Thu,Sep29,2022
ಕನ್ನಡ / English

ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ, ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ! | JANATA NEWS

11 Aug 2022
512

ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಾವ ಸಂಘ-ಸಂಸ್ಥೆಗಳಿಗೂ ಧ್ವಜಾರೋಹಣಕ್ಕೆ ಅವಕಾಶವಿಲ್ಲ. ಸ್ಥಳೀಯ ಶಾಸಕ ಜಮೀರ್ ಅಹ್ಮದ್​​ಗೂ ಅವಕಾಶವಿರುವುದಿಲ್ಲ. ಸರ್ಕಾರದಿಂದಲೇ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ, ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ ನಡೆಯಲಿದೆ, ಬೇರೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕಂದಾಯ ಸಚಿವ ಅಶೋಕ್ ಘೋಷಣೆ ಮಾಡಿದ್ದಾರೆ.

ವಿವಾದಿತ ಚಾಮರಾಜಪೇಟೆ ಆಟದ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತೆ. ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ. ಈ ಸ್ವತ್ತು ಕಂದಾಯ ಇಲಾಖೆಯದ್ದು ಆಗಿರುವುದರಿಂದ ಕಂದಾಯ ಇಲಾಖೆ ವತಿಯಿಂದಲೇ ರಾಷ್ಟ್ರಧ್ವಜಾರೋಹಣ ಮಾಡಲಾಗುತ್ತೆ ಎಂದು ಸಚಿವ ಆರ್​.ಅಶೋಕ್​ ಹೇಳಿದರು.

ಚಾಮರಾಜಪೇಟೆ ಮೈದಾನದಲ್ಲಿ ಭಾರತ ಮಾತಾಕೀ ಜೈ, ವಂದೇ ಮಾತರಂ, ಸ್ವಾತಂತ್ರ್ಯ ಯೋಧರ ಹೆಸರು ಘೋಷಣೆ ಮಾತ್ರ ಕೂಗಬೇಕು. ಇದರ ಹೊರತಾಗಿ ಬೇರೆ ಏನನ್ನೂ ಘೋಷಣೆ ಹಾಕುವಂತಿಲ್ಲ ಎಂದು ಸೂಚಿಸಿದರು. ಯಾವುದೇ ಧಾರ್ಮಿಕ ಘೋಷಣೆ ಹಾಕುವಂತಿಲ್ಲ ಎಂದ ಅಶೋಕ್​, ವೇದಿಕೆ ಮೇಲೆ ಚುನಾಯಿತ ಪ್ರತಿನಿಧಗಳು ಇರುತ್ತಾರೆ. ಯಾವುದೇ ಸಂಘಟನೆಗಳಿಗೆ ವೇದಿಕೆಗೆ ಅವಕಾಶ ಇಲ್ಲ ಎಂದರು.

ಬೆಂಗಳೂರಿನ ಉತ್ತರ ತಾಲ್ಲೂಕಿನ ಸಹಾಯಕ ಆಯುಕ್ತರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ರಾಷ್ಟ್ರಧ್ವಜದ ನೀತಿ ನಿಯಮಗಳಡಿ ಎಲ್ಲರೂ ಭಾಗವಹಿಸಬಹುದು. ಈದ್ಗಾ ಮೈದಾನ ಅಂತಾ ಇನ್ಮುಂದೆ ಇರುವುದಿಲ್ಲ. ಅದು ಗುಟ್ಟಹಳ್ಳಿ, ಚಾಮರಾಜಪೇಟೆ ಕಂದಾಯ ಇಲಾಖೆ ಅಂತಾ ಇರಲಿದೆ. ಸದ್ಯ ಕಂದಾಯ ಇಲಾಖೆಗೆ ಆ ಸ್ವತ್ತು ಸೇರಿದೆ. ಹೀಗಾಗಿ ಅದನ್ನ ಮುಂದೆ ಬಿಬಿಎಂಪಿಗೆ ಕೊಡಬೇಕಾ, ಬಿಡಿಎಗೆ ಕೊಡಬೇಕಾ ಅಥವಾ ಕಂದಾಯ ಇಲಾಖೆಯಲ್ಲೇ ಉಳಿಸಿಕೊಳ್ಳಬೇಕಾ ಅನ್ನೋದನ್ನ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದೂ ಆರ್. ಅಶೋಕ್ ಹೇಳಿದ್ದಾರೆ.

RELATED TOPICS:
English summary :Flag hoisting by the government itself at Chamarajpet Maidan

ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ
ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ
ಕಾಂಗ್ರೆಸ್ ಗೆ ಪಿಎಫ್‌ಐ ನಿಷೇಧ ಒಳಗೊಳಗೆ ಕುದಿಯುತ್ತಿದೆ, ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ
ಕಾಂಗ್ರೆಸ್ ಗೆ ಪಿಎಫ್‌ಐ ನಿಷೇಧ ಒಳಗೊಳಗೆ ಕುದಿಯುತ್ತಿದೆ, ವಿರೋಧಕ್ಕೆ ಸಾಧ್ಯವಾಗದೆ ಆರ್ ಎಸ್‌ಎಸ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ
ಸಿದ್ದರಾಮಯ್ಯಗೆ ತಲೆಕೆಟ್ಟಿದೆ,  ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು!
ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು!
ಪಿಎಫ್‌ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ಪಿಎಫ್‌ಐ ಪರವಾಗಿ ಯಾರೇ ಧ್ವನಿ ಎತ್ತಿದರೂ ಕಾನೂನು ಕ್ರಮ: ಆರಗ ಜ್ಞಾನೇಂದ್ರ
ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ
ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ
ಸಿಬಿಐ ರೇಡ್: ಗೇಟ್​ಗೆ ಬೀಗ, ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಕುಳಿತ ಡಿಕೆ ಶಿವಕುಮಾರ್ ತಾಯಿ!
ಸಿಬಿಐ ರೇಡ್: ಗೇಟ್​ಗೆ ಬೀಗ, ಮನೆಯ ಹೊರಾಂಗಣದಲ್ಲಿ ಪತ್ರಿಕೆ ಓದುತ್ತಾ ಕುಳಿತ ಡಿಕೆ ಶಿವಕುಮಾರ್ ತಾಯಿ!
ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಫ್ಲೆಕ್ಸ್​ಗಳಿಗೆ ಹರಿದ ಕಿಡಿಗೇಡಿಗಳು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಭಾರತ್ ಜೋಡೋ ಯಾತ್ರೆಯ ಕಾಂಗ್ರೆಸ್ ಫ್ಲೆಕ್ಸ್​ಗಳಿಗೆ ಹರಿದ ಕಿಡಿಗೇಡಿಗಳು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಎಸ್​ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಎಸ್​ಡಿಪಿಐ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ
ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಪೋಟ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಸ್ಪೋಟ
ಜಮ್ಮು ಮತ್ತು ಕಾಶ್ಮೀರದಲ್ಲಿ 2 ಸ್ಪೋಟ : ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಸ್ಪೋಟ
ನೂತನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆ. ಜನರಲ್ ಅನಿಲ್ ಚೌಹಾಣ್ ನೇಮಕ
ನೂತನ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆ. ಜನರಲ್ ಅನಿಲ್ ಚೌಹಾಣ್ ನೇಮಕ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧಿಸಿದ ಕೇಂದ್ರ ಸರ್ಕಾರ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಿಷೇಧಿಸಿದ ಕೇಂದ್ರ ಸರ್ಕಾರ
ಅಮೇರಿಕ ವೀಸಾ ವಿಳಂಬದ ಕುರಿತು ಪ್ರಸ್ತಾಪಿಸಿದ ವಿದೇಶಾಂಗ ಸಚಿವ : ಶೀಘ್ರದಲ್ಲೇ ಸರಿಪಡಿಸುವ ಆಶ್ವಾಸನೆ ನೀಡಿದ ಅಮೇರಿಕ
ಅಮೇರಿಕ ವೀಸಾ ವಿಳಂಬದ ಕುರಿತು ಪ್ರಸ್ತಾಪಿಸಿದ ವಿದೇಶಾಂಗ ಸಚಿವ : ಶೀಘ್ರದಲ್ಲೇ ಸರಿಪಡಿಸುವ ಆಶ್ವಾಸನೆ ನೀಡಿದ ಅಮೇರಿಕ

ನ್ಯೂಸ್ MORE NEWS...