ಭಾರೀ ಮಳೆಗೆ ಕುಸಿದ ಮೇಲ್ಫಾವಣಿ, ಮಹಿಳೆ ಗಂಭೀರ! | ಜನತಾ ನ್ಯೂಸ್
ಮಂಗಳೂರು : ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಹಳೆಯಂಗಡಿ ಸಮೀಪದ 10ನೇ ತೋಕೂರು ಬಳಿ ನಡೆದಿದೆ.
ಓಂಕಾರೇಶ್ವರಿ 2ನೇ ಅಡ್ಡರಸ್ತೆಯಲ್ಲಿ ಶೋಭಾ ಎಂಬುವವರ ಮನೆಯಲ್ಲಿ ಮುಂಜಾನೆ ಸುಮಾರು 4:30ರ ವೇಳೆಗೆ ಮನೆ ಮಂದಿ ಮಲಗಿದ್ದ ಸಮಯದಲ್ಲಿ ಮನೆಯ ಹಂಚುಗಳು ಬೀಳುತ್ತಿದ್ದ ಶಬ್ದಗಳಿಗೆ ಎಚ್ಚೆತ್ತು ಬೆಳಕು ಹಾಕಿ ನೋಡುವಾಗ ಮನೆಯ ಹಂಚು - ಪಕ್ಕಾಸುಗಳು ಒಂದೊಂದೇ ಶಿಥಿಲಗೊಂಡು ಕೆಳಗೆ ಬೀಳುತ್ತಿರುವುದನ್ನು ಕಂಡು ಭಯಬೀತರಾದ ಕುಟುಂಬ ತಕ್ಷಣವೇ ಮಕ್ಕಳೂಂದಿಗೆ ಹೊರಗೆ ಬರುತ್ತಿದ್ದ ಸಂದರ್ಭ ಒಂದೇ ಬಾರಿ ಮನೆಯ ಭಾಗಶಃ ಛಾವಣಿ ಕುಸಿದು ಬಿದ್ದಿದ್ದು ಮನೆಮಂದಿಯನ್ನು ರಕ್ಷಿಸುವಷ್ಟರಲ್ಲಿ ಸುಮಾರು 70 ವರ್ಷ ಪ್ರಾಯದ ಉಮ್ಮಕ್ಕ ಅವರ ಮೇಲೆ ಮೇಲ್ಚಾವಣಿ ಕುಸಿದು ಬಿದ್ದು ಅವರು ಗಂಭೀರವಾಗಿ ಗಾಯಗೊಂಡರು.
ಇವರಿಗೆ ಮುಲ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಲಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.