ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ | JANATA NEWS
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದ ಹುಬ್ಬಳ್ಳಿ ಪಾಲಿಕೆ ಸದಸ್ಯರಾದ ನಿರಂಜನ್ ಹಿರೇಮಠ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಳಿ ಗೋಗರೆದು ಬೇಡಿಕೊಂಡಿರುವ ವಿಡಿಯೋ ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.
"ಯಾರೂ ಕೂಡ ವಕೀಲರು .. ಬೆಲ್ ಆಗಕೂಡದು.. ಹಾಗೆ ಅವನಿಗೆ ಗಲ್ಲು ಶಿಕ್ಷೆ ಆಗೋ ತನಕ ನೀವು ನೋಡಬೇಕು ಸಾರ್ .. ಆಕೆ(ನನ್ನ ಮಗಳ) ಆತ್ಮಕ್ಕೆ ಶಾಂತಿ ನೀವೇ ಕೊಡಬೇಕು... ಇವತ್ತ ಈ ಶಕ್ತಿ ಬೇರೆ ಯಾರ ಹತ್ರನೂ ಇಲ್ಲ ಸಾರ್ .. ಡೈರೆಕ್ಟ್ ಆಗೇ ಹೇಳ್ತೇನೆ ಸಾರ್ .. ಎಲ್ಲಾ ನಿಮ್ಕಡೆ ಐತಿ .. ನನಗೆ ನ್ಯಾಯ ಕೊಡಿಸಿ ಆಕೆ ಆತ್ಮಕ್ಕೆ ಶಾಂತಿ ಕೊಡಸಿ .. ನಮ್ ಸಮಜದವರೂ ಹೌದು ಅನಬೇಕು .. ಮಾಡಿದರಪ್ಪ ಅಂತಾ", ಎಂದು ಮೃತ ವಿದ್ಯಾರ್ಥಿನಿ ತಂದೆಯಾದ ನಿರಂಜನ್ ಹಿರೇಮಠ ಕೇಂದ್ರ ಸಚಿವ ಜೋಶಿ ಅವರ ಬಳಿ ಬೇಡಿಕೊಂಡಿರುವದು ಟಿವಿ9 ನ ವಿಡಿಯೋ ತುಣುಕಿನಲ್ಲಿ ಕಂಡುಬಂದಿದೆ.
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, "ಪ್ರೀತಿ ನಿರಾಕರಿಸಿದ್ದಕ್ಕಾಗಿ ಮುಸ್ಲಿಂ ಯುವಕನೊಬ್ಬ ನಮ್ಮ ಪಾಲಿಕೆ ಸದಸ್ಯರಾದ ನಿರಂಜನ್ ಹಿರೇಮಠ ಅವರ ಪುತ್ರಿ ನೇಹ ಹಿರೇಮಠ ಅವರನ್ನು 9 ಬಾರಿ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ತುಷ್ಟಿಕರಣ ಹಾಗೂ ಸಮಾಜಘಾತಕ ಶಕ್ತಿಗಳ ಪುಷ್ಟಿಕರಣದಿಂದಾಗಿ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ. ಕಾಂಗ್ರೆಸ್ ಸರ್ಕಾರವು ಈ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಸಮಾಜವು ಪ್ರತಿಭಟನೆಗೆ ಮುಂದಾಗುವುದು., ಎಂದು ಎಚ್ಚರಿಸಿದ್ದಾರೆ.
ತನ್ನ ಪ್ರೇಮ ಪ್ರಸ್ತಾಪವನ್ನು ಒಪ್ಪಿಕೊಳ್ಳದ ಕಾರಣಕ್ಕೆ ದುಷ್ಕರ್ಮಿಯೊಬ್ಬ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ (ಎಚ್‌ಡಿಎಂಸಿ) ಕಾಂಗ್ರೆಸ್ ಕೌನ್ಸಿಲರ್‌ನ ಮಗಳನ್ನು ಸಹಪಾಠಿಯೊಬ್ಬ ತನ್ನ ಕಾಲೇಜಿನ ಆವರಣದಲ್ಲಿ ಗುರುವಾರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಜೀವನಪೂರ್ತಿ ಕಾಂಗ್ರೆಸ್ ಪಕ್ಷಕ್ಕೆ ದುಡಿದವನಿಗು ಗೊತ್ತು ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸುವ ಶಕ್ತಿ ಇರೋದು @BJP4India ಯವರಲ್ಲಿ ಮಾತ್ರ ಎಂದು.#ಕನ್ನಡ_ಕರುನಾಡು pic.twitter.com/4BSVVDeGEV
— ಕರ್ನಾಟಕ ಇತಿಹಾಸ (@KannadaNaduu) April 19, 2024
ಪ್ರೀತಿ ನಿರಾಕರಿಸಿದ್ದಕ್ಕಾಗಿ ಮುಸ್ಲಿಂ ಯುವಕನೊಬ್ಬ ನಮ್ಮ ಪಾಲಿಕೆ ಸದಸ್ಯರಾದ ನಿರಂಜನ್ ಹಿರೇಮಠ ಅವರ ಪುತ್ರಿ ನೇಹ ಹಿರೇಮಠ ಅವರನ್ನು 9 ಬಾರಿ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ತುಷ್ಟಿಕರಣ ಹಾಗೂ ಸಮಾಜಘಾತಕ ಶಕ್ತಿಗಳ ಪುಷ್ಟಿಕರಣದಿಂದಾಗಿ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ. ಕಾಂಗ್ರೆಸ್… pic.twitter.com/JUfcvLkwcm
— Pralhad Joshi (Modi Ka Parivar) (@JoshiPralhad) April 19, 2024
ಪೊಲೀಸರ ಪ್ರಕಾರ, ಎಚ್‌ಡಿಎಂಸಿ ಕೌನ್ಸಿಲರ್ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ್ (21) ತನ್ನ ಸಹಪಾಠಿ ಫಯಾಜ್‌ನಿಂದ ಹಲವು ಬಾರಿ ಚಾಕುವಿನಿಂದ ಇರಿದಿದ್ದಾಳೆ.
ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿ ಫಯಾಜ್, ಸ್ಥಳದಿಂದ ಪರಾರಿಯಾಗುವ ಮೊದಲು ನೇಹಾಗೆ ಹಲವು ಬಾರಿ ಇರಿದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಕೊಲೆಯ ಹಿಂದಿನ ಕಾರಣವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ ಆದರೆ ಫಯಾಜ್‌ನನ್ನು ಬಂಧಿಸಿದ್ದಾರೆ.