ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂಸ್

24 Nov 2021
655

ಬೆಂಗಳೂರು : ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದರೆ ಅಂಬರೀಶ್​ಗೂ ಸಿಕ್ಕಿದಂಗೆ ಅನ್ನೋದು ನನ್ನ ಅಭಿಪ್ರಾಯ. ಅದರಲ್ಲಿ ಯಾವುದೇ ಭೇದಭಾವ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇಂದು ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯತಿಥಿ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಅವರು ಮಾತನಾಡಿ, ಅಂಬರೀಶ್ ಇಲ್ಲವಾಗಿ 3 ವರ್ಷವಾಗಿದೆ. ಅವರ ಹೆಸರಲ್ಲಿ ಏನೂ ಮಾಡಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ. ಸ್ಮಾರಕ ಸೇರಿ ಎಲ್ಲೂ ಅಂಬರೀಶ್ ಅವರ ಹೆಸರು ಕೇಳಿಬಂದಿಲ್ಲ ಎಂದು ಅಭಿಮಾನಿಗಳ ಬೇಸರದ ಬಗ್ಗೆ ಹೇಳಿದರು.

ಈ ವೇಳೆ ಅಂಬರೀಶ್​​ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ​ ವಿಚಾರವಾಗಿ ಮಾತನಾಡಿದ ಸಂಸದೆ​, ಪುನೀತ್​ಗೆ ಸಿಕ್ಕ ಗೌರವ ಅಂಬರೀಶ್​ ಅವ್ರಿಗೂ ಸಿಗುತ್ತೆ, ನನಗೆ ನಂಬಿಕೆ ಇದೆ ಎಂದು ಹೇಳಿದರು.

ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದರೆ ಅಂಬರೀಶ್​ಗೂ ಸಿಕ್ಕಂತೆಯೇ. ಅಂಬರೀಶ್​ ಅವರಿಗೆ ಏನು ಗೌರವ ಸಿಗಬೇಕಿತ್ತೋ ಅದು ಸಿಕ್ಕೇ ಸಿಕ್ಕುತ್ತೆ ಎಂಬ ಭರವಸೆ ಇದೆ. ಅದು ಆಗಲೇ ಸಿಕ್ಕಿದೆ. ಅದು ಜನರ ಪ್ರೀತಿ, ಅದೇ ದೊಡ್ಡ ಪ್ರಶಸ್ತಿ. ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂಗೆ ಅನ್ನೋದು ನನ್ನ ಅಭಿಪ್ರಾಯ. ಅದರಲ್ಲಿ ಯಾವುದೇ ಭೇದಭಾವ ಇಲ್ಲ.

ಒಂದು ವೇಳೆ ಅಂಬರೀಶ್​ ಈಗ ಇದ್ದಿದ್ರೆ ಅವ್ರಿಗೆ ಸಿಗೋದ್ಕಿಂತ ಅಪ್ಪುಗೆ ಪ್ರಶಸ್ತಿ ಕೊಟ್ಟಿರೋದಕ್ಕೆ ಅವರು ಹೆಮ್ಮೆ ಪಡುತ್ತಿದ್ದರು, ಸಂತೋಷ ಪಡುತ್ತಿದ್ದರು ಎಂದು ಸುಮಲತಾ ಅಂಬರೀಶ್​ ಹೇಳಿದರು. ಅಭಿಮಾನಿಗಳು ಕೂಡ ಇದೇ ರೀತಿಯ ಭಾವನೆಗಳನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಎಂದರು.

RELATED TOPICS:
English summary :Sumalatha Ambarish

ಪಂಜಾಬ್ ಸಿಎಂ ಸಂಬಂಧಿಕನ ಮನೆಯಿಂದ ಇಲ್ಲಿಯವರೆಗೆ 10 ಕೋಟಿ ರೂ. ಜಪ್ತಿ ಮಾಡಿದ ಇಡಿ | ಜನತಾ ನ್ಯೂ&#
ಪಂಜಾಬ್ ಸಿಎಂ ಸಂಬಂಧಿಕನ ಮನೆಯಿಂದ ಇಲ್ಲಿಯವರೆಗೆ 10 ಕೋಟಿ ರೂ. ಜಪ್ತಿ ಮಾಡಿದ ಇಡಿ | ಜನತಾ ನ್ಯೂ&#
ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂ&#
ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂ&#
ಮಾದಕ ವಸ್ತು ಮಾರಾಟ: ಓರ್ವ ನೈಜೀರಿಯ ಪ್ರಜೆ ಸೀರಿ 4 ಆರೋಪಿಗಳ ಬಂಧನ | ಜನತಾ ನ್ಯೂ&#
ಮಾದಕ ವಸ್ತು ಮಾರಾಟ: ಓರ್ವ ನೈಜೀರಿಯ ಪ್ರಜೆ ಸೀರಿ 4 ಆರೋಪಿಗಳ ಬಂಧನ | ಜನತಾ ನ್ಯೂ&#
ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ: ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು | ಜನತಾ ನ್ಯೂ&#
ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ: ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು | ಜನತಾ ನ್ಯೂ&#
ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು? | ಜನತಾ ನ್ಯೂ&#
ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು? | ಜನತಾ ನ್ಯೂ&#
ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂ&#
ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂ&#
ಮದ್ವೆ ನಂತರವೂ ಸಂಬಂಧಿಯೊಂದಿಗೆ ಪ್ರೀತಿ, ಪ್ರೇಮಿಗಳಿಬ್ಬರು ನೇಣಿಗೆ ಶರಣು   | ಜನತಾ ನ್ಯೂ&#
ಮದ್ವೆ ನಂತರವೂ ಸಂಬಂಧಿಯೊಂದಿಗೆ ಪ್ರೀತಿ, ಪ್ರೇಮಿಗಳಿಬ್ಬರು ನೇಣಿಗೆ ಶರಣು | ಜನತಾ ನ್ಯೂ&#
ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ | ಜನತಾ ನ್ಯೂ&#
ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ | ಜನತಾ ನ್ಯೂ&#
ಶ್ರೀರಂಗಪಟ್ಟಣದ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ ಎಂದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ | ಜನತಾ ನ್ಯೂ&#
ಶ್ರೀರಂಗಪಟ್ಟಣದ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ ಎಂದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ | ಜನತಾ ನ್ಯೂ&#
ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂ&#
ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂ&#
ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂ&#
ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂ&#
ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | ಜನತಾ ನ್ಯೂ&#
ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | ಜನತಾ ನ್ಯೂ&#

ನ್ಯೂಸ್ MORE NEWS...