ಪೊಲೀಸ್ ಎಎಸ್ಐ ಗುಂಡಿನ ದಾಳಿಯಲ್ಲಿ ಒಡಿಶಾದ ಆರೋಗ್ಯ ಸಚಿವ ನಬಾ ಕಿಸೋರ್ ದಾಸ್ ಸಾವು | JANATA NEWS

ಭುವನೇಶ್ವರ : ಒಡಿಶಾದ ಆರೋಗ್ಯ ಸಚಿವ ನಬಾ ಕಿಸೋರ್ ದಾಸ್ ಅವರು ಇಂದು ಮುಂಜಾನೆ ಝಾರ್ಸುಗುಡಾ ಜಿಲ್ಲೆಯಲ್ಲಿ ಪೊಲೀಸ ಸಿಬ್ಬಂದಿಯ ಗುಂಡಿನಿಂದ ಸಾವನ್ನಪ್ಪಿದ್ದಾರೆ. ಆರೋಗ್ಯ ಸಚಿವ ನಬಾ ಕಿಸೋರ್ ದಾಸ್ ಮೇಲೆ ಸಚಿವರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಎಎಸ್‌ಐ ಗುಂಡು ಹಾರಿಸಿದ್ದಾರೆ.
ಒಡಿಶಾದ ಜಾರ್ಸುಗುಡಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರೋಗ್ಯ ಸಚಿವ ನಬಾ ದಾಸ್ ಮೇಲೆ ಪೊಲೀಸ್ ಎಎಸ್‌ಐ ಗುಂಡು ಹಾರಿಸಿದ್ದಾರೆ. ದಾಸ್ ಮೇಲೆ ಗುಂಡು ಹಾರಿಸಿದ ನಂತರ, ಬಿಜು ಜನತಾ ದಳ (ಬಿಜೆಡಿ) ಬೆಂಬಲಿಗರು ಅವರ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಂತೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಗೋಪಾಲ್ ದಾಸ್ ಅವರನ್ನು ಪೊಲೀಸರು ಬಂಧಿಸಿ ಸುರಕ್ಷಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು.
ಸಚಿವ ಕಿಸೋರ್ ನಬಾ ದಾಸ್ ಅವರು ಭುವನೇಶ್ವರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿತ್ತು. ಗುಂಡು ದೇಹವನ್ನು ಪ್ರವೇಶಿಸಿ, ನಿರ್ಗಮಿಸಿತ್ತು. ಹೃದಯ ಮತ್ತು ಎಡ ಶ್ವಾಸಕೋಶವನ್ನು ಗಾಯಗೊಳಿಸಿತು ಮತ್ತು ಗಾಯ ಭಾರೀ ಆಂತರಿಕ ರಕ್ತಸ್ರಾವ ಉಂಟುಮಾಡಿದ್ದ ಕಾರಣ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ, ಎಂದು ಹೇಳಲಾಗಿದೆ.
ಘಟನೆಯನ್ನು ಖಂಡಿಸಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಗೌರವಾನ್ವಿತ ಸಚಿವ ನಬಾ ದಾಸ್ ಅವರ ಮೇಲೆ ನಡೆದ ದುರದೃಷ್ಟಕರ ಘಟನೆಯಿಂದ ನನಗೆ ಆಘಾತವಾಗಿದೆ. ಅವರ ಮೇಲಿನ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.