ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳ ಗುಂಡಿಗೆ ಮತ್ತೊಬ್ಬ ಭಯೋತ್ಪಾದಕ ಬಲಿ | JANATA NEWS
ಇಸ್ಲಾಮಾಬಾದ್ : ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಮತ್ತು ಮೌಲಾನಾ ಮಸೂದ್ ಅಜರ್(ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕ) ನ ಅತ್ಯಂತ ನಿಕಟವರ್ತಿ, ಮೌಲಾನಾ ರಹೀಂ ಉಲ್ಲಾ ತಾರಿಕ್ ಅನ್ನೋ ಪಾಕಿಸ್ತಾನದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.ಕರಾಚಿಯಲ್ಲಿ ಭಾರತ ವಿರೋಧಿ ಸಮಾವೇಶದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳಿಂದ ಮೌಲಾನಾ ತಾರಿಕ್ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದಾನೆ.
ಇದು ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಕುಖ್ಯಾತ ಭಯೋತ್ಪಾದಕರ ನಿಗೂಢ ಹತ್ಯೆಗಳ ಸರಣಿಯನ್ನು ಮುಂದುವರಿಸಿದಂತಾಗಿದೆ.
ಇತ್ತೀಚೆಗೆ ಅಪರಿಚಿತ ಬಂದೂಕುಧಾರಿಗಳ ಗುರಿಗೆ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ ಕಮಾಂಡರ್ ಅಕ್ರಮ್ ಖಾನ್ ಘಾಜಿ ಬಲಿಯಾಗಿದ್ದನು.
ಇತ್ತೀಚಿನ ಗುರಿ ಹತ್ಯೆಯೊಂದಿಗೆ, ಪಾಕಿಸ್ತಾನದ ಭಯೋತ್ಪಾದಕರು ಈಗ ಈ ಅಜ್ಞಾತ ಬಂದೂಕುಧಾರಿಗಳ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ.