ಟ್ಯೂಶನ್ಗೆ ತೆರಳಿದ್ದ ಬಾಲಕಿಯ ಮೃತದೇಹ ಸಂಪ್ನಲ್ಲಿ ಪತ್ತೆ, ಅತ್ಯಾಚಾರ, ಕೊಲೆ ಶಂಕೆ! | JANATA NEWS
ಮಂಡ್ಯ : ಟ್ಯೂಶನ್ಗೆಂದು ತೆರಳಿದ್ದ 10 ವರ್ಷದ ವಿದ್ಯಾರ್ಥಿನಿಯ ಶವ ನೀರಿನ ಸಂಪಿನಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.
10 ವರ್ಷದ ಬಾಲಕಿ ನಿನ್ನೆ ಮಧ್ಯಾಹ್ನ ಟ್ಯೂಷನ್ ಗಾಗಿ ಮನೆಯಿಂದ ತೆರಳಿದ್ದಳು. ಆದರೆ ಸಂಜೆಯಾದರೂ ಬಾಲಕಿ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಬಳಿಕ ಮಳವಳ್ಳಿ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದರು.
ಈ ವೇಳೆ ಬಾಲಕಿಯ ಮೃತದೇಹ ಟ್ಯೂಷನ್ ನಡೆಸುತ್ತಿದ್ದ ನಿವಾಸದ ಹಿಂಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಮನೆಯ ಸಂಪಿನಲ್ಲಿ ಪತ್ತೆಯಾಗಿದೆ. ಕುಟುಂಬಸ್ಥರ ಆಕ್ರಂದನದಲ್ಲಿ ಮುಗಿಲು ಮುಟ್ಟಿದೆ.
ಮನೆಯ ಮಾಲೀಕರು ನೀರಿನ ಸೆಂಪಿನೊಳಗೆ ಬಾಲಕಿಯ ಶವ ಇರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತು ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.