ಸ್ಫೋಟಕ ತುಂಬಿದ್ದ ಕಾರು ಮುಕೇಶ್ ಅಂಬಾನಿ ಮನೆ ಮುಂದೆ ಪತ್ತೆಯಾಗಿದ್ದ ಕಾರು ಮಾಲೀಕ ನಿಗೂಢವಾಗಿ ಸಾವು! | Janata news

ಮುಂಬೈ : ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾಗಿ ಆತಂಕ ಮೂಡಿಸಿತ್ತು. ಈ ಪ್ರಕರಣ ಈಗ ತಿರುವು ಪಡೆದುಕೊಂಡಿದ್ದು ಕಾರಿನ ಮಾಲೀಕನ ಶವ ಪತ್ತೆಯಾಗಿದೆ.
ಈ ಕಾರಿನಲ್ಲಿ ಜಿಲೆಟಿನ್ ಕಡ್ಡಿಯೊಂದಿಗೆ ಬೆದರಿಕೆ ಪತ್ರ ಕೂಡ ಕಾರಿನಲ್ಲಿದ್ದವು. ಜೈಶ್ ಉಲ್ ಹಿಂದ್ ಉಗ್ರ ಸಂಘಟನೆ ಇದರ ಹೊಣೆ ಹೊತ್ತುಕೊಂಡಿದ್ದು ಪತ್ರವೊಂದನ್ನು ಪ್ರಕಟಿಸಿರುವುದಾಗಿ ವರದಿಯಾಗಿತ್ತು. ಇದರ ಬೆನ್ನತ್ತಿದ ಪೊಲೀಸರಿಗೆ ತನಿಖೆ ವೇಳೆ ಸಂಘಟನೆಯ ಪತ್ರವೇ ನಕಲಿ ಎಂದು ಗೊತ್ತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಇದೀಗ ಆಘಾತಕಾರಿ ಬೆಳವಣಿಗೆ ನಡೆದಿದ್ದು, ಸ್ಕಾರ್ಪಿಯೋ ಕಾರ್ ಮಾಲೀಕ ಶವವಾಗಿ ಪತ್ತೆಯಾಗಿದ್ದಾನೆ.
ಕಾರು ಮಾಲೀಕ ಮನ್ಸುಕ ಹಿರೆನ್ ಶವ ಥಾಣೆಯ ರೈಲ್ವೇ ಕ್ರಿಕ್ ಬಳಿ ಪತ್ತೆಯಾಗಿದೆ. ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

English summary :The owner of the Scorpio vehicle that abandoned with stockpiled gelatine sticks near Antillia residence of India s richest man Mukesh Ambani has committed suicide. His name is Mansukh Hiren from Mankhurd.