Sun,Jun16,2024
ಕನ್ನಡ / English

ಭಾರತಕ್ಕೆ ವಾಪಸಾಗಿ ಪೊಲೀಸರಿಗೆ ಶರಣಾಗು, ಪ್ರಜ್ವಲ್‌ಗೆ ದೇವೇಗೌಡರ ಎಚ್ಚರಿಕೆ | JANATA NEWS

23 May 2024
488

ಬೆಂಗಳೂರು : ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ವೈರಲ್ ಆದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು,"ಭಾರತಕ್ಕೆ ವಾಪಸಾಗು, ಪೊಲೀಸರಿಗೆ ಶರಣಾಗು, ಇಲ್ಲದೇ ಹೋದಲ್ಲಿ ನನ್ನ ಕೋಪಕ್ಕೆ ತುತ್ತಾಗುವೆ," ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ದೇವೇಗೌಡರ ಪತ್ರದ ವಿವರ: 'ನಾನು ಮೇ 18ನೇ ತಾರೀಖಿನಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕುರಿತಾಗಿ ಮಾತನಾಡಿದ್ದೆ. ಆತ ನನಗೆ, ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು' ಎಂದು ಪತ್ರವನ್ನು ಆರಂಭಿಸಿದ್ದಾರೆ.

ತಪ್ಪು ಸಾಬೀತಾದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಕಠಿನ ಶಿಕ್ಷೆ ವಿಧಿಸಬೇಕು ಎಂದು ನಾನು ಈಗಾಗಲೇ ಹೇಳಿದ್ದೇನೆ. ಹಗರಣ ಬಯಲಾದ ದಿನದಿಂದಲೂ ನನ್ನ ಮಗ ಎಚ್.ಡಿ.ಕುಮಾರಸ್ವಾಮಿ ಕೂಡ ಇದನ್ನೇ ಹೇಳಿದ್ದಾರೆ' ಎಂದು ಬರೆದಿದ್ದಾರೆ.

ಜನರು ನನ್ನ ಬಗ್ಗೆ, ನಮ್ಮ ಕುಟುಂಬದ ವಿರುದ್ಧ ಕಠೋರ ಪದಗಳನ್ನು ನಾನಾ ವಿರುದ್ಧ ಬಳಸುತ್ತಿದ್ದಾರೆ ಎನ್ನುವುದು ನನಗೆ ಅರಿವಿದೆ. ನಾನು ಅವರನ್ನು ತಡೆಯುವುದಿಲ್ಲ, ಅವರನ್ನು ಟೀಕಿಸುವುದಿಲ್ಲ ಅವರೊಂದಿಗೆ ವಾದ ಮಾಡುವುದಿಲ್ಲ. ಅವರೆಲ್ಲರೂ ಸತ್ಯ ಹೊರ ಬರುವ ವರೆಗೆ ಕಾಯಬೇಕು ಎಂದು ಬರೆದಿದ್ದಾರೆ.

ಪ್ರಜ್ವಲ್‌ ಚಟುವಟಿಕೆಗಳ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದು ಜನರಿಗೆ ಮನವರಿಕೆ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ, ಅವನನ್ನು ರಕ್ಷಿಸಲು ನನಗೆ ಯಾವುದೇ ಇಚ್ಛೆಯಿಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡಲು ನನಗೆ ಸಾಧ್ಯವಿಲ್ಲ. ಆತನ ಚಲನವಲನಗಳು, ಆತನ ವಿದೇಶ ಪ್ರವಾಸದ ಬಗ್ಗೆ ನನಗೆ ಅರಿವಿರಲಿಲ್ಲ ಎಂದೂ ಜನರಿಗೆ ಮನವರಿಕೆ ಮಾಡಲು ನನಗೆ ಸಾಧ್ಯವಿಲ್ಲ. ನನ್ನ ಆತ್ಮಸಾಕ್ಷಿಗೆ ಉತ್ತರ ನೀಡುವುದನ್ನು ನಾನು ನಂಬಿದ್ದೇನೆ. ನಾನು ದೇವರನ್ನು ನಂಬುತ್ತೇನೆ ಮತ್ತು ದೇವರಿಗೆ ಸತ್ಯ ತಿಳಿದಿದೆ ಎಂದು ನನಗೆ ಗೊತ್ತು

ಈ ಸಂದರ್ಭದಲ್ಲಿ ನಾನು ಈಗ ಒಂದು ಕೆಲಸವನ್ನಷ್ಟೆ ಮಾಡಬಲ್ಲೆ. ಅದೇನೆಂದರೆ, ಪ್ರಜ್ವಲ್‌ನು ಎಲ್ಲಿದ್ದರೂ ಬಂದು, ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಜು, ಮರ್ಜಿಯಿಲ್ಲದೆ ಹೇಳಬಲ್ಲೆ ಮತ್ತು ಹೇಳುತ್ತಿದ್ದೇನೆ. ಇದು ನಾನು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ಕೂಡ ತಿಳಿಯಬೇಕು. ಅವನು ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪವನ್ನೂ ಎದುರಿಸಬೇಕಾಗುತ್ತದೆ. ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ಅವನು ತಲೆಬಾಗದಿದ್ದಲ್ಲಿ, ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಅವನಿಗೆ ಏನಾದರೂ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು" ಎಂದು ದೇವೇಗೌಡರು ಪತ್ರದಲ್ಲಿ ತಿಳಿಸಿದ್ದಾರೆ.

RELATED TOPICS:
English summary :Deve Gowda warns Prajwal to return to India and surrender to the police

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್‌ ಏರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ : ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್‌ ಏರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ : ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ
ಜಿ-7 ಶೃಂಗಸಭೆ : ಫೋಟೋ ಷೂಟ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರಸ್ಥಾನ
ಜಿ-7 ಶೃಂಗಸಭೆ : ಫೋಟೋ ಷೂಟ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರಸ್ಥಾನ
ಜಿ7 ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ : ಭಾಷಣದ ಮುಖ್ಯಾಂಶಗಳು
ಜಿ7 ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ : ಭಾಷಣದ ಮುಖ್ಯಾಂಶಗಳು
ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನಿನಡಿ ವಿಚಾರಣೆ
ಅರುಂಧತಿ ರಾಯ್ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾನೂನಿನಡಿ ವಿಚಾರಣೆ
ಕುವೈತ್‌ ಅಗ್ನಿ ದುರಂತ : ಭಾರತಕ್ಕೆ ತರಲಾದ ಮೃತಪಟ್ಟ 45 ಭಾರತೀಯ ಕಾರ್ಮಿಕರ ಮೃತದೇಹ
ಕುವೈತ್‌ ಅಗ್ನಿ ದುರಂತ : ಭಾರತಕ್ಕೆ ತರಲಾದ ಮೃತಪಟ್ಟ 45 ಭಾರತೀಯ ಕಾರ್ಮಿಕರ ಮೃತದೇಹ
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ : ದಿಢೀರ್‌ ವೇಗ ಪಡೆದ ಪ್ರಕರಣ
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರಂಟ್ : ದಿಢೀರ್‌ ವೇಗ ಪಡೆದ ಪ್ರಕರಣ
 ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ
ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ
ಭಯೋತ್ಪಾದನಾ ನಿಗ್ರಹ ಸಾಮರ್ಥ್ಯದ ಸಶಸ್ತ್ರ ಪಡೆಗಳ ಸಂಪೂರ್ಣ ಶ್ರೇಣಿಯನ್ನು ನಿಯೋಜಿಸಲು ಪ್ರಧಾನಿ ಮೋದಿ ಸೂಚನೆ
ಭಯೋತ್ಪಾದನಾ ನಿಗ್ರಹ ಸಾಮರ್ಥ್ಯದ ಸಶಸ್ತ್ರ ಪಡೆಗಳ ಸಂಪೂರ್ಣ ಶ್ರೇಣಿಯನ್ನು ನಿಯೋಜಿಸಲು ಪ್ರಧಾನಿ ಮೋದಿ ಸೂಚನೆ
ನಾಲ್ಕನೇ ಬಾರಿಗೆ : ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು
ನಾಲ್ಕನೇ ಬಾರಿಗೆ : ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು
ಜಮ್ಮು ಮತ್ತು ಕಾಶ್ಮೀರ ಎನ್‌ಕೌಂಟರ್ : 2 ಉಗ್ರರು ತಟಸ್ಥ, 1 ಸಿಆರ್‌ಪಿಎಫ್ ಜವಾನ್, 1 ನಾಗರಿಕ ಗಾಯ
ಜಮ್ಮು ಮತ್ತು ಕಾಶ್ಮೀರ ಎನ್‌ಕೌಂಟರ್ : 2 ಉಗ್ರರು ತಟಸ್ಥ, 1 ಸಿಆರ್‌ಪಿಎಫ್ ಜವಾನ್, 1 ನಾಗರಿಕ ಗಾಯ
ಕೊಲೆ ಪ್ರಕರಣ : ನ್ಯಾಯಾಲಯದಲ್ಲಿ ಗಳಗಳನೆ ಕಣ್ಣೀರು ಇಟ್ಟ ದರ್ಶನ ; ಪೊಲೀಸ್ ಕಸ್ಟಡೀಗೆ ನೀಡಲಾಗಿದೆ
ಕೊಲೆ ಪ್ರಕರಣ : ನ್ಯಾಯಾಲಯದಲ್ಲಿ ಗಳಗಳನೆ ಕಣ್ಣೀರು ಇಟ್ಟ ದರ್ಶನ ; ಪೊಲೀಸ್ ಕಸ್ಟಡೀಗೆ ನೀಡಲಾಗಿದೆ
ಆಂಬುಲೇನ್ ಚಾಲಕನಿಗೆ ಥಳಿಸಿದ ಮೂವರು ಆರೋಪಿಗಳ ವಿರುದ್ಧ ರೌಡಿ ಶೀಟ್
ಆಂಬುಲೇನ್ ಚಾಲಕನಿಗೆ ಥಳಿಸಿದ ಮೂವರು ಆರೋಪಿಗಳ ವಿರುದ್ಧ ರೌಡಿ ಶೀಟ್

ನ್ಯೂಸ್ MORE NEWS...