ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ, ಕಾರಣ ಬಹಿರಂಗ! | ಜನತಾ ನ್ಯೂಸ್

17 Sep 2021
539

ಬೆಂಗಳೂರು : ಆರ್ಮಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ಸದಾಶಿವನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಹುಲ್ ಭಂಡಾರಿ (17) ಆತ್ಮಹತ್ಯೆ ಮಾಡಿಕೊಂಡಿ ರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ.

ಮೂಲತಃ ಉತ್ತರಖಂಡದವರಾದ ಭಗತ್‍ಸಿಂಗ್ ಅವರು ಸೇನೆಯಲ್ಲಿ ಹವಾಲ್ದಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ಪತ್ನಿ, ಪುತ್ರಿ ಹಾಗೂ ಮಗ ರಾಹುಲ್ ಜೊತೆ ಆರ್.ಟಿ.ನಗರದ ಬೇಕರಿ ಬಳಿ ವಾಸವಾಗಿದ್ದಾರೆ.

ವಿದ್ಯಾರ್ಥಿಯ ಸಾವು ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ತಂದೆಯ ಪಿಸ್ತೂಲ್​​​ನಿಂದಲೇ ವಿದ್ಯಾರ್ಥಿ ಗುಂಡು ಹಾರಿಸಿಕೊಂಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ವಿಪರ್ಯಾಸ ಎಂದರೆ 500 ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ತಂದೆಯ ಜೊತೆ ಮಗ ಜಗಳ ಮಾಡಿಕೊಂಡಿದ್ದನಂತೆ. ಇದೇ ಕಾರಣಕ್ಕಾಗಿ ಆತ ಪಿಸ್ತೂಲ್​​​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಆರ್‌.ಟಿ.ನಗರ ನಿವಾಸಿ ರಾಹುಲ್ ಭಂಡಾರಿ ನಿನ್ನೆ ತಂದೆ ಬಳಿ 500 ರೂಪಾಯಿ ಕೇಳಿದ್ದನಂತೆ.‌ ಕೊಡಲು ನಿರಾಕರಿಸಿದ ತಂದೆ ಕಾರಣವಿಲ್ಲದೆ ಹಣ ನೀಡುವುದಿಲ್ಲ ಎಂದು ಗದರಿಸಿದ್ದರು. ಇದರಿಂದ ಬೇಸರಗೊಂಡ ರಾಹುಲ್ ತಂದೆ ಹೆಸರಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಇಂದು ಮುಂಜಾನೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ರಾಹುಲ್ ಭಂಡಾರಿ ಆರ್ಮಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ರಾಹುಲ್ ಪ್ರತಿನಿತ್ಯ ಬೆಳಗ್ಗೆ 3 ಗಂಟೆಗೆ ಎದ್ದು ಓದುತ್ತಿದ್ದನು. ನಂತರ ವಾಕಿಂಗ್‍ಗೆ ಹೋಗುತ್ತಿದ್ದನಂತೆ. ರಾತ್ರಿ ಅಕ್ಕ ಹಾಗೂ ಫೋಷಕರೊಂದಿಗೆ ಊಟ ಮಾಡಿ ಮಲಗಿದ ರಾಹುಲ್ ಇಂದು ಮುಂಜಾನೆ 4.25ರ ಸುಮಾರಿಗೆ ಎದ್ದು ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಹೊರಗೆ ಹೋಗಿದ್ದಾನೆ.

ಕೆಲ ಸಮಯದ ಬಳಿಕ ತಾಯಿ ಎದ್ದು ನೋಡಿದಾಗ ರಾಹುಲ್ ಕೊಠಡಿಯಲ್ಲಿ ಇರಲಿಲ್ಲ. ಆತನ ಮೊಬೈಲ್‍ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿಲ್ಲ. ಗಾಬರಿಯಾಗಿ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಇಂಡಿಯನ್ ಏರ್‍ಫೆಫೋರ್ಸ್ ಹೆಡ್‍ಕ್ವಾಟ್ರರ್ಸ್‍ನ ಗೋಡೆ ಪಕ್ಕದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ರಾಹುಲ್ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡು ಪೊಲೀಸ್ ಕಂಟ್ರೋಲ್ ರೂಮ್‍ಗೆ ವಿಷಯ ತಿಳಿಸಿದ್ದಾರೆ. ಸ್ಥಳದಲ್ಲೇ ಪಿಸ್ತೂಲು ಪತ್ತೆಯಾಗಿದ್ದು, ಯುವಕನ ತಲೆಯ ಬಲ ಭಾಗದಿಂದ ಸಿಂಗಲ್ ಬುಲೆಟ್ ಹಾದುಹೋಗಿ ಎಡಭಾಗದಿಂದ ಹೊರಬಂದಿದೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ರಾಹುಲ್ ಜೇಬಿನಿಂದ ಮೊಬೈಲ್ ರಿಂಗ್ ಆಗುತ್ತಿತ್ತು. ಪೊಲೀಸರು ಮೊಬೈಲ್ ತೆಗೆದು ಕರೆ ಸ್ವೀಕರಿಸಿದಾಗ ಫೋಷಕರು ಮಾತನಾಡುತ್ತಿರುವುದು ಗೊತ್ತಾಗಿ ಅವರಿಗೆ ವಿಷಯ ತಿಳಿಸಿದ್ದಾರೆ.

RELATED TOPICS:
English summary :Bangalore

ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#

ನ್ಯೂಸ್ MORE NEWS...