ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ | JANATA NEWS

ಮೈಸೂರು : ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದ್ದು, ಈ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಲೋಕಾರ್ಪಣೆಗೊಳಿಸಿದರು.
ಮೈಸೂರಿನ ಉದ್ದೂರು ಗೇಟ್ ಬಳಿಯ ಹಾಲಾಳು ಗ್ರಾಮದಲ್ಲಿ 5 ಹೆಕ್ಟೇರ್ ಜಾಗದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲಾಗಿದೆ.
ಇಂದು ಸ್ಮಾರಕವನ್ನು ಉದ್ಘಾಟನೆ ಮಾಡಲಾಗಿದ್ದು, ಸಮಾರಂಭದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಎಲ್.ನಾಗೇಂದ್ರ ಭಾಗವಹಿಸಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ವಿಷ್ಣುವರ್ಧನ್ ಅವ್ರ ಕಲೆ, ಸಾಹಸ, ಚಿತ್ರರಂಗದಲ್ಲಿ ಮಾಡಿರೋ ಸಾಧನೆ ನಮ್ಮ ಕಣ್ಣ ಮುಂದೆ ಇದೆ. ನಾನು ಒಬ್ಬ ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ. 70 ರ ದಶಕದಲ್ಲಿ ನಾಗರಹಾವಿನ ಮೂಲಕ ನಾಯಕ ನಟನಾಗಿ ಚಿತ್ರರಂಗೆ ಬಂದ್ರು. ಅವರನ್ನು ಮೊದಲ ಸಲಾ ನೋಡಿದವ್ರು ಖಂಡಿತವಾಗಿ ಫ್ಯಾನ್ ಆಗ್ತಾ ಇದ್ರು. ನಾಗರಹಾವು ಚಿತ್ರದ ಮೂಲಕ ನಾಡಿನ ಜನಮನ ಗೆದ್ದವ್ರು ಡಾ. ವಿಷ್ಣುವರ್ಧನ್ ಎಲ್ಲಾ ರೀತಿಯ ಪಾತ್ರಗಳನ್ನ ಮಾಡಿ ಸಾಹಸ ಸಿಂಹನಾಗಿ ಕರ್ನಾಟಕದಲ್ಲಿ ಮೆರೆದವರು ಎಂದು ವಿಷ್ಣು ಅವರ ಸಾಧನೆಯನ್ನು ನೆನೆದರು.

11 ಕೋಟಿ ರೂಪಾಯಿ ವೆಚ್ಚದಲ್ಲಿ ವಿಷ್ಣು ಅವರ ಸ್ಮಾರಕ ನಿರ್ಮಾಣವಾಗಿದೆ. ವಿಷ್ಣುವರ್ಧನ್ ಅವರ ಕುಟುಂಬ ಬಯಸಿದಂತೆ ಎಲ್ಲವೂ ಆಗಿದೆ. ಎಲ್ಲರೂ ಸೇರಿ ಸಂತೋಷದಿಂದ ಸ್ಮಾರಕ ಲೋಕಾರ್ಪಣೆ ಮಾಡಿದ್ದೇವೆ ಎಂದು ತಿಳಿಸಿದರು.
ವಿಷ್ಣುವರ್ಧನ್ ಭಾವುಕ ಜೀವಿ, ಮಾನವೀಯತೆಯಿಂದ ಮೆರೆದವರು. ಅವ್ರ ಪಾತ್ರದಲ್ಲಿಯೂ ಮಾನವೀಯತೆ ಎದ್ದು ಣುತ್ತಿತ್ತು. ಸ್ಮಾರಕ ವಿಚಾರದಲ್ಲಿ ಸ್ಥಳದ ಕುರಿತು ಹಲವು ವಿವಾದಗಳು ಎದ್ದವು. ಅವ್ರು ಮೈಸೂರಿನವ್ರು, ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಆಗಬೇಕು ಎಂದು ಗಟ್ಟಿಯಾಗಿ ನಿಂತರು. ಯಡಿಯೂರಪ್ಪ ಅವರು 11 ಕೋಟಿ ರೂ. ನೀಡಿದ್ದರು. ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವಿಷ್ಣುವರ್ಧನ್ ಅವರಿಗೆ ʼಕರ್ನಾಟಕ ರತ್ನʼ ನೀಡುವಂತೆ ಅಭಿಮಾನಿಗಳ ಒತ್ತಾಯದ ಹಿನ್ನಲೆ. ಅಭಿಮಾನಿಗಳ ಭಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ. ಮುಂದಿನ ದಿನಗಳಲ್ಲಿ ಕರ್ನಾಟಕ ರತ್ನ ನೀಡೋ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು .