ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು | JANATA NEWS

ವಿಜಯಪುರ : ಜಮೀನಿಗೆ ನೀರು ಬಿಡಲು ಹೋದಾಗ ಕಾಲುವೆಗೆ ಕಾಲು ಜಾರಿಬಿದ್ದು ರೈತರು ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಕೊಲ್ಹಾರ ತಾಲೂಕಿನ ಗ್ರಾಮದ ಬಳಿ ಕಾಲುಜಾರಿ ಕಾಲುವೆಗೆ ಬಿದ್ದು ಚಂದ್ರಶೇಖರ ಡೆಂಗಿ(55), ಅಶೋಕ ಅಂಗಡಗೇರಿ(45) ಎಂಬ ಇಬ್ಬರು ರೈತರು ಸಾವನ್ನಪ್ಪಿದ್ದಾರೆ.
ತಮ್ಮ ಜಮೀನಿಗೆ ನೀರು ಹಾಯಿಸಲು ಪಂಪ್ಸೆಟ್ ಆನ್ ಮಾಡಲು ಹೋದಾಗ ಕಾಲು ಜಾರಿ ಕಾಲುವಿಗೆ ಬಿದ್ದಿದ್ದಾರೆ ಎನ್ನಲಾಗಿದೆ
ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿ ಮೃತದೇಹ ಹೊರತೆಗಿದಿದ್ದಾರೆ. ಎರಡೂ ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Two farmers died after falling into the canal