ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ರಚಿತರಾಮ್! | JANATA NEWS

ಮಂಗಳೂರು : ಇಂದು ಡಿಂಪಲ್ ಕ್ವೀನ್ ಮಂಗಳೂರಿನ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿತಳಕ್ಕೆ ಭೇಟಿ ನೀಡಿದರು.
ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು ಬಂದ್ಬಿಟ್ಟೆ. ಕೊರಗಜ್ಜನ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು ತುಂಬಾ ಚೆನ್ನಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ತೆರೆ ಕಾಣಲಿರುವ ʼಮ್ಯಾಟ್ನಿʼ ಮತ್ತು ʼಬ್ಯಾಡ್ ಮ್ಯಾನರ್ಸ್ʼ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ ಎಂದು ರಚಿತಾ ರಾಮ್ ಹೇಳಿದರು.
ವಿಶೇಷ ಪೂಜೆ ಸಲ್ಲಿಸಿದ ರಚಿತಾ ರಾಮ್2ಗೆ ಕೊರಗಜ್ಜನ ಆದಿ ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.