ಪ್ಯಾರಾಲಿಂಪಿಕ್ ಹಿಂದಿನ ಅತ್ಯುತ್ತಮ ಪ್ರದರ್ಶನ, ಪದಕ ಪಟ್ಟಿಯನ್ನು ಹಿಂದಿಕ್ಕಿದ ಭಾರತ | ಜನತಾ ನ್ಯೂಸ್
ಟೋಕಿಯೋ : ಪ್ಯಾರಾಲಿಂಪಿಕ್ ಅವನಿ ಲೇಖಾರ ಚಿನ್ನವನ್ನು ಮುಡಿಗೇರಿಸಿಕೊಂಡರು ಮತ್ತು ಮಹಿಳಾ ಆರ್ 2 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ನಲ್ಲಿ ವಿಶ್ವ ದಾಖಲೆಯನ್ನು ಸರಿಗಟ್ಟಿದರು.
ಎರಡು ಬಾರಿ ಚಿನ್ನ ಗೆದ್ದ ಜಾವೆಲಿನ್ ಥ್ರೋ ಅನುಭವಿ ದೇವೇಂದ್ರ ಜಜಾರಿಯಾ ಈ ಬಾರಿ ಮೂರನೇ ಪ್ಯಾರಾಲಿಂಪಿಕ್ ಪದಕ, ಬೆಳ್ಳಿ ಗೆದ್ದರೆ, ಡಿಸ್ಕಸ್ ಎಸೆತಗಾರ ಯೋಗೀಶ್ ಕಠುನಿಯಾ ಕೂಡ ಎರಡನೇ ಸ್ಥಾನ ಗಳಿಸಿದರು, ಈ ಮೂಲಕ ಭಾರತವು ಸೋಮವಾರ ನಡೆದ ಕ್ರೀಡಾಕೂಟದಲ್ಲಿ ತನ್ನ ಹಿಂದಿನ ಅತ್ಯುತ್ತಮ ಪ್ರದರ್ಶನ ಹಾಗೂ ಪದಕ ಪಟ್ಟಿಯನ್ನು ಹಿಂದಿಕ್ಕಿದೆ.
ಪುರುಷರ ಡಿಸ್ಕಸ್ ಥ್ರೋ ಎಫ್46 ಈವೆಂಟ್ನಲ್ಲಿ ಯೋಗೀಶ್ ಕಠುನಿಯಾ ಬೆಳ್ಳಿ ಗೆದ್ದರು. ಪುರುಷರ ಜಾವೆಲಿನ್ ಥ್ರೋ ಎಫ್46 ಫೈನಲ್ನಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಗೆದ್ದರೆ, ಸುಂದರ್ ಸಿಂಗ್ ಗುರ್ಜಾರ್ ಕಂಚು ಪಡೆದಿದ್ದಾರೆ.