಡ ದೈಹಿಕ ಸಂಪರ್ಕವಿರಬಾರದು.

- ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾಂಸಾಹಾರಿ ಆಹಾರ ಸೇವನೆ ಮತ್ತು ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ಆಹಾರದಲ್ಲಿ ಬಳಸಬೇಡಿ ಮತ್ತು ಅವುಗಳನ್ನು ಸೇವಿಸಲೂಬೇಡಿ.

- ಉಪವಾಸ ಮಾಡುವಾಗ ಆಲೂಗಡ್ಡೆ, ಮೊಸರು ಮತ್ತು ಹಣ್ಣುಗಳಂತಹ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಲಾಗುತ್ತದೆ.

janata


RELATED TOPICS:
English summary :Navaratri

ವಕ್ಫ್ ಬೋರ್ಡ್ ರದ್ದುಗೊಳಿಸಿದ  ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರ
ವಕ್ಫ್ ಬೋರ್ಡ್ ರದ್ದುಗೊಳಿಸಿದ ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರ
ಫೈರ್‌ಬ್ರಾಂಡ್ ಹಿಂದೂ ನಾಯಕ ಸಾಧು ಚಿನ್ಮೋಯ್ ಕೃಷ್ಣ ಬ್ರಹ್ಮಚಾರಿ ಅವರನ್ನು ಬಂಧಿಸಿದ ಬಾಂಗ್ಲಾದೇಶದ ಡಿಟೆಕ್ಟಿವ್ ಬ್ರಾಂಚ್
ಫೈರ್‌ಬ್ರಾಂಡ್ ಹಿಂದೂ ನಾಯಕ ಸಾಧು ಚಿನ್ಮೋಯ್ ಕೃಷ್ಣ ಬ್ರಹ್ಮಚಾರಿ ಅವರನ್ನು ಬಂಧಿಸಿದ ಬಾಂಗ್ಲಾದೇಶದ ಡಿಟೆಕ್ಟಿವ್ ಬ್ರಾಂಚ್
ಸಂಭಾಲ್‌ ಕಲ್ಲುತೂರಾಟದಲ್ಲಿ 4 ಸಾವು, 20ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯ :ಶಾಹಿ ಜಾಮಾ ಮಸೀದಿಯಲ್ಲಿ ಹೆಚ್ಚಿನ ಭದ್ರತೆ, ಶಾಲೆ, ಇಂಟರ್ನೆಟ್ ಬಂದ್
ಸಂಭಾಲ್‌ ಕಲ್ಲುತೂರಾಟದಲ್ಲಿ 4 ಸಾವು, 20ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯ :ಶಾಹಿ ಜಾಮಾ ಮಸೀದಿಯಲ್ಲಿ ಹೆಚ್ಚಿನ ಭದ್ರತೆ, ಶಾಲೆ, ಇಂಟರ್ನೆಟ್ ಬಂದ್
ಅವೈಜ್ಞಾನಿಕ ರೇಷನ್ ಕಾರ್ಡ್ ಪರಿಷ್ಕರಣೆ : ಒಂದೇ ಏಟಿಗೆ 2 ಗ್ಯಾರೆಂಟಿ ಯೋಜನೆ ಢಮಾರ್ - ಆರ್.ಅಶೋಕ್
ಅವೈಜ್ಞಾನಿಕ ರೇಷನ್ ಕಾರ್ಡ್ ಪರಿಷ್ಕರಣೆ : ಒಂದೇ ಏಟಿಗೆ 2 ಗ್ಯಾರೆಂಟಿ ಯೋಜನೆ ಢಮಾರ್ - ಆರ್.ಅಶೋಕ್
ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ  ಆದೇಶಿಸಿದ ಸಚಿವ ಮಧು ಬಂಗಾರಪ್ಪ
ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಆದೇಶಿಸಿದ ಸಚಿವ ಮಧು ಬಂಗಾರಪ್ಪ
ಸಿನಿಮೀಯ ರೀತಿಯಲ್ಲಿ ಪಾಕ್ ಏಜೆನ್ಸಿ ಕೈಯಿಂದ ಏಳು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್
ಸಿನಿಮೀಯ ರೀತಿಯಲ್ಲಿ ಪಾಕ್ ಏಜೆನ್ಸಿ ಕೈಯಿಂದ ಏಳು ಮೀನುಗಾರರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್
ಅಮೆರಿಕ ಫೆಡರಲ್ ಅಧಿಕಾರಶಾಹಿ ಶುದ್ಧೀಕರಿಸಲು ಮಸ್ಕ್ ಜೊತೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
ಅಮೆರಿಕ ಫೆಡರಲ್ ಅಧಿಕಾರಶಾಹಿ ಶುದ್ಧೀಕರಿಸಲು ಮಸ್ಕ್ ಜೊತೆ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ, ಕೆಟಿಪಿಪಿ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ - ಆರ್. ಅಶೋಕ
ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ, ಕೆಟಿಪಿಪಿ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ - ಆರ್. ಅಶೋಕ
ಬೆಂಗಳೂರು ನಗರದ ಹಲವೆಡೆ ನಾಳೆ ಬುಧವಾರ ವಿದ್ಯುತ್ ವ್ಯತ್ಯಯ
ಬೆಂಗಳೂರು ನಗರದ ಹಲವೆಡೆ ನಾಳೆ ಬುಧವಾರ ವಿದ್ಯುತ್ ವ್ಯತ್ಯಯ
ಕಾಲಾ ಕುಮಾರಸ್ವಾಮಿ ಎಂದು ನಿಂದನೆ : ಸಚಿವ ಜಮೀರ್ ವಿರುದ್ಧ ಜನಾಂಗೀಯ ನಿಂದನೆ, ವರ್ಣಭೇದ ತಾರತಮ್ಯ ಆರೋಪ
ಕಾಲಾ ಕುಮಾರಸ್ವಾಮಿ ಎಂದು ನಿಂದನೆ : ಸಚಿವ ಜಮೀರ್ ವಿರುದ್ಧ ಜನಾಂಗೀಯ ನಿಂದನೆ, ವರ್ಣಭೇದ ತಾರತಮ್ಯ ಆರೋಪ
ಜಮಾತ್-ಎ-ಇಸ್ಲಾಮಿ ಇಸ್ಲಾಮಿಕ್ ಮೂಲಭೂತ ಸಂಘಟನೆಗಳ ಬೆಂಬಲವನ್ನು ವಯನಾಡಿನಲ್ಲಿ ಕಾಂಗ್ರೆಸ್‌ ಪಡೆಯುತ್ತಿದೆ - ಕೇರಳ ಸಿಎಂ
ಜಮಾತ್-ಎ-ಇಸ್ಲಾಮಿ ಇಸ್ಲಾಮಿಕ್ ಮೂಲಭೂತ ಸಂಘಟನೆಗಳ ಬೆಂಬಲವನ್ನು ವಯನಾಡಿನಲ್ಲಿ ಕಾಂಗ್ರೆಸ್‌ ಪಡೆಯುತ್ತಿದೆ - ಕೇರಳ ಸಿಎಂ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ ಚಿತ್ರವಿರುವ ರೇಷನ್ ಕಿಟ್ ಗಳು ವಯನಾಡ್ ನಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ ಚಿತ್ರವಿರುವ ರೇಷನ್ ಕಿಟ್ ಗಳು ವಯನಾಡ್ ನಲ್ಲಿ ವಶಕ್ಕೆ ಪಡೆದ ಅಧಿಕಾರಿಗಳು

ನ್ಯೂಸ್ MORE NEWS...