ನಾಪತ್ತೆಯಾಗಿದ್ದ ರಾಯಚೂರು FDC ಬೆಂಗಳೂರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ | ಜನತಾ ನ್ಯೂಸ್
ರಾಯಚೂರು : ವಾರದ ಹಿಂದೆ ನಾಪತ್ತೆಯಾಗಿದ್ದ ರಾಯಚೂರು ಎಸಿ ಕಚೇರಿ ಸಿಬ್ಬಂದಿ ಬೆಂಗಳೂರಿನ ಹೋಟೆಲ್ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಾಯಚೂರು ಎಸಿ ಕಚೇರಿಯಲ್ಲಿ ಎಫ್ಡಿಸಿ ಆಗಿದ್ದ ಪ್ರಕಾಶ್ ಬಾಬು ಆ.23ರಂದು ನಾಪತ್ತೆಯಾಗಿದ್ದರು. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಪ್ರಕಾಶ್ ಬಾಬು ಹುಡುಕಾಟಕ್ಕೆ ಎರಡು ತಂಡಗಳನ್ನ ರಾಯಚೂರು ಎಸ್ಪಿ ರಚಿಸಿದ್ದರು. ಪ್ರಾರಂಭದಲ್ಲಿ ಗೋವಾದಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಆದರೆ ನಾಪತ್ತೆಯಾಗಿ 8 ದಿನಗಳ ಬಳಿಕ ಬೆಂಗಳೂರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಆಡಿಟ್ ಟೀಂ ಜಿಲ್ಲೆಗೆ ಬರುತ್ತೆ ಅನ್ನೋ ಮಾಹಿತಿ ತಿಳಿದ ಬಳಿಕ ಪ್ರಕಾಶ್ ಬಾಬು ನಾಪತ್ತೆಯಾಗಿದ್ದರು. ಇದಾದ ಒಂದು ವಾರಕ್ಕೆ ಶವವಾಗಿ ಪತ್ತೆಯಾಗಿದ್ದು, ಅನುಮಾನ ಮೂಡಿಸಿದೆ. ಪ್ರಕಾಶ್ ಬಾಬು ಆತ್ಮಹತ್ಯೆ ಸುತ್ತ ಅನುಮಾನಗಳು ಶುರುವಾಗಿವೆ.