ಆಸ್ಕರ್‌ ಫೆರ್ನಾಂಡಿಸ್‌ ಒಬ್ಬ ಅಜಾತಶತ್ರು ರಾಜಕಾರಣಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ | ಜನತಾ ನ್ಯೂಸ್

14 Sep 2021
509

ಉಡುಪಿ : ಆಸ್ಕರ್ ಒಬ್ಬ ಅಜಾತಶತ್ರು ರಾಜಕಾರಣಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೆನೆದರು.

ಉಡುಪಿ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಪಕ್ಷದಲ್ಲಿನ ಪ್ರಾಮಾಣಿಕತೆ, ನಾಯಕತ್ವದಲ್ಲಿದ್ದಂತಹ ನಿಷ್ಠೆಯಿಂದಾಗಿಯೇ ಆಸ್ಕರ್‌ ಕೇಂದ್ರಮಟ್ಟದಲ್ಲಿ ನಾಯಕನಾಗಿ ಗುರುತಿಸಿಕೊಂಡವರು. ಯುವಕರಿಗೆ, ಕಿರಿಯರಿಗೆ ಗೌರವ ಕೊಡುವಂತಹ ಏಕೈಕ ರಾಜಕಾರಣಿಯಾಗಿ ಬೆಳೆದು ಬಂದವರು. ಪಕ್ಷ ಸದೃಢ ಆಗಿದ್ದಾಗ ಎಲ್ಲರೂ ಮುಂದೆ ಬಂದು ನಾಯಕತ್ವ ವಹಿಸುತ್ತಾರೆ. ಸಂಕಷ್ಟ ಕಾಲದಲ್ಲಿ ಎರಡು ಬಾರಿ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ್ದರು.

ರಾಜಕೀಯ ಜೀವನದಲ್ಲಿ ನನಗೂ ಆಸ್ಕರ್‌ ಫೆರ್ನಾಂಡಿಸ್‌ ಅವರಿಗೂ ಸುಮಾರು 42 ವರ್ಷಗಳ ನಂಟಿದೆ. ಅವರು ವಿದ್ಯಾರ್ಥಿ ಘಟಕದ ನ್ಯಾಷನಲ್‌ ಕೌನ್ಸಿಲ್‌ ಸದಸ್ಯರಾಗಿದ್ದ ಕಾಲದಿಂದಲೂ ನಾನು ಅವರ ಜತೆಗೆ ಒಡನಾಟ ಹೊಂದಿದ್ದೆ. ಅವರ ಭೇಟಿಗಾಗಿ ಆಗಾಗ ಉಡುಪಿಗೆ ಬರುತ್ತಿದ್ದೆ.

ಉಡುಪಿ ಪುರಸಭೆಯ ಕೌನ್ಸಿಲರ್‌ ಆಗಿ, ಉಡುಪಿ ಡ್ರೈವರ್ ಅಸೋಸಿಯೇಶನ್‌ ಅಧ್ಯಕ್ಷರಾಗಿ, ಹಂತ-ಹಂತವಾಗಿ ನಾಯಕನಾಗಿ ಬೆಳೆದು ಬಂದು ರಾಷ್ಟ್ರ ರಾಜಕಾರಣದಲ್ಲೂ ಸೈ ಎನಿಸಿಕೊಂಡವರು. ಬೆಂಗಳೂರು-ಮೈಸೂರು ದಶ ಪಥ ರಸ್ತೆಗೆ ಅಂಕಿತ ಹಾಕಿದ್ದೆ ಅವರು ಕಾರ್ಮಿಕ ಸಚಿವರಾಗಿದ್ದ ಕಾಲದಲ್ಲಿ ತಂದಂತಹ ಕ್ರಾಂತಿಕಾರಿ ಬದಲಾವಣೆಗಳು ಕಳೆದ ಅರವತ್ತು ವರ್ಷಗಳಲ್ಲಿ ಯಾರೂ ಕೂಡ ಯೋಚನೆ ಮಾಡಿರಲಿಕ್ಕಿಲ್ಲ. ಕಾರ್ಮಿಕರ ಮಕ್ಕಳಿಗೆ ಎಂಬಿಬಿಎಸ್‌ ಸೀಟು, ಎಲ್ಲ ಇಎಸ್‌ಐ ಆಸ್ಪತ್ರೆಗಳನ್ನು ಮೆಡಿಕಲ್‌ ಕಾಲೇಜಾಗಿ ಪರಿವರ್ತನೆ ಮಾಡಿ ಕಾರ್ಮಿಕರ ಮಕ್ಕಳನ್ನು ಮೆಡಿಕಲ್‌ ಕಾಲೇಜಿಗೆ ಉಚಿತ ಸೇರ್ಪಡೆ ಮಾಡುವ ಅವಕಾಶ ಕಲ್ಪಿಸಿದ್ದರು.

ಫೆರ್ನಾಂಡಿಸ್ ರ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ. ಆಸ್ಕರ್ ನಿಧನದಿಂದ ರಾಷ್ಟ್ರ ಕಾಂಗ್ರೆಸ್‍ಗೆ ನಷ್ಟ ಆಗಿದೆ. ಅಗಲಿನ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥನೆ ಮಾಡುತ್ತೇನೆ. ಆಸ್ಕರ್ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಡಿಕೆಶಿ ಪ್ರಾರ್ಥನೆ ಮಾಡಿದರು.

RELATED TOPICS:
English summary :DK shivakumar

ನವೆಂಬರ್ 21ರಂದು ಹಿಂದುಳಿದ ಸಮುದಾಯಗಳ ಸಮಾವೇಶ: ಈಶ್ವರಪ್ಪ | ಜನತಾ ನ್ಯೂ&#
ನವೆಂಬರ್ 21ರಂದು ಹಿಂದುಳಿದ ಸಮುದಾಯಗಳ ಸಮಾವೇಶ: ಈಶ್ವರಪ್ಪ | ಜನತಾ ನ್ಯೂ&#
ರಾಮನಗರ ಚನ್ನಪಟ್ಟಣದ ನೀರಿನ ಟ್ಯಾಂಕ್‌ನಲ್ಲಿ ಮತ್ತೆ ಮಾಂಸದ ಮುದ್ದೆ ಪತ್ತೆ! | ಜನತಾ ನ್ಯೂ&#
ರಾಮನಗರ ಚನ್ನಪಟ್ಟಣದ ನೀರಿನ ಟ್ಯಾಂಕ್‌ನಲ್ಲಿ ಮತ್ತೆ ಮಾಂಸದ ಮುದ್ದೆ ಪತ್ತೆ! | ಜನತಾ ನ್ಯೂ&#
ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂ&#
ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂ&#
ಸ್ನೇಹಿತರ ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ! | ಜನತಾ ನ್ಯೂ&#
ಸ್ನೇಹಿತರ ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ! | ಜನತಾ ನ್ಯೂ&#
ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು | ಜನತಾ ನ್ಯೂ&#
ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು | ಜನತಾ ನ್ಯೂ&#
ನವೋದಯ ವಿದ್ಯಾಲಯದಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು | ಜನತಾ ನ್ಯೂ&#
ನವೋದಯ ವಿದ್ಯಾಲಯದಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು | ಜನತಾ ನ್ಯೂ&#
ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#
ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#

ನ್ಯೂಸ್ MORE NEWS...