ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸೂಪಾ ಡ್ಯಾಂಗೆ ಬಿದ್ದ ಯುವಕ - ಯುವತಿ! | ಜನತಾ ನ್ಯೂಸ್
ಕಾರವಾರ : ಸೆಲ್ಫಿ ತೆಗೆಯುವಾಗ ಜಲಾಶಯಕ್ಕೆ ಬಿದ್ದ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ರಾಮನಗರದಲ್ಲಿ ನಡೆದಿದೆ.
ಗಣೇಶಗುಡಿಯ ಡ್ಯಾಂ ಭಾಗದಲ್ಲಿ ದಾಂಡೇಲಿಯಿಂದ ಆಟೋದಲ್ಲಿ ಬಂದು ಗಣೇಶಗುಡಿಯ ಸೂಫಾ ಡ್ಯಾಮ್ ಗೆ ಭೇಟಿ ನೀಡಿದ್ದ ಪ್ರೇಮಿಗಳು, ಡ್ಯಾಮ್ ಎದುರು ಭಾಗದಲ್ಲಿ ಇರುವ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾರೆ.
ಈ ವೇಳೆ ಇಬ್ಬರೂ ಕಾಲುಜಾರಿ ಕಾಳಿ ನದಿಗೆ ಬಿದ್ದಿದ್ದು ತೇಲಿ ಹೋಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಹಾಗೂ ಅಗ್ನಿಶಾಮಕದಳ ಬೋಟ್ಗಳಲ್ಲಿ ತೆರಳಿ ಟ್ಯೂಬ್ ಬೋಟ್ ಹಾಗೂ ಕಯಾಕ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ.
English summary :Karwar