ಚಾಮರಾಜನಗರದಲ್ಲಿ ಆರಂಭವಾದ ಜಿಪ್ ಲೈನ್- ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ಪ್ಲಾನ್ | ಜನತಾ ನ್ಯೂಸ್
ಚಾಮರಾಜನಗರ : ಚಾಮರಾಜನಗರದಲ್ಲಿ ಮೊದಲ ಬಾರಿಗೆ ಜಿಪ್ ಲೈನ್ ಸಾಹಸ ಕ್ರೀಡೆ ಕೊಳ್ಳೇಗಾಲ ತಾಲೂಕಿನ ಮರಡಿಗುಡ್ಡದ ವೃಕ್ಷವನದಲ್ಲಿ ಆರಂಭಗೊಂಡಿದೆ. ವೃಕ್ಷವನಕ್ಕೆ ಪ್ರವಾಸಿಗರನ್ನ ಅಕರ್ಷಿಸಲು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದ್ದು, 200 ಮೀ ದೂರದ ಜಿಪಲೈನ್ ಸವಾರಿಯನ್ನು ಆರಂಭಿಸಿದೆ.
ಸುಮಾರು 200 ಮೀ ದೂರದ ಜಿಪ್ ಲೈನ್ ಸವಾರಿ ಪ್ರವಾಸಿಗರಿಗೆ ಖುಷಿ ಕೊಡುತ್ತದೆ. ಜಿಪ್ ಲೈನ್ ಸೆರೆಹಿಡಿಯಲು ಗೋ ಪ್ರೋ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ವಯಸ್ಕರಿಗೆ 60 ರೂ ಹಾಗೂ ಮಕ್ಕಳಿಗೆ 30ರೂ ದರ ನಿಗದಿ ಮಾಡಿದೆ.
ಮೊದಲ ದಿನವೇ ಉತ್ತಮ ರೆಸ್ಪಾನ್ಸ್ ಕೂಡ ವ್ಯಕ್ತವಾಗಿದೆ. ಜಿಪ್ಲೈನ್ ಸವಾರಿ ಹಸಿರು ಗಿಡಗಳ ಮಧ್ಯ ಸಾಗುವದರಿಂದ ತುಂಬು ರೋಮಾಂಚನಕಾರಿಯಾಗಿದ್ದು, ಹೊಸದೊಂದು ಅನುಭವವನ್ನು ನೀಡುತ್ತಿದೆ ಎನ್ನುವುದು ಜಿಪ್ಲೈನ್ ಸವಾರಿ ಮಾಡಿದ ಪ್ರವಾಸಿಗರೊಬ್ಬರ ಮಾತಾಗಿದೆ.