ಈಜಲು ಹೋಗಿ ಕೆರೆಯಲ್ಲಿ ಮುಳುಗಿದ ಬಾಲಕ, ಕೆರೆಯಲ್ಲಿ 3 ದಿನದಿಂದ ಶೋಧ! | JANATA NEWS

ಹುಬ್ಬಳ್ಳಿ : ಕೆರೆಯಲ್ಲಿ ಈಜಲು ತೆರಳಿದ ಬಾಲಕ ಮುಳುಗಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ನಡೆದಿದೆ.
ಹುಬ್ಬಳ್ಳಿ ಇಂದಿರಾ ನಗರದ ನಿವಾಸಿ ವೆಂಕಟೇಶ್ ವಾಲ್ಮೀಕಿ ಮೃತಪಟ್ಟ ಬಾಲಕ. ಬಾಲಕ ಕೆರೆಯಲ್ಲಿ ಮುಳುಗಿ ಮೂರು ದಿನಗಳು ಕಳೆದರೂ ಬಾಲಕನ ಶವ ಇನ್ನೂ ಪತ್ತೆಯಾಗಿಲ್ಲ.
ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿದ್ಯಾನಗರ ಠಾಣೆ ಪೊಲೀಸರಿಂದ ಕೆರೆಯಲ್ಲಿ ಬಾಲಕನ ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ.
RELATED TOPICS:
English summary :The boy who went swimming and drowned in the lake, searched for 3 days in the lake!