ಕನ್ನಡ / English

ಮಹಿಳೆಗೆ ಕಪಾಳಮೋಕ್ಷ ಪ್ರಕರಣ: ಕ್ಷಮೆಯಾಚಿಸಿದ ಸೋಮಣ್ಣ | JANATA NEWS

23 Oct 2022
8462

ಚಾಮರಾಜನಗರ : ಮಹಿಳೆಗೆ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ ಕ್ಷಮೆ ಯಾಚಿಸಿದ್ದಾರೆ.

45 ವರ್ಷ ಹಲವು ಏಳುಬೀಳು ಕಂಡಿದ್ದೇನೆ. ನಿನ್ನೆಯ ಕಾರ್ಯಕ್ರಮದಲ್ಲಿ ಸಣ್ಣ ಅಪಚಾರವನ್ನು ಮಾಡಿಲ್ಲ. ಪ್ರಾಯಶಃ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದಾರೆ ಕ್ಷಮೆ ಯಾಚಿಸುತ್ತೇನೆ, ವಿಷಾದ ವ್ಯಕ್ತಪಡಿಸುತ್ತೇನೆ. ನಿನ್ನೆಯ ಘಟನೆ ಘಟನೆಯೇ ಅಲ್ಲ ಎಂದು ಹೇಳಿದರು.

ನಿನ್ನೆ ನಡೆದ ಘಟನೆ ಘಟನೆಯೇ ಅಲ್ಲ. ಆ ಹೆಣ್ಣು ಮಗಳು ಪದೇ ಪದೇ ವೇದಿಕೆ ಮೇಲೆ ಬರ್ತಾ ಇದ್ದಳು, ತಾಯಿ ಎಷ್ಟು ಸಾರಿ ಬರ್ತೀಯಾ ಅಂತ ವಿಚಾರಿಸಿದೆ. ನಿನ್ನ ಸಮಸ್ಯೆ ಬಗೆಹರಿಸ್ತೇನೆ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದ್ದೇನೆ. ಅಷ್ಟೇ ವಿನಃ ನನಗೆ ಆಕೆಯನ್ನು ಹೊಡೆಯಬೇಕು ಎನ್ನುವ ಉದ್ದೇಶ ಇರಲಿಲ್ಲ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.

ಹೆಣ್ಣು ಮಕ್ಕಳ ಬಗ್ಗೆ ಅಪಾರವಾದ ಗೌರವ, ಮಮಕಾರ ಇದೆ. ನಾನು ಕೂಡ ಬಡತನದಿಂದಲೇ ಬಂದವನು. ಆ ಹೆಣ್ಣು ಮಗಳಿಗೆ ಸಹ ಹಕ್ಕು ಪತ್ರ ಕೊಡಿಸಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸಚಿವರು ತಿಳಿಸಿದರು.

ಮಹಿಳೆಗೆ ಒತ್ತಡ ಹೇರಿ ಹೇಳಿಕೆ ಕೊಡಿಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸೋಮಣ್ಣ, ಅದರ ಅವಶ್ಯಕತೆ ನನಗೆ ಇಲ್ಲ. ಆ ರೀತಿ ಜೀವನ ಮಾಡಿಲ್ಲ. ಈ ಸೋಮಣ್ಣ ಯಾವತ್ತು ಕ್ಷುಲ್ಲಕ ಕೆಲಸ ಮಾಡಿಲ್ಲ. ಸೋಮಣ್ಣ ಸೋಮಣ್ಣ ಆಗಿಯೇ ಇದ್ದೇನೆ ಎಂದರು.

ಸಂಸ್ಕಾರಯುತವಾಗಿ ಜೀವನ ಮಾಡಿದ್ದೇನೆ. ನನಗೆ ಹೆಣ್ಣು ಮಕ್ಕಳು ತಾಯಿಂದಿರ ಸಮಾನ. ಇಷ್ಟೊಂದು ಜನ ನನ್ನ ಕಾರ್ಯ ವೈಖರಿಯನ್ನು ವಿರೋಧಿಸ್ತಾರೆ ಅಂತ ದೇವರಾಣೆಗೂ ಗೊತ್ತಿರಲಿಲ್ಲ. ನನ್ನ ಪತ್ನಿ ಬಿಟ್ಟರೆ ಉಳಿದ ಹೆಣ್ಣು ಮಕ್ಕಳೆಲ್ಲಾ ಸಹೋದರಿಯರು, ತಾಯಿಂದಿರ ಸಮಾನ. ನನ್ನಿಂದ ಯಾರಿಗಾದರು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸ್ತೀನಿ ಎಂದು ಎರಡೆರಡು ಬಾರಿ ಸಚಿವರು ಕ್ಷಮೆ ಕೇಳಿದ್ದಾರೆ.

RELATED TOPICS:
English summary :Woman slapped case: Somanna apologizes

ವಿದ್ಯಾರ್ಥಿಗಳ ಸುರಕ್ಷತೆಯ ಕಾಳಜಿಯ ಮೇಲೆ ಪಿಜಿಗಳು, ಹಾಸ್ಟೆಲ್‌ಗಳ ಆಡಿಟ್ ಗೆ ದೆಹಲಿ ಹೈಕೋರ್ಟ್ ಆದೇಶ
ವಿದ್ಯಾರ್ಥಿಗಳ ಸುರಕ್ಷತೆಯ ಕಾಳಜಿಯ ಮೇಲೆ ಪಿಜಿಗಳು, ಹಾಸ್ಟೆಲ್‌ಗಳ ಆಡಿಟ್ ಗೆ ದೆಹಲಿ ಹೈಕೋರ್ಟ್ ಆದೇಶ
ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ: ವಿದ್ಯಾರ್ಥಿಗಳು ಸಿಲುಕಿರುವ ಶಂಕೆ, ಭರದಿಂದ ಸಾಗಿದೆ ರಕ್ಷಣಾ ಕಾರ್ಯಾಚರಣೆ
ಸತ್ಯ ನಿಕೇತನದಲ್ಲಿ ಕಟ್ಟಡ ಕುಸಿತ: ವಿದ್ಯಾರ್ಥಿಗಳು ಸಿಲುಕಿರುವ ಶಂಕೆ, ಭರದಿಂದ ಸಾಗಿದೆ ರಕ್ಷಣಾ ಕಾರ್ಯಾಚರಣೆ
ಶಿಕ್ಷಣ ಸುಧಾರಣೆಗಳು ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡುವ ಉಪಕ್ರಮಗಳಿಗೆ ಕರ್ನಾಟಕ ಒತ್ತು ನೀಡಲಿದೆ: ಸಿಎಂ ಡಿಕೆಎಸ್
ಶಿಕ್ಷಣ ಸುಧಾರಣೆಗಳು ಮತ್ತು ವಿದೇಶದಲ್ಲಿ ವ್ಯಾಸಂಗ ಮಾಡುವ ಉಪಕ್ರಮಗಳಿಗೆ ಕರ್ನಾಟಕ ಒತ್ತು ನೀಡಲಿದೆ: ಸಿಎಂ ಡಿಕೆಎಸ್
ಇಟಲಿಯ ಅತಿ ದೀರ್ಘಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೆಲೋನಿ ಗೆ  ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಇಟಲಿಯ ಅತಿ ದೀರ್ಘಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೆಲೋನಿ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಶಾಂತಿ ಪ್ರಯತ್ನಗಳಿಗಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಶಾಂತಿ ಪ್ರಯತ್ನಗಳಿಗಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಉದ್ಯಾನವನ ರಕ್ಷಣೆಗೆ ಕೈಜೋಡಿಸಿದ ಬೆಂಗಳೂರಿನ ಜನರಿಗೆ ತೇಜಸ್ವಿ ಸೂರ್ಯ ಧನ್ಯವಾದ : ಸುರಂಗ ರಸ್ತೆ ಯೋಜನೆಗೆ ವಿರೋಧ
ಉದ್ಯಾನವನ ರಕ್ಷಣೆಗೆ ಕೈಜೋಡಿಸಿದ ಬೆಂಗಳೂರಿನ ಜನರಿಗೆ ತೇಜಸ್ವಿ ಸೂರ್ಯ ಧನ್ಯವಾದ : ಸುರಂಗ ರಸ್ತೆ ಯೋಜನೆಗೆ ವಿರೋಧ
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಆರೋಪ : 2 ನೌಕರರ ಅಮಾನತು ತಡೆ ಹಿಡಿದ ಕೆಎಸ್‌ಎಟಿ ಕಲಬುರಗಿ ಪೀಠ
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಆರೋಪ : 2 ನೌಕರರ ಅಮಾನತು ತಡೆ ಹಿಡಿದ ಕೆಎಸ್‌ಎಟಿ ಕಲಬುರಗಿ ಪೀಠ
ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4 ರಂದು ಬೆಂಗಳೂರಿನಾದ್ಯಂತ ಮಾಂಸ ಮಾರಾಟ ಮತ್ತು ವಧೆಗೆ ನಿಷೇಧ
ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4 ರಂದು ಬೆಂಗಳೂರಿನಾದ್ಯಂತ ಮಾಂಸ ಮಾರಾಟ ಮತ್ತು ವಧೆಗೆ ನಿಷೇಧ
 ನೇಪಾಳಕ್ಕೆ ರಕ್ಷಣಾ ತಂಡ, ಉಪಕರಣ, ಔಷಧಿಗಳೊಂದಿಗೆ ಐದನೇ ವಿಮಾನ ಕಳುಹಿಸಿದ ಭಾರತ
ನೇಪಾಳಕ್ಕೆ ರಕ್ಷಣಾ ತಂಡ, ಉಪಕರಣ, ಔಷಧಿಗಳೊಂದಿಗೆ ಐದನೇ ವಿಮಾನ ಕಳುಹಿಸಿದ ಭಾರತ
ಕರ್ನಾಟಕ ಲೋಕಸೇವಾ ಆಯೋಗ ಅಕ್ರಮ ಆರೋಪ : ಪ್ರಿಯಾಂಕ್ ಖರ್ಗೆ ಗೆ 10 ಸವಾಲು ಹಾಕಿದ ಎಚ್ಚಿಕೆ
ಕರ್ನಾಟಕ ಲೋಕಸೇವಾ ಆಯೋಗ ಅಕ್ರಮ ಆರೋಪ : ಪ್ರಿಯಾಂಕ್ ಖರ್ಗೆ ಗೆ 10 ಸವಾಲು ಹಾಕಿದ ಎಚ್ಚಿಕೆ
 ರಾಮ ಮಂದಿರ ಟ್ರಸ್ಟ್‌ನ ಮೊದಲ ಪೂರ್ಣಕಾಲಿಕ ಸಿಇಒ ಆಗಿ ಏರ್ ಮಾರ್ಷಲ್ (ನಿವೃತ್ತ) ಜಿತೇಂದ್ರ ಮಿಶ್ರಾ ನೇಮಕ
ರಾಮ ಮಂದಿರ ಟ್ರಸ್ಟ್‌ನ ಮೊದಲ ಪೂರ್ಣಕಾಲಿಕ ಸಿಇಒ ಆಗಿ ಏರ್ ಮಾರ್ಷಲ್ (ನಿವೃತ್ತ) ಜಿತೇಂದ್ರ ಮಿಶ್ರಾ ನೇಮಕ
ಕೇರಳ ಹೈಕೋರ್ಟ್: ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅಪ್ರಾಪ್ತ ಬಾಲಕಿ ವಿವಾಹವಾದರೂ ಸಹ ಪೊಕ್ಸೊ ಅನ್ವಯ
ಕೇರಳ ಹೈಕೋರ್ಟ್: ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಅಪ್ರಾಪ್ತ ಬಾಲಕಿ ವಿವಾಹವಾದರೂ ಸಹ ಪೊಕ್ಸೊ ಅನ್ವಯ

ನ್ಯೂಸ್ MORE NEWS...