ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂಸ್

18 Jun 2021
535

ಬೆಂಗಳೂರು : ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ರೇಣುಕಾಚಾರ್ಯ ಹೈದರಾಬಾದ್ಗೆ ಹೋಗಿದ್ದು ಮರೆತಿದ್ದಾರೆ. ನರ್ಸ್ ಜಯಲಕ್ಷ್ಮೀ ಪ್ರಕರಣ ರೇಣುಕಾಚಾರ್ಯ ಮರೆತಿದ್ದಾರೆ.

ತಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದ ರೇಣುಕಾಚಾರ್ಯಗೆ ತಿರುಗೇಟು ನೀಡಿದ ವಿಶ್ವನಾಥ್, ಸತ್ಯ ಹೇಳುವವರ ವಿರುದ್ಧ ಕ್ರಮ‌ ಆಗಬೇಕಾ? ನಾನು ಪ್ಯೂರ್ ಬಿಜೆಪಿ, ನೀನು ಮಿಕ್ಸ್ ಬಿಜೆಪಿ. ನೀನು ಕೆಜೆಪಿಯಿಂದ ಬಂದವನು. ನಿನ್ನ ನರ್ಸ್ ಜಯಲಕ್ಷ್ಮಿ ಕತೆ ಏನಾಯ್ತು? ಯಡಿಯೂರಪ್ಪ ವಿರುದ್ಧ ನೀನು ಹೈದರಾಬಾದ್‌ಗೆ ಹೋಗಿದ್ದೆ ಎಂದು ಆಕ್ರೋಶ ಹೊರಹಾಕಿದರು.

ಹರತಾಳು ಹಾಲಪ್ಪ ವಿರುದ್ದ ಕಿಡಿಕಾರಿದ ಅವರು, ಉಂಡ ಮನೆಗೆ ಮದ್ದು ಹಾಕುವೆ ಎನ್ನುತ್ತಾನೆ. ಗೆಳೆಯನ ಮನೆಗೆ ಊಟಕ್ಕೆ ಹೋಗಿ ಅತ್ಯಾಚಾರ ಮಾಡಲು ಹೋದವನು ನೀನು. ಅದರಿಂದ ಮಂತ್ರಿಗಿರಿ‌ ಕಳೆದುಕೊಂಡಿದ್ದೆ ನೀನು ಟಾಂಗ್ ನೀಡಿದರು.
ಹರತಾಳು ಹಾಲಪ್ಪ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ. ಅಲ್ಲಿ ಸ್ನೇಹಿತನ ಪತ್ನಿ ಮೇಲೆಯೇ ಅತ್ಯಾಚಾರ ಮಾಡಿದ್ದ. ನಾನು ಉಂಡ ಮನೆಗೆ ಮದ್ದು ಹಾಕುತ್ತೇನೆಂದು ಮಾತಾಡ್ತೀಯ. ಎಸ್.ಆರ್.ವಿಶ್ವನಾಥ್ ನನ್ನನ್ನು ಅರೆಹುಚ್ಚ ಎಂದಿದ್ದಾರೆ. ನನ್ನಂತಹ ಅರೆಹುಚ್ಚನಿಂದ ನೀನು ಬಿಡಿಎ ಅಧ್ಯಕ್ಷನಾಗಿದ್ದೀಯ? ಆಕ್ರೋಶ ಹೊರ ಹಾಕಿದ್ದಾರೆ.

ನಮ್ಮ ಪಕ್ಷದಲ್ಲಿ ಲಕ್ಷ್ಮಣ ರೇಖೆ ಇದೆ. 75 ವರ್ಷ ಮೀರಿದವರಿಗೆ ಆಡಳಿತ ವೇಗ ಇರುವುದಿಲ್ಲ, ವಯಸ್ಸು, ಆರೋಗ್ಯದಿಂದ ಯಡಿಯೂರಪ್ಪ ಬಳಲಿದ್ದಾರೆ. ಯಡಿಯೂರಪ್ಪ ಅವರಿಗೆ ಶಕ್ತಿ ಇತ್ತು. ಆದರೆ ಈಗ ಮೊದಲಿನ ಶಕ್ತಿಇಲ್ಲ. ಹಾಗಾಗಿ ಸರ್ಕಾರದಿಂದ ಆಗುತ್ತಿರುವ ಅನಾಹುತ ತಪ್ಪಿಸಬೇಕು, ಸರ್ಕಾರಕ್ಕೆ ಚಿಕಿತ್ಸೆ ನೀಡಬೇಕು. ಹೀಗಾಗಿ ನಾಯಕತ್ವ ವಿಚಾರವೇ ಅತ್ಯಂತ ಮುಖ್ಯ ಎಂದರು.

ನಾನು ನಿನ್ನೆ ಅರುಣ್ ಸಿಂಗ್ ಭೇಟಿ ಮಾಡಿದ್ದೆ. ಪಕ್ಷದ ರಾಜಕಾರಣ, ಆಡಳಿತ, ವ್ಯವಸ್ಥೆ ಇದರ ಬಗ್ಗೆ ಸವಿಸ್ತಾರವಾಗಿ ನಿವೇದನೆ ಮಾಡಿಕೊಂಡಿದ್ದೇನೆ. ಇದೇ ರೀತಿ ಹೋದರೆ ದುರಂತ ಅನುಭವಿಸಬೇಕಾಗುತ್ತದೆ. 2024ರ ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದೇನೆ ಎಂದರು.

ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ. ಇಲ್ಲಿಯೂ ಕುಟುಂಬ ರಾಜಕಾರಣ ನಿಲ್ಲಬೇಕು ಎಂದ ಅವರು, ಬಹುಪರಾಕ್ ಹಾಕುವ ಮನುಷ್ಯ ನಾನಲ್ಲ. ಏನು ಹೇಳಬೇಕು ಅದು ಹೇಳಿದ್ದೇನೆ. ಬಿಜೆಪಿ ಎಂಎಲ್‌ಸಿಯಾಗಿ ಸತ್ಯ ಹೇಳಬೇಕು, ಇಲ್ಲವಾದರೆ ಪಕ್ಷಕ್ಕೆ ವಂಚನೆ‌, ದ್ರೋಹ ಮಾಡಿದಂತೆ ಎಂದರು.

ಬಿ ಎಸ್ ಯಡಿಯೂರಪ್ಪನವರು ಈ ಹಿಂದೆ ತಮ್ಮ ಮಕ್ಕಳ ಭ್ರಷ್ಟಾಚಾರದಿಂದಲೇ ಜೈಲಿಗೆ ಹೋಗಿ ಬಂದರು, ಈ ಸಲ ಕೂಡ ಅವರು ಮತ್ತೆ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬರಬಹುದೇನೋ ಎಂಬ ಆತಂಕ ನನಗೆ, ಅದಕ್ಕೆ ಪಕ್ಷದ ಮತ್ತು ರಾಜ್ಯದ ಜನತೆಯ ಒಳಿತಿನ ಹಿತದೃಷ್ಟಿಯಿಂದ ಸರ್ಕಾರದಲ್ಲಿ ಆಗುತ್ತಿರುವ ಅಕ್ರಮಗಳನ್ನು ವರಿಷ್ಠರ ನಾಯಕರ ಗಮನಕ್ಕೆ ತರಲು ಪ್ರಯತ್ನ ಮಾಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ಹಿರಿಯ ನಾಯಕ ಹೆಚ್ ವಿಶ್ವನಾಥ್ ಮತ್ತೊಮ್ಮೆ ಗುಡುಗಿದ್ದಾರೆ.

ಇದು ಕೂಡ ಕುಟುಂಬ ರಾಜಕಾರಣದ ಗಿರಾಕಿ. ಈಶ್ವರಪ್ಪ ಯಾಕೆ ರಾಜ್ಯಪಾಲರ ಬಳಿ ಹೋಗಿದ್ದು? ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದೂರು ನೀಡಿಲ್ವಾ? ಈ ವಿಷಯ ಈಗ ಚರ್ಚೆಯಾಗುವುದಿಲ್ಲ. ಹೇಳುವಂತಹ ಧೈರ್ಯ ಯಾರಿಗೂ ಇಲ್ಲ ಎಂದರು.

ತರಾತುರಿಯಲ್ಲಿ ಟೆಂಡರ್ ಕರೆದು ಅಂಗೀಕರಿಸಿದ್ದಾರೆ. 20 ಸಾವಿರ ಕೋಟಿ ರೂ. ಟೆಂಡರ್ನಲ್ಲಿ ಅಕ್ರಮ ಆಗಿದೆ. ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಎಲ್ಲ ಕಡೆ ಹಸ್ತಕ್ಷೇಪ ಮಾಡ್ತಿದೆ. ಎಲ್ಲ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಬಗ್ಗೆ ರಾಜ್ಯಕ್ಕೇ ಗೊತ್ತಿದೆ. ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವೂ ಇದೆ.

ಬಿ ವೈ ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವಿದೆ, ಹಾಗಾಗಿ ಆಗಾಗ ದೆಹಲಿಗೆ ಹೋಗಿ ಬರುತ್ತಿದ್ದಾರೆ. ಬಿಜೆಪಿ ಯಾವುದೇ ಕುಟುಂಬದ ಪಾರ್ಟಿಯಲ್ಲ, ಸರ್ಕಾರ ಯಾರ ಆಸ್ತಿಯೂ ಅಲ್ಲ, ಇದು ಜನರದ್ದು ಎಂದರು. ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ವಿಶ್ವನಾಥ್, ಆ ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡಿದರು.

1400 ಕೋಟಿ ನನ್ನ ಇಲಾಖೆಯ ಹಣ ಬಿಡುಗಡೆ ಮಾಡಿದ್ದಾರೆ. ನನ್ನ ಸಹಿ ಇಲ್ಲದೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಈಶ್ವರಪ್ಪ ದೂರು ನೀಡಿದ್ದಾರೆ. ಈಶ್ವರಪ್ಪ ಒಬ್ಬರು ಮಾತ್ರ ದೈರ್ಯ ಮಾಡಿ ದೂರು ಕೊಟ್ಟರು. ಬೇರೆ ಯಾವ ಸಚಿವರೂ ಸಹ ದೂರು ಕೊಡಲು ಹೋಗ್ತಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಜಿಂದಾಲ್ಗೆ ಭೂಮಿ ಪರಭಾರೆ ಬಗ್ಗೆ ದನಿ ಎತ್ತಿದ್ದೇ ನಾನು. ಸಿದ್ದರಾಮಯ್ಯ, ಕುಮಾರಸ್ವಾಮಿ ಏನು ಬಾಯಿಬಿಟ್ಟಿದ್ದರಾ? ಕಿಕ್‌ಬ್ಯಾಕ್ ಪಡೆದು ಎಲ್ಲರೂ ಸುಮ್ಮನಾಗಿದ್ದಾರೆ. ಇಲ್ಲಿ ಮೂರೂ ಪಕ್ಷಗಳು ಅಧಿಕಾರ ನಡೆಸುತ್ತಿವೆ ಇದು ಸತ್ಯ. ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದು ಸತ್ಯ ಎಂದರು. ಶೇ.80ರಷ್ಟು ಶಾಸಕರು ನಾಯಕತ್ವ ಬದಲಾವಣೆ ಕೇಳಿದ್ದಾರೆ. ಅರುಣ್ ಸಿಂಗ್ ಬಳಿ ಒಳಗೆ ಮಾತನಾಡಿರುವುದೇ ಬೇರೆ. ಹೊರ ಬಂದ ಬಳಿಕ ಹೇಳಿಕೆ ನೀಡೋದೇ ಬೇರೆ ಆಗಿರುತ್ತೆ. ಬಹುತೇಕರು ನಾಯಕತ್ವ ಬದಲಾವಣೆ ಬೇಕೆಂದು ಹೇಳಿದ್ದಾರೆ.

RELATED TOPICS:
English summary :H vishwanath

ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಆರನೇ ಪದಕ : ಕುಸ್ತಿಯಲ್ಲಿ ರವಿಕುಮಾರ್ ದಹಿಯಾಗೆ ಬೆಳ್ಳಿ | ಜನತಾ ನ್ಯೂ&#
ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಆರನೇ ಪದಕ : ಕುಸ್ತಿಯಲ್ಲಿ ರವಿಕುಮಾರ್ ದಹಿಯಾಗೆ ಬೆಳ್ಳಿ | ಜನತಾ ನ್ಯೂ&#
ಟಿಎಂಸಿ ತನ್ನ ಬಂಗಾಳ ಮಾದರಿಯನ್ನು ರಾಜ್ಯಸಭೆಗೆ ತಂದಿದೆ - ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ | ಜನತಾ ನ್ಯೂ&#
ಟಿಎಂಸಿ ತನ್ನ ಬಂಗಾಳ ಮಾದರಿಯನ್ನು ರಾಜ್ಯಸಭೆಗೆ ತಂದಿದೆ - ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ | ಜನತಾ ನ್ಯೂ&#
ಜಮೀರ್ ನಿವಾಸದ ಮೇಲೆ ಐಟಿ ದಾಳಿ:  ಸಿಎಂ ಬೊಮ್ಮಾಯಿ ಅವರ ಪ್ರತಿಕ್ರಿಯೆ | ಜನತಾ ನ್ಯೂ&#
ಜಮೀರ್ ನಿವಾಸದ ಮೇಲೆ ಐಟಿ ದಾಳಿ: ಸಿಎಂ ಬೊಮ್ಮಾಯಿ ಅವರ ಪ್ರತಿಕ್ರಿಯೆ | ಜನತಾ ನ್ಯೂ&#
ಪ್ರೀತಿಸಿ ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ! | ಜನತಾ ನ್ಯೂ&#
ಪ್ರೀತಿಸಿ ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ! | ಜನತಾ ನ್ಯೂ&#
ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಕಲಬುರಗಿ ಯೋಧ ಹುತಾತ್ಮ:  ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | ಜನತಾ ನ್ಯೂ&#
ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಕಲಬುರಗಿ ಯೋಧ ಹುತಾತ್ಮ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | ಜನತಾ ನ್ಯೂ&#
ರಾಜ್ಯದಲ್ಲಿ ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಈಶ್ವರಪ್ಪ | ಜನತಾ ನ್ಯೂ&#
ರಾಜ್ಯದಲ್ಲಿ ಈ ಜನ್ಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಈಶ್ವರಪ್ಪ | ಜನತಾ ನ್ಯೂ&#
ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಬ್ರಿಟಿಷ್ ಹೈಕಮಿಷನರ್: ವಿವಿಧ ಕ್ಷೇತ್ರಗಳ ಪರಸ್ಪರ ಸಹಕಾರ! | ಜನತಾ ನ್ಯೂ&#
ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಬ್ರಿಟಿಷ್ ಹೈಕಮಿಷನರ್: ವಿವಿಧ ಕ್ಷೇತ್ರಗಳ ಪರಸ್ಪರ ಸಹಕಾರ! | ಜನತಾ ನ್ಯೂ&#
ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು? | ಜನತಾ ನ್ಯೂ&#
ಬಿಜೆಪಿ ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಾಗ ಐಟಿ, ಇಡಿ ಎಲ್ಲಿದ್ದವು? | ಜನತಾ ನ್ಯೂ&#
ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿರುವೆ. ನನಗೂ ಒಳ್ಳೆಯ ಟೈಂ ಬರುತ್ತೆ | ಜನತಾ ನ್ಯೂ&#
ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿರುವೆ. ನನಗೂ ಒಳ್ಳೆಯ ಟೈಂ ಬರುತ್ತೆ | ಜನತಾ ನ್ಯೂ&#
ಕೊಳ್ಳೇಗಾಲ ಶಾಸಕ ಎನ್‌.ಮಹೇಶ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ | ಜನತಾ ನ್ಯೂ&#
ಕೊಳ್ಳೇಗಾಲ ಶಾಸಕ ಎನ್‌.ಮಹೇಶ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ | ಜನತಾ ನ್ಯೂ&#
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ. ವಿತರಿಸಿದ ಸಚಿವ ಸುಧಾಕರ್ | ಜನತಾ ನ್ಯೂ&#
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ. ವಿತರಿಸಿದ ಸಚಿವ ಸುಧಾಕರ್ | ಜನತಾ ನ್ಯೂ&#
ಶಾಸಕ ಝಮೀರ್ ಅಹ್ಮದ್ ಖಾನ್ ನಿವಾಸದ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸಂಸದ ಡಿ.ಕೆ.ಸುರೇಶ್ | ಜನತಾ ನ್ಯೂ&#
ಶಾಸಕ ಝಮೀರ್ ಅಹ್ಮದ್ ಖಾನ್ ನಿವಾಸದ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಸಂಸದ ಡಿ.ಕೆ.ಸುರೇಶ್ | ಜನತಾ ನ್ಯೂ&#

ನ್ಯೂಸ್ MORE NEWS...