ಹಣದ ಹೊಳೆಯಲ್ಲಿ ಮಿಂದೆದ್ದ ಕಾಂಗ್ರೆಸ್ ಸಚಿವ - ಬಿಜೆಪಿ ಆಕ್ರೋಶ | JANATA NEWS
ಬೆಂಗಳೂರು : ರಾಜ್ಯ ಎದುರಿಸಿತ್ತಿರುವ ಬರ ವಿದ್ಯುತ್ ಹಾಗೂ ನೀರಿನ ಸಮಸ್ಯೆಗಳ ಮಧ್ಯೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರಾದ ಶಿವಾನಂದ್ ಪಾಟೀಲ್ ಅವರ ಮೇಲೆ ಹಣದ ಹೊಳೆ ಹರಿಸುತ್ತಿರುವ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿದ್ದು ವಿರೋಧ ಪಕ್ಷ ಬಿಜೆಪಿ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ಕುರಿತು ಹೇಳಿಕೆ ನೀಡಿದ್ದು, ಹಣದ ಹೊಳೆಯಲ್ಲಿ ಮಿಂದೆದ್ದ ಕಾಂಗ್ರೆಸ್ ಸಚಿವ!
ಹಿಂದೆ, ದುಡ್ಡಿಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ನಾಲಗೆ ಹರಿಬಿಟ್ಟಿದ್ದ ಸಚಿವ ಶಿವಾನಂದ ಪಾಟೀಲ್, ಈಗ ತೆಲಂಗಾಣದಲ್ಲಿ ದುಡ್ಡಿನ ಮಳೆಗರೆಯುತ್ತ ಮೋಜಿನಲ್ಲಿ ನಿರತರಾಗಿದ್ದು ನಾಚಿಕೆಗೇಡು. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಅದರ ಪರಿಹಾರಕ್ಕಿಂತ ಇವರಿಗೆ ಮೋಜು ಹೆಚ್ಚಾಗಿದೆ., ಎಂದು ಪೋಸ್ಟ್ ಮಾಡಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಏನ್ ರವಿಕುಮಾರ್ ಅವರು ಐಟಿಇ ದಾಳಿಯಲ್ಲಿ ಸಿಕ್ಕ ಹಣ ಹಾಗೂ ಸಚಿವ ಶಿವಾನಂದ ಪಾಟೀಲ್ ಅವರ ಪ್ರಕರಣ ಸೇರಿದಂತೆ ಪ್ರತಿ ಇಲಾಖೆಯಿಂದ ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಿ ಪಂಚರಾಜ್ಯ ಚುನಾವಣೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಎಲ್ಲದರ ಸಮಗ್ರ ತನಿಖೆ ನಡೆಸುವವರೆಗೂ ನಮ್ಮ ಹೋರಾಟ ನಡೆಯುತ್ತದೆ, ಎಂದು ತಿಳಿಸಿದ್ದಾರೆ.
ಕೇವಲ 5 ಲಕ್ಷಕ್ಕೂ ರೈತರು ಆತ್ಮಹತ್ಯೆ ಮಾಡ್ಕೋತಾರೆ ಅಂತ ಹಿಂದೊಮ್ಮೆ ರೈತರನ್ನು ಮೂದಲಿಸಿದ್ದ ಕಾಂಗ್ರೆಸ್ ಸಚಿವ ಶಿವಾನಂದ ಪಾಟೀಲ್, ಇಂದು ಹೈದರಾಬಾದಿನಲ್ಲಿ ಹಣದ ಸುರಿಮಳೆಯಲ್ಲಿ ಮಿಂದು ಮೋಜುಮಾಡುತ್ತ ಸಿಕ್ಕಿಬಿದ್ದಿದ್ದಾರೆ! ಜನರ ಏಳಿಗೆಗೆ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ, ಆದರೆ ಅವರ ಸಚಿವರ ಇಂಥ ಶೋಕಿಗೆ ಇಲ್ಲ ಲಂಗು ಲಗಾಮು! ಇದು ಕರ್ನಾಟಕದ ಕಾಂಗ್ರೆಸ್ ಸರಕಾರದ ಸದ್ಯದ ಪರಿಸ್ಥಿತಿ! ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತೀವ್ರವಾಗಿ ಟೀಕಿಸಿದ್ದಾರೆ.