ವರುಣಾದಲ್ಲೂ ಸಿದ್ದರಾಮಯ್ಯ ಗೆಲುವು ಅಷ್ಟು ಸುಲಭವಲ್ಲ : ಬಿ.ಎಸ್.ಯಡಿಯೂರಪ್ಪ | JANATA NEWS

ಬೆಂಗಳೂರು : ವರುಣಾದಲ್ಲೂ ಸಿದ್ದರಾಮಯ್ಯ ಅವರಿಗೆ ನಿಂತ ನೆಲ ಕುಸಿಯುತ್ತಿದೆ. ಗೆಲುವು ಕಷ್ಟಕರವಾಗಿದೆ ಎಂದು ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ವರುಣಾದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು ಇದೇ ಸಂದರ್ಭ ಸಿದ್ದರಾಮಯ್ಯಗೆ ಮಾಜಿ ಸಿಎಂ ಬಿಎಸ್ವೈ ಟಾಂಗ್ ಕೊಟ್ಟಿದ್ದಾರೆ. 'ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಚರ್ಚೆ ನಡೀತ್ತಿದೆ. ಸಿದ್ದರಾಮಯ್ಯಗೂ ಗೊತ್ತಿದೆ ಅವರ ನೆಲ ಕುಸಿಯುತ್ತಿದೆ ಎಂದು. ಅವರ ಗೆಲುವು ಅಷ್ಟು ಸುಲಭವಲ್ಲ ಅಂತಲೂ ಅವರಿಗೆ ತಿಳಿದಿದೆ.
ಬಿಎಸ್ವೈ ಪ್ರಬಲ ಅಭ್ಯರ್ಥಿಯನ್ನು ವರುಣಾದಲ್ಲಿ ಸ್ಪರ್ಧೆಗೆ ಇಳಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆಯಾಗುತ್ತಿದೆ. ನಾವು ಅವರ ವಿರುದ್ಧ ಪ್ರಬಲ ಅಭ್ಯರ್ಥಿ ಹಾಕ್ತೀವಿ.
ಖಂಡಿತವಾಗಿಯೂ ಸಿದ್ದರಾಮಯ್ಯ ಅವರಿಗೆ ತೀವ್ರ ಪೈಪೋಟಿವೊಡ್ಡಲಿದ್ದೇವೆ ಎಂದರು. ಟಫ್ ಫೈಟ್ ಅಂತೂ ಆಗುತ್ತದೆ. ವಿಜಯೇಂದ್ರ ಸ್ಪರ್ಧೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ' ಎಂದು ಬಿಎಸ್ವೈ ಹೇಳಿದ್ದಾರೆ.