ಬೆಂಗಳೂರು ನಗರ ಹೊಸ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಿ ದಯಾನಂದ್ | JANATA NEWS

ಬೆಂಗಳೂರು : ಬೆಂಗಳೂರು ನಗರಕ್ಕೆ ನೂತನ ಕಮಿಷನರ್ ಆಗಿ ಬಿ ದಯಾನಂದ್ ನೇಮಕವಾಗಿದ್ದು ಇಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರಹಿಸಿಕೊಂಡ ಬಳಿಕ ಮಾತಾಡಿದ ದಯಾನಂದ್, ನಗರದ ಜನತೆಗೆ ಪೊಲೀಸ್ ವ್ಯವಸ್ಥೆ ಮೇಲೆ ಭಾರೀ ವಿಶ್ವಾಸವಿದೆ ಮತ್ತು ಅದಕ್ಕೆ ಧಕ್ಕೆಯಾಗದ ಹಾಗೆ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಬಿ.ದಯಾನಂದ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವರಾಗಿದ್ದು, 1994ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಮೈಸೂರು ನಗರ ಪೊಲೀಸ್ ಆಯುಕ್ತರಾಗಿ, ಬೆಂಗಳೂರಿನಲ್ಲಿ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ, ಸಂಚಾರ ವಿಭಾಗದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಇವರಿಗಿದ್ದು ಪ್ರಸ್ತುತ ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿಯಾಗಿದ್ದರು. ಇದೀಗ ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
We are pleased to announce, 𝗦𝗵𝗿𝗶. 𝗕 𝗗𝗮𝘆𝗮𝗻𝗮𝗻𝗱𝗮, 𝗜𝗣𝗦 has been appointed as the 𝗡𝗲𝘄 𝗖𝗼𝗺𝗺𝗶𝘀𝘀𝗶𝗼𝗻𝗲𝗿 of @BlrCityPolice.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) May 31, 2023
Shri. CH Pratap Reddy, IPS has handed over the baton and we look forward to the leadership of Shri. B Dayananda, IPS in the coming… pic.twitter.com/dAGGQs23hu