ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ KILL YOU ಬರಹ ಪ್ರಕರಣ: ಇಬ್ಬರ ಬಂಧನ | JANATA NEWS

ಚಿಕ್ಕಮಗಳೂರು : ಕಡೂರು ಪಟ್ಟಣದಲ್ಲಿ ಇತ್ತೀಚೆಗೆ ಆರ್ ಎಸ್‌ಎಸ್ ಮುಖಂಡನ ಕಾರಿನ ಮೇಲೆ ಅಶ್ಲೀಲ ಪದ ಬರೆದು, ಜಿಹಾದ್ ಎಂದು ಗೀಚಿದ್ದಲ್ಲದೇ ಕೊಲ್ಲುವುದಾಗಿ ಬರೆದಿದ್ದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕೃತ್ಯವನ್ನು ಎಸಗಿದ ಇಬ್ಬರು ಅಪ್ರಾಪ್ತ ಬಾಲಕರ ಪತ್ತೆ ಹಚ್ಚಲಾಗಿದ್ದು, ಇಬ್ಬರನ್ನು ಬಂದಿಸಿದ್ದಾರೆ. ಜಿಲ್ಲೆಯ ಕಡೂರು ಪಟ್ಟಣದ ಅರಿವಿನ ಮನೆ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ, ಹಾಗೂ ಆರ್ ಎಸ್ ಎಸ್ ಮುಖಂಡರಾದ ಡಾ. ಶಶಿಧರ ಚಿಂದಿಗೆರೆ ಜಯಣ್ಣ ಅವರ ಕಾರಿನ ಮೇಲೆ ಕೊಲೆ ಬೆದರಿಕೆ ಸಂದೇಶ ಬರೆದಿದ್ದರು.
ಇಬ್ಬರು ಬಾಲಕರು ತಡರಾತ್ರಿ ಮನೆಗೆ ಹೋಗುವಾಗ ಚೆನ್ನಾಗಿರುವ ಕಾರನ್ನು ನೋಡಿ, ತರಹದ ಕಾರ್ ತೆಗೆದುಕೊಳ್ಳಲು ಆಗುವುದಿಲ್ಲ, ಆದರೆ ಹಾಳು ಮಾಡಲು ಆಗುತ್ತದೆ ಎಂದು ಈ ರೀತಿಯ ಕೃತ್ಯ ಮಾಡಿರುವುದಾಗಿ ಬೆಳಕಿಗೆ ಬಂದಿದೆ.