ನವಜಾತ ಶಿಶುವನ್ನು ದೇವಾಲಯದ ಬಳಿ ಬಿಟ್ಟು ಹೋದ ಪಾಪಿಗಳು! | JANATA NEWS

ಬೆಂಗಳೂರು : ನವಜಾತ ಶಿಶುವನ್ನು ದೇವಾಲಯದ ಬಳಿ ಬಿಟ್ಟು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯಶವಂತಪುರ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಈ ಘಟನೆ ನಡೆದಿದ್ದು, ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಸೇರಿಸಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಿಬ್ಬಂದಿ ಅಮರೇಶ್ ಹಾಗೂ ಕೆಂಪರಾಜು ನವಜಾತ ಶಿಶುವನ್ನು ಕಂಡ ತಕ್ಷಣವೇ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಬರಲು ತಡವಾಗುರ್ರಾದೆ ಎಂದು ತಿಳಿದು ಹೊಯ್ಸಳ ವಾಹನ ಮೂಲಕ ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಐಪಿಸಿ 317 ಅಡಿಯಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
English summary :Sinners who left the newborn baby near the temple!