ನಂದಿ ಗಿರಿಧಾಮದಲ್ಲಿ ಟ್ರಕ್ಕಿಂಗ್ ಮಾಡಲು ಹೋಗಿ ಜಾರಿಬಿದ್ದಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ | JANATA NEWS

ಚಿಕ್ಕಬಳ್ಳಾಪುರ : ನಂದಿ ಗಿರಿಧಾಮದಲ್ಲಿ ಟ್ರಕ್ಕಿಂಗ್ ಮಾಡಲು ಹೋಗಿ ಜಾರಿಬಿದ್ದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಗ್ನಿಶಾಮಕದಳದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ದೊಡ್ಡಬಳ್ಳಾಪುರದ ಮಂಜುನಾಥ್ ಮತ್ತು ಮನೋಜ್ ಕುಮಾರ್ ಎಂಬುವವರು ವೀರಭದ್ರೇಶ್ವರ ದೇವಸ್ಥಾನದ ಇಳಿಜಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಸ್ವಲ್ಪ ಕೂಡ ಆಯತಪ್ಪಿದರೂ ಪ್ರಪಾತಕ್ಕೆ ಬೀಳುವ ಸಾಧ್ಯತೆಯಿತ್ತು, 112 ಸಂಖ್ಯೆಗೆ ಕರೆ ಮಾಡಿ ರಕ್ಷಣೆ ಮಾಡಿ ಎಂದು ಮನವಿ ಮಾಡಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಇಬ್ಬರು ಯುವಕರನ್ನು ರಕ್ಷಿಸಿದ್ದಾರೆ.
ಓರ್ವ ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯುವಕರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
RELATED TOPICS:
English summary :112 team rescued two people who had slipped while trucking at Nandi hill station