ಮಚ್ಚು ಹಿಡಿದು ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ | JANATA NEWS

ಬಳ್ಳಾರಿ : ಗಂಡನ ಕಾಟ ತಾಳಲಾರದೇ ತವರು ಮನೆ ಸೇರಿದ್ದ ಪತ್ನಿಯನ್ನು ಪತಿಯೇ ಕೊಲೆಮಾಡಲು ಯತ್ನಿಸಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ರಮೇಶ ಪತ್ನಿಯನ್ನು ಕೊಲೆ ಮಾಡಲು ಮುಂದಾಗಿದ್ದ ಗಂಡ. ಹೊಸಪೇಟೆ ಮೂಲದ ರಮೇಶ್ ಕಳೆದ 8 ವರ್ಷಗಳ ಹಿಂದೆ ಹಗರಿಬೊಮ್ಮನಹಳ್ಳಿ ಪಟ್ಟಣದ ಭೋವಿ ಕಾಲೋನಿಯ ಆಶಾ ವನಜಾ ಅವರನ್ನು ಮದುವೆಯಾಗಿದ್ದನು. ಗಂಡ ರಮೇಶನ ಅತಿಯಾದ ಮದ್ಯ ಸೇವನೆ ಹೆಚ್ಚಿದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ಆಶಾ ವನಜಾ, ಗಂಡನ ಜೊತೆ ಸಂಸಾರ ಮಾಡಲು ನಿರಾಕರಿಸಿ, ತವರು ಮನೆ ಸೇರಿದ್ದರು.
ಪತ್ನಿಯ ಮೇಲೆ ಕುಪಿತಗೊಂಡ ಪತಿ ರಮೇಶ್, ಮಚ್ಚು ಹಿಡಿದು ತವರು ಮನೆಗೆ ಬಂದು ಕೊಲೆಮಾಡಲು ಮುಂದಾಗಿದ್ದಾನೆ. ಈ ವೇಳೆ ಸ್ಥಳೀಯರು, ಮಚ್ಚು ಕಸಿದುಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ. ಗಂಡ ರಮೇಶನನ್ನು ಮಚ್ಚು ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.