ನಾಯಕರಾಗಿ ಬೆಳೆದ ಮೇಲೆ ಜೆಡಿಎಸ್ ಪಕ್ಷ ಬಿಟ್ಟು ಹೋಗುವುದು ಹೊಸದೇನಲ್ಲ: ಹೆಎಚ್ ಡಿ ಕುಮಾರಸ್ವಾಮಿ | ಜನತಾ ನ್ಯೂಸ್

02 Oct 2021
546

ಬೆಂಗಳೂರು : ನಾಯಕರಾಗಿ ಬೆಳೆದ ಮೇಲೆ ಜೆಡಿಎಸ್ ಪಕ್ಷ ಬಿಟ್ಟು ಹೋಗುವುದು ಹೊಸದೇನಲ್ಲ, ಇದರಿಂದ ಜೆಡಿಎಸ್​ಗೆ ಯಾವುದೇ ಶಾಕ್ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ, ರಮೇಶ್ ಕುಮಾರ್ ಯಾವ ಪಕ್ಷದಲ್ಲಿದ್ದರು, ಜೆಡಿಎಸ್ ಪಕ್ಷ ನಿಂತಿರುವುದು ನಾಯಕರಿಂದ ಅಲ್ಲ. ನಮ್ಮ ಲಕ್ಷಾಂತರ ಕಾರ್ಯಕರ್ತರಿಂದ ಎಂದು ತಿಳಿಸಿದರು.

ಜೆಡಿಎಸ್ ನಾಲ್ಕು ದಿನಗಳ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ನಾಳೆ ಮತ್ತು ನಾಡಿದ್ದು ಅಲ್ಪಸಂಖ್ಯಾತರ ಕಾರ್ಯಾಗಾರ ಏರ್ಪಾಡು ಮಾಡಿದ್ದೇವೆ. ಸೋಮವಾರ ಎಸ್​ಸಿ, ಎಸ್​ಟಿ, ಓಬಿಸಿ ಕಾರ್ಯಾಗಾರ ಏರ್ಪಾಡು ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಕಾರ್ಯಾಗಾರ 1.0 ಯಿಂದ 10.0 ತನಕ ನಿರಂತರ ಪಕ್ಷ ಸಂಘಟನೆಗೆ ಚಾಲನೆ ಕೊಟ್ಟಿದ್ದೇವೆ. ಇದು ಜೆಡಿಎಸ್​ನ ಆರಂಭಿಕ ಶೂರತ್ವ ಅಂತ ಹಲವರು ಭಾವನೆ ಇಟ್ಟುಕೊಂಡಿದ್ದಾರೆ. ಒಂದು ಕಡೆ ಸಂಘಟನೆ, ಇನ್ನೊಂದು ಕಡೆ ಜೆಡಿಎಸ್ ಮನೆ ಖಾಲಿ ಆಗುತ್ತಿದೆ ಎನ್ನುವ ದೊಡ್ಡ ಸುದ್ದಿಗಳು ಬರುತ್ತಿವೆ. ನಮಗೆ ಇದರಲ್ಲಿ ಯಾವುದೇ ಶಾಕ್ ಇಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.

ಪಕ್ಷ ಬಿಡುತ್ತಿರುವವರು ಯಾರೂ ಪಕ್ಷ ಬಲವರ್ಧನೆಗೆ ಶಕ್ತಿ ತುಂಬಿದವರಲ್ಲ. ನಿನ್ನೆ ಒಬ್ಬರು ಬಿಜೆಪಿಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ. ಆ ವ್ಯಕ್ತಿ ಹಿಂದೆ ರಾಮಕೃಷ್ಣ ಹೆಗಡೆ ಕಾಲದಿಂದ ಹಲವು ಬಾರಿ ಪರಿಷತ್ ಚುನಾವಣೆಯಲ್ಲಿ ಎಂದೂ ಯಶಸ್ಸು ಕಂಡಿರಲಿಲ್ಲ. ಅವರು ಗೆದ್ದಿದ್ದು ನನ್ನ ಬಲದಿಂದ. ಇಂಥ ಪ್ರಸಂಗಗಳು ನಡೆಯುತ್ತಿರುವ ಹಿನ್ನೆಲೆ ನಾಡಿನ ಜನತೆಯ ಗಮನಕ್ಕೂ ತರುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

RELATED TOPICS:
English summary :Bangalore

ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#

ನ್ಯೂಸ್ MORE NEWS...