ಕಾಡಾನೆ ದಾಳಿ: ಕಾಡಾನೆ ತುಳಿತಕ್ಕೆ ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕ! | Janata news
ಕೊಡಗು : ಕಾಡಾನೆ ದಾಳಿಯಿಂದ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಿದ್ದಾಪುರ ಸಮೀಪದ ಕಾಫಿ ತೋಟದಲ್ಲಿ ನಡೆದಿದೆ.
ಮೃತಪಟ್ಟ ಕಾರ್ಮಿಕನನ್ನು ಸಂದೀಪ್ (22 ವ) ಎಂದು ಗುರುತಿಸಲಾಗಿದೆ.
ಬಿ.ಬಿ.ಟಿ.ಸಿ ಸಂಸ್ಥೆಗೆ ಸೇರಿದ ಬೀಟಿಕಾಡು ಕಾಫಿ ತೋಟದಲ್ಲಿ ಪಲ್ಪಿಂಗ್ ಕಣದಲ್ಲಿ ಸಂದೀಪ್ (22) ಹಾಗೂ ರಾಜು ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ಬೆಳಗ್ಗಿನ ಜಾವ ಇಬ್ಬರು ನಿದ್ರಿಸುತ್ತಿದ್ದ ವೇಳೆ ಕಾಡಾನೆಯೊಂದು ದಾಳಿ ನಡೆಸಿದೆಯೆನ್ನಲಾಗಿದೆ.
ಈ ವೇಳೆ ಆನೆಯು ಸಂದೀಪ್ ಅವರ ತಲೆಗೆ ತುಳಿದ ಪರಿಣಾಮ ಸಂದೀಪ್ ತಲೆಯು ಛಿದ್ರಗೊಂಡಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಜೊತೆಗಿದ್ದ ಇನ್ನೋರ್ವ ಕಾರ್ಮಿಕ ರಾಜು ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ. ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.