ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ ಸಿ.ಟಿ. ರವಿ ಅವರಿಂದ: ಡಿ.ಕೆ. ಶಿವಕುಮಾರ್ ಲೇವಡಿ | ಜನತಾ ನ್ಯೂಸ್

22 Aug 2021
579

ಬೆಂಗಳೂರು : ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೆ ಸಿ.ಟಿ ರವಿ. ಅವರಿಂದಲೇ ಸ್ವಾತಂತ್ರ್ಯ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬಿಜೆಪಿ ನಾಯಕರ ಕೊಡುಗೆ ಹೆಚ್ಚಾಗಿದೆ ಎಂಬ ಸಿ.ಟಿ ರವಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮದವರು ಭಾನುವಾರ ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು, ಹೌದು, ಸಿ.ಟಿ. ರವಿ ಅವರಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದರು.

ಕಾಂಗ್ರೆಸ್​ನವರು ಮಾನಸಿಕ ಅಸ್ವಸ್ಥರು ಎಂಬ ಸಿಟಿ ರವಿ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ಹೌದು, ಸಿ ಟಿ ರವಿಯಿಂದಾಗಿಯೇ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಈಗ ತಕ್ಷಣ ನಾನು ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ. ಸಿ ಟಿ ರವಿ ಸಲಹೆ ಮೇರೆಗೆ ಚಿಕಿತ್ಸೆ ಪಡಿತೇನೆ ಎಂದರು.

ಅವನ್ಯಾರೋ ಎಂಪಿ ಬಹಳ ಬುದ್ಧಿವಂತ, ಅವನಷ್ಟು ನಾವು ಓದಿಲ್ಲ ಮಾಡಿಲ್ಲ. ಮುಸ್ಲಿಂ ಸಮಯದಾಯದವರನ್ನು ಪಂಕ್ಚರ್ ಹಾಕೋರು ಅಂದ. ಬೌರಿಂಗ್ ಹಾಸ್ಪಿಟಲ್‌ ಜಾತಿ ಧರ್ಮದ ಆಧಾರದ ಮೇಲಿದೆಯಾ? ಪಂಕ್ಚರ್ ಇವರು ಹಾಕ್ತಾರಾ? ರಾಜ್ಯದ ಎಲ್ಲ ಧರ್ಮದವರ ಸಾವಿನ ಹೆಣ ಹೊತ್ತವರು ಮುಸ್ಲಿಮರು.ಈಗ ಮಾತಾಡೋ ಗಂಡುಗಳು ಯಾರಾದರೂ ಹೆಣಗಳಿಗೆ ಕೈಕೊಟ್ಟರಾ? ಸಚಿವರಾಗಿದ್ದ ಸುರೇಶ್ ಅಂಗಡಿಯವರ ಹೆಣವನ್ನು ಅವರ ಕುಟುಂಬಸ್ಥರೂ ನೋಡಲಾಗಲಿಲ್ಲ. ಇದೇನಾ ದೇಶದ ಸಂಸ್ಕೃತಿ? ಎಂದು ಪ್ರಶ್ನಿಸಿದ್ರು.

ಒಂದು ಸಮುದಾಯ ಟಾರ್ಗೆಟ್ ಮಾಡಿ ಇಡಿ ದಾಳಿ ಎಂಬ ಆರೋಪ ವಿಚಾರ ಮಾತನಾಡಿದ ಅವರು, ಜಮೀರ್ ಅಹಮ್ಮದ್​ ಈಗಾಗಲೇ ನನ್ನ ತಪ್ಪಿಲ್ಲ ಅಂತಾ ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಹೆಚ್ಚು ಕಮೆಂಟ್ ಮಾಡಲು ಹೋಗಲ್ಲ. ಆದರೆ, ಇಡೀ ದೇಶದಲ್ಲಿ ಎಲ್ಲ ಕಡೆಯೂ ಹೀಗೇ ಆಗ್ತಿದೆ. ಇದರ ವಿರುದ್ಧ ನಾವೂ ಕೂಡ ಹೋರಾಟ‌ ಮಾಡ್ತಿದ್ದೇವೆ ಎಂದರು.

ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲಿನ ಇಡಿ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಜಮೀರ್ ಅಹಮದ್ ಈಗಾಗಲೇ ನನ್ನ ತಪ್ಪಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ಹೆಚ್ಚು ಕಮೆಂಟ್ ಮಾಡಲು ಹೋಗಲ್ಲ. ಆದರೆ ಇಡೀ ದೇಶದಲ್ಲಿ ಎಲ್ಲ ಕಡೆಯೂ ಹೀಗೆಯೇ ಆಗುತ್ತಿದೆ. ಇದರ ವಿರುದ್ಧ ನಾವೂ ಕೂಡಾ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.

ವಿನಯ ಕುಲಕರ್ಣಿ ಯನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ಳುತ್ತೇವೆ. ಅದರಲ್ಲಿ ಅನುಮಾನವೇ ಬೇಡ. ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ನಮ್ಮ ಪಕ್ಷ ಇದೆ ಎಂದು ಭರವಸೆ ನೀಡಿದರು. ವಿನಯ್ ಕುಲಕರ್ಣಿ ವಿರುದ್ದ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಕೇಸ್ ಮಾಡಿದ್ದಾರೆ. ಬಹಳ ಸಂತೋಷ, ಆದರೆ ಇವರ ಕೇಂದ್ರ ಮಂತ್ರಿಗಳು ಎಲ್ಲ ನಿಯಮ ಪಾಲನೆ ಮಾಡಿದ್ದಾರಾ? ಕೇಂದ್ರ ಸಚಿವರಿಗೆ ಒಂದು ಕಾನೂನಾ? ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.

RELATED TOPICS:
English summary :DK shivakumar

ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#

ನ್ಯೂಸ್ MORE NEWS...