ಕೋರ್ಟ್ ಆವರಣದಲ್ಲೇ ಪತ್ನಿ ಕೈ, ಕಾಲು, ತಲೆ ಭಾಗಕ್ಕೆ ಮಚ್ಚಿನಿಂದ ಹೊಡೆದ ಪತಿ! | ಜನತಾ ನ್ಯೂಸ್
ಬೆಳಗಾವಿ : ಕೋರ್ಟ್ ಆವರಣದಲ್ಲೇ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಪತಿ ಆಕೆಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹಿರಿಯ ದಿವಾಣಿ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ನನಗುಂಡಿಕೊಪ್ಪದ ನಿವೃತ್ತ ಸೈನಿಕ ಶಿವಪ್ಪ ಅಡಕಿಯಿಂದ ಕೃತ್ಯ ನಡೆದಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಪತ್ನಿ ಹತ್ಯೆ ಮಾಡಲು ಪತಿಯೇ ಯತ್ನಿಸಿದ ದುರ್ಘಟನೆ ನಡೆದಿದೆ.
ಸೈನಿಕ ಶಿವಪ್ಪ, 11 ವರ್ಷಗಳ ಹಿಂದೆ ವರೂರ್ ಗ್ರಾಮದ ಜಯಮಾಲಾ ಎಂಬವರನ್ನು ಮದುವೆಯಾಗಿದ್ದ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ವರೂರ್ ಗ್ರಾಮದ ಜಯಮಾಲಾರನ್ನು ಮದುವೆ ಆಗಿದ್ದ.
ಪತಿ ಜೊತೆಗೆ ಜಗಳವಾಡಿ ಪತ್ನಿ ಜಯಮಾಲಾ ತವರುಮನೆ ಹುಬ್ಬಳ್ಳಿ ತಾಲೂಕಿನ ವರೂರದಲ್ಲಿ ಇದ್ದಳು ಎನ್ನಲಾಗದೆ. ಬ್ಯಾಂಕ್ ನಲ್ಲಿರುವ ಹಣದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಇಂದು ಬೈಲಹೊಂಗಲ ದಿವಾಣಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇತ್ತು. ವಿಚಾರಣೆಗೆ ಬಂದ ಪತ್ನಿಯ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪತ್ನಿ ಜಯಮಾಲಾ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.