ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ - ಸಿದ್ದರಾಮಯ್ಯ | Janata news

13 Jan 2021
463
Shivamogga leader achievement is scam and getting jailed - Siddaramayya

ಬೆಂಗಳೂರು : ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ, ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುರಿತು ವ್ಯಂಗ್ಯವಾಗಿ ಹೇಳಿದ್ದಾರೆ.

ಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ, ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ, ಎಂದು ಸಿಎಂ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ.

ನಮ್ಮ ಪಕ್ಷದ ಶಾಸಕರನ್ನು ಖರೀದಿಸಿ ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಸ್ವಂತಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇನಾದರೂ ಒಂದೈದು ವರ್ಷ ಪೂರ್ತಿ ಮುಖ್ಯಮಂತ್ರಿಯಾಗಿದ್ದಾರಾ?

ಬಿಜೆಪಿವರು ಒಂದು ಕಡೆ ವಿಶ್ವಮಾನವರಾಗಿ ಅಂತನೂ ಹೇಳ್ತಾರೆ, ಇನ್ನೊಂದು ಕಡೆ ಕುರಿ, ಕೊಳಿ, ಗೋಮಾಂಸ ತಿನ್ನುವವರ ವಿರುದ್ಧ ದ್ವೇಷವನ್ನೂ ಕಾರುತ್ತಾರೆ. ವಿಶ್ವಮಾನವನಾಗುವುದು ಎಂದರೆ ಪ್ರತಿ ವ್ಯಕ್ತಿಯ ಆಹಾರ, ಸಂಸ್ಕೃತಿ, ಆಚರಣೆಗಳನ್ನು ಗೌರವಿಸಿ, ಅವರಿದ್ದಂತೆ ಅವರನ್ನು ಒಪ್ಪಿಕೊಳ್ಳುವುದು.

ಸುಪ್ರೀಂ ಕೋರ್ಟ್ ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ತಡೆ ನೀಡಿದೆಯೆಂದರೆ ಆ ಮಸೂದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದರ್ಥ, ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೇಂದ್ರ ಸರ್ಕಾರದ 3 ಕೃಷಿ ಕಾನೂನುಗಳಿಗೆ, ಮುಂದಿನ ಆದೇಶದ ವರೆಗೂ ತಡೆ ಹಿಡಿದು ನಿನ್ನೆ ಸುಪ್ರಿಂಕೋರ್ಟ್ ಆದೇಶ ಹೊರಡಿಸಿತ್ತು.

ಸುಪ್ರೀಂ ಕೋರ್ಟ್ ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ತಡೆ ನೀಡಿದೆಯೆಂದರೆ ಆ ಮಸೂದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದರ್ಥ. ಅದೇ ನ್ಯಾಯಾಲಯ ರೈತರಿಗೆ ಪ್ರತಿಭಟನೆ ಮುಂದುವರೆಸಲು ಅವಕಾಶ ಕಲ್ಪಿಸಿ ತೀರ್ಪು ನೀಡಿದೆ ಎಂದರೆ ಅವರ ಬೇಡಿಕೆಗಳು ನ್ಯಾಯಬದ್ಧವಾಗಿವೆ ಎಂದರ್ಥ, ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಕಳೆದ 48 ದಿನಗಳಲ್ಲಿ ದೆಹಲಿಯಲ್ಲಿ ರೈತರು ಮಳೆ, ಚಳಿ, ಹಸಿವು ಯಾವುದನ್ನೂ ಲೆಕ್ಕಿಸದೆ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹಠಮಾರಿ ಧೋರಣೆಯೇ ರೈತರ ಎಲ್ಲ ಕಷ್ಟ-ನಷ್ಟಗಳಿಗೆ ನೇರ ಕಾರಣ, ಎಂದು ಹೇಳಿದ್ದಾರೆ.

RELATED TOPICS:
English summary :Shivamogga leader achievement is scam and getting jailed - Siddaramayya

ರಾಜ್ಯದಲ್ಲಿ ಕೋವಿಡ್-19 ಏರಿಕೆ : 523 ಹೊಸ ಪ್ರಕರಣ, 380 ಡಿಸ್ಚಾರ್ಜ್, 6 ಸಾವು
ರಾಜ್ಯದಲ್ಲಿ ಕೋವಿಡ್-19 ಏರಿಕೆ : 523 ಹೊಸ ಪ್ರಕರಣ, 380 ಡಿಸ್ಚಾರ್ಜ್, 6 ಸಾವು
ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ವಾರ್ಷಿಕೋತ್ಸವಕ್ಕಾಗಿ ಅದೇ ರೀತಿ ದಾಳಿ ನಡೆಸಿದ ವಾಯುಪಡೆ
ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ವಾರ್ಷಿಕೋತ್ಸವಕ್ಕಾಗಿ ಅದೇ ರೀತಿ ದಾಳಿ ನಡೆಸಿದ ವಾಯುಪಡೆ
ಸಾರ್ವಜನಿಕರ ಪ್ರವೇಶ ನಿಷೇಧಿತ ಕೆಆರ್​​ಎಸ್​​ ಹಿನ್ನೀರಿನಲ್ಲಿ ಪೊಲೀಸರಿಂದ ಮೋಜು,ಮಸ್ತಿ, ಭರ್ಜರಿ ಪಾರ್ಟಿ!
ಸಾರ್ವಜನಿಕರ ಪ್ರವೇಶ ನಿಷೇಧಿತ ಕೆಆರ್​​ಎಸ್​​ ಹಿನ್ನೀರಿನಲ್ಲಿ ಪೊಲೀಸರಿಂದ ಮೋಜು,ಮಸ್ತಿ, ಭರ್ಜರಿ ಪಾರ್ಟಿ!
ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಸಂಪಿ​ಗೆ ಬಿದ್ದು ಸಾವು
ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಸಂಪಿ​ಗೆ ಬಿದ್ದು ಸಾವು
ಹಾಡಹಗಲೇ ಚಿಕ್ಕಮಗಳೂರಲ್ಲಿ ದರೋಡೆ ಯತ್ನ!
ಹಾಡಹಗಲೇ ಚಿಕ್ಕಮಗಳೂರಲ್ಲಿ ದರೋಡೆ ಯತ್ನ!
ಕಾಶ್ಮೀರಿ ಪಂಡಿತರ ಧ್ವನಿ ಧಮನಕ್ಕೆ ಸುಪಾರಿ ನೀಡಿದ ಐಎಸ್ಐ, ಖಲಿಸ್ತಾನಿ
ಕಾಶ್ಮೀರಿ ಪಂಡಿತರ ಧ್ವನಿ ಧಮನಕ್ಕೆ ಸುಪಾರಿ ನೀಡಿದ ಐಎಸ್ಐ, ಖಲಿಸ್ತಾನಿ
ನ್ಯಾಯಾಲಯ ಆವರಣದಲ್ಲಿ ಮಚ್ಚಿನಿಂದ ಕೊಚ್ಚಿ ವಕೀಲನ ಬರ್ಬರ ಹತ್ಯೆ
ನ್ಯಾಯಾಲಯ ಆವರಣದಲ್ಲಿ ಮಚ್ಚಿನಿಂದ ಕೊಚ್ಚಿ ವಕೀಲನ ಬರ್ಬರ ಹತ್ಯೆ
ಪತ್ನಿ ಸತ್ತ 3 ತಿಂಗಳಿಗೆ ಮತ್ತೊಂದು ಮದ್ವೆ ಆಗಿ 9 ತಿಂಗಳ ಮಗುವಿನೊಂದಿಗೆ ತಂದೆ ಆತ್ಮಹತ್ಯೆ!
ಪತ್ನಿ ಸತ್ತ 3 ತಿಂಗಳಿಗೆ ಮತ್ತೊಂದು ಮದ್ವೆ ಆಗಿ 9 ತಿಂಗಳ ಮಗುವಿನೊಂದಿಗೆ ತಂದೆ ಆತ್ಮಹತ್ಯೆ!
ವಿದ್ಯಾರ್ಥಿಗಳ ಪಾಸ್‌ ಹೊರೆ ಇಳಿಸಿ: ಶಿಕ್ಷಣ ಸಚಿವರ ಸೂಚನೆ
ವಿದ್ಯಾರ್ಥಿಗಳ ಪಾಸ್‌ ಹೊರೆ ಇಳಿಸಿ: ಶಿಕ್ಷಣ ಸಚಿವರ ಸೂಚನೆ
ಕೆಆರ್​ಎಸ್​ ಡ್ಯಾಂ ಮೇಲೆ ನಿಷೇಧವಿದ್ದರೂ ಪೊಲೀಸ್​ ಜೀಪ್​ನಲ್ಲೇ ಡ್ಯಾಂ ಮೇಲೆ ಯುವಕನ ಜಾಲಿ ರೈಡ್​ : ವಿಡಿಯೋ ವೈರಲ್​
ಕೆಆರ್​ಎಸ್​ ಡ್ಯಾಂ ಮೇಲೆ ನಿಷೇಧವಿದ್ದರೂ ಪೊಲೀಸ್​ ಜೀಪ್​ನಲ್ಲೇ ಡ್ಯಾಂ ಮೇಲೆ ಯುವಕನ ಜಾಲಿ ರೈಡ್​ : ವಿಡಿಯೋ ವೈರಲ್​
ಗ್ಯಾಸ್ ಟ್ಯಾಂಕರ್- ಡೀಸೆಲ್ ಟ್ಯಾಂಕರ್ ನಡುವೆ ಡಿಕ್ಕಿ
ಗ್ಯಾಸ್ ಟ್ಯಾಂಕರ್- ಡೀಸೆಲ್ ಟ್ಯಾಂಕರ್ ನಡುವೆ ಡಿಕ್ಕಿ
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಕಟ್ಟಡದಿಂದ ಕೆಳಗೆ ಹಾರಿ ಸೂಸೈಡ್​!
ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಕಟ್ಟಡದಿಂದ ಕೆಳಗೆ ಹಾರಿ ಸೂಸೈಡ್​!

ನ್ಯೂಸ್ MORE NEWS...