ಸಿದ್ದರಾಮಯ್ಯಗೆ ಆರ್.ಎಸ್.ಎಸ್. ಅಂದ್ರೆ ಏನು ಗೊತ್ತು? ಸಚಿವ ಪ್ರಹ್ಲಾದ ಜೋಶಿ | ಜನತಾ ನ್ಯೂಸ್

01 Oct 2021
601

ಧಾರವಾಡ : ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಾರೆ. ಅದಕ್ಕೇ ಆರ್​ಎಸ್​ಎಸ್​ ಬಗ್ಗೆ ಹೀಗೆಲ್ಲಾ ಮಾತಾಡ್ತಿದ್ದಾರೆ. ನಾವೂ ಅವರ ತರಹ ಕಾಂಗ್ರೆಸ್​ನ ಐಎಸ್​ಐ ಏಜೆಂಟ್​ ಅಂದ್ರೆ ಏನ್​ ಮಾಡ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯಗೆ ಆರ್.ಎಸ್.ಎಸ್. ಅಂದ್ರೆ ಏನು ಗೊತ್ತು? ಮತ ಬ್ಯಾಂಕ್ ರಾಜಕಾರಣಕ್ಕೆ ಹೀಗೆ ಹೇಳಿಕೆ ನೀಡುತ್ತಾರೆ. ಹಿಂದೆ ರಾಮಜನ್ಮಭೂಮಿ ವಿರೋಧ ಮಾಡಿದ್ದರು. ಮುಸ್ಲಿಂ ಮಹಿಳೆಯ ಜೀವನಾಂಶ ವಿಷಯಕ್ಕೂ ವಿರೋಧ ಮಾಡಿದ್ದರು. ಇದೆಲ್ಲದರಿಂದ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಇವರು ಸುಧಾರಿಸಬೇಕು. ಇಲ್ಲದಿದ್ದಲ್ಲಿ ಜನ ಇನ್ನೂ ದಾರಿ ತೋರಿಸ್ತಾರೆ ಎಂದು ಜೋಶಿ ಹೇಳಿದರು.

ಮತಾಂತರ ಬಗ್ಗೆ ಬಗ್ಗೆ ಯಾವುದೇ ಅನುಮಾನ ಇಲ್ಲ. ಹಿಂದೂಗಳ ಬೇರೆ ಜಾತಿಗೆ ಮತಾಂತರ ನಡೆಯುತ್ತಿದ್ದು, ಇದು ನಿಲ್ಲಬೇಕು. ಇದಕ್ಕೆ ಅಗತ್ಯವಾದ ಕಾನೂನು ತಿದ್ದುಪಡಿ ರಾಜ್ಯ ಸರ್ಕಾರ ಮಾಡಬೇಕು. ಜೊತೆಗೆ ಇದನ್ನು ತಡೆಯಲು ಸರ್ವ ರೀತಿಯ ಪ್ರಯತ್ನವೂ ಆಗಬೇಕು ಎಂದರು.

ಭಯೋತ್ಪಾದಕರು ಸತ್ತಾಗ ಸೋನಿಯಾ ಗಾಂಧಿ ಅತ್ತಿದ್ದರು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತದೆ. ಹಿಂದೆ ಬಾಟ್ಲಾ ಶೂಟ್ ಪ್ರಕರಣ ಆಗಿತ್ತು. ಆಗ ಮೋಹನ ಚಂದ್ರ ಶರ್ಮಾ ಸತ್ತಿದ್ದರು. ಆಗ ಸೋನಿಯಾ ಅವರು ಶರ್ಮಾ ಸತ್ತಿದ್ದಕ್ಕೆ ಅತ್ತಿರಲಿಲ್ಲ. ಆದರೆ, ಅಲ್ಲಿ ಟೆರರಿಸ್ಟ್ ಸತ್ತಿದ್ದಕ್ಕೆ ಸೋನಿಯಾ ಗಾಂಧಿ ಅತ್ತಿದ್ದರು. ಇವರ ಸಹಜ ಸ್ವಭಾವವೇ ಇದು ಎಂದರು.

ಮುಸ್ಲಿಂ ತುಷ್ಟೀಕರಣಕ್ಕಾಗಿ ಸಿದ್ದರಾಮಯ್ಯ ಈ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯಗೆ ಆರ್.ಎಸ್.ಎಸ್ ಅಂದರೆ ಏನು ಗೊತ್ತು?. ಮತ ಬ್ಯಾಂಕ್ ರಾಜಕಾರಣಕ್ಕೆ ಹೀಗೆ ಹೇಳಿಕೆ ನೀಡುತ್ತಾರೆ. ಹಿಂದೆ ರಾಮ ಜನ್ಮಭೂಮಿ ವಿರೋಧ ಮಾಡಿದ್ದರು.

ಮುಸ್ಲಿಂ ಮಹಿಳೆಯ ಜೀವನಾಂಶ ವಿಷಯಕ್ಕೂ ವಿರೋಧ ಮಾಡಿದ್ದರು. ಇದೆಲ್ಲದರಿಂದ ಕಾಂಗ್ರೆಸ್ ಅಧೋಗತಿಗೆ ಇಳಿದಿದೆ. ಇವರು ಸುಧಾರಿಸಬೇಕು, ಇಲ್ಲದಿದ್ದಲ್ಲಿ ಜನ ಇನ್ನೂ ದಾರಿ ತೋರಿಸ್ತಾರೆ. ದೇಶದ ಜನಕ್ಕೆ ಆರ್‌ಎಸ್‌ಎಸ್, ಬಿಜೆಪಿ ಏನಂತ ಗೊತ್ತಿದೆ. ಸಿದ್ದರಾಮಯ್ಯ ಆ ಬಗ್ಗೆ ಹೇಳಬೇಕಿಲ್ಲ.

ಸಿದ್ದರಾಮಯ್ಯ ಅವರು ಗೌರವಾನ್ವಿತ ನಾಯಕರು. ವೈಯಕ್ತಿಕವಾಗಿ ಅವರ ಬಗ್ಗೆ ನನಗೂ ಗೌರವ ಇದೆ. ಆದರೆ ಮಾತನಾಡುವಾಗ ಇತಿ ಮೀತಿ ಇರಬೇಕು. ನಾವು ಕಾಂಗ್ರೆಸ್‌ನವರಿಗೆ ಐಎಸ್‌ಐ ಏಜೆಂಟ್ ಅಂದರೆ ಏನ ಮಾಡ್ತಾರೆ. ಆ ರೀತಿ ಮಾತನಾಡುವುದು ಸರಿಯಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

RELATED TOPICS:
English summary :Dharwad

ನವೆಂಬರ್ 21ರಂದು ಹಿಂದುಳಿದ ಸಮುದಾಯಗಳ ಸಮಾವೇಶ: ಈಶ್ವರಪ್ಪ | ಜನತಾ ನ್ಯೂ&#
ನವೆಂಬರ್ 21ರಂದು ಹಿಂದುಳಿದ ಸಮುದಾಯಗಳ ಸಮಾವೇಶ: ಈಶ್ವರಪ್ಪ | ಜನತಾ ನ್ಯೂ&#
ರಾಮನಗರ ಚನ್ನಪಟ್ಟಣದ ನೀರಿನ ಟ್ಯಾಂಕ್‌ನಲ್ಲಿ ಮತ್ತೆ ಮಾಂಸದ ಮುದ್ದೆ ಪತ್ತೆ! | ಜನತಾ ನ್ಯೂ&#
ರಾಮನಗರ ಚನ್ನಪಟ್ಟಣದ ನೀರಿನ ಟ್ಯಾಂಕ್‌ನಲ್ಲಿ ಮತ್ತೆ ಮಾಂಸದ ಮುದ್ದೆ ಪತ್ತೆ! | ಜನತಾ ನ್ಯೂ&#
ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂ&#
ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂ&#
ಸ್ನೇಹಿತರ ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ! | ಜನತಾ ನ್ಯೂ&#
ಸ್ನೇಹಿತರ ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ! | ಜನತಾ ನ್ಯೂ&#
ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು | ಜನತಾ ನ್ಯೂ&#
ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು | ಜನತಾ ನ್ಯೂ&#
ನವೋದಯ ವಿದ್ಯಾಲಯದಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು | ಜನತಾ ನ್ಯೂ&#
ನವೋದಯ ವಿದ್ಯಾಲಯದಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು | ಜನತಾ ನ್ಯೂ&#
ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#
ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#

ನ್ಯೂಸ್ MORE NEWS...