ಕಾರಿನ ಟೈರ್ ಸ್ಫೋಟ, ತಾಯಿ-ಮಗ ಕಾರಿನಲ್ಲೇ ಸಾವು! | ಜನತಾ ನ್ಯೂಸ್
ಮೈಸೂರು : ಕಾರಿನ ಟೈರ್ ಸ್ಫೋಟಗೊಂಡಿದ್ದು ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ನಡೆದಿದೆ.
ಗುಣಲಕ್ಷ್ಮಿ (35) ಹಾಗೂ ದೈವಿಕ್ (12) ಮೃತರು. ಗುಣಲಕ್ಷ್ಮೀ ಅವರ ಪತಿ ಜಗದೀಶ್ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಜಗದೀಶ್ ಕಾರು ಚಾಲನೆ ಮಾಡಿಕೊಂಡು ಪೂಜೆಗೆಂದು ಕುಶಾಲನಗರಕ್ಕೆ ತಂದೆ-ತಾಯಿ-ಮಗ ಮೂವರು ಕಾರಿನಲ್ಲಿ ತೆರಳಿದ್ದರು. ಪೂಜೆ ಮುಗಿಸಿಕೊಂಡು ವಾಪಸ್ ಮೈಸೂರಿಗೆ ತೆರಳಿದ್ದರು.
ಮನೆಗೆ ಇನ್ನು ಒಂದು ಕಿ.ಮೀ ದೂರದಲ್ಲಿರುವಾಗ ಇಂದು ಮುಂಜಾನೆ 4.30ರ ಸಮಯದಲ್ಲಿ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಕಾರಿನ ಟೈಯರ್ ಬ್ಲಾಸ್ಟ್ ಆಗಿದ್ದು, ಕಂಬಕ್ಕೆ ಕಾರು ಡಿಕ್ಕಿಯಾಗಿದೆ.
ಈ ಪರಿಣಾಮ ಕಾರು ಕಂಬಕ್ಕೆ ಗುದ್ದಿದೆ. ಕಾರು ಓಡಿಸುತ್ತಿದ್ದ ಜಗದೀಶ್ ಗೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗದ ಗಾಜಿಗೆ ಡಿಕ್ಕಿ ಹೊಡೆದು ಗುಣಲಕ್ಷ್ಮೀ ಪ್ರಾಣಬಿಟ್ಟರೆ, ಅತ್ತ ಹಿಂಬದಿ ಸೀಟ್ನಲ್ಲಿ ಕುಳಿತ್ತಿದ್ದ ಪುತ್ರ ದೈವಿಕ್ಗೆ ಸೀಟ್ ಬೆಲ್ಟ್ ಕುತ್ತಿಗೆ ಸಿಕ್ಕಿ ಹಾಕಿಕೊಂಡು ಕೊನೆಯುಸಿರೆಳೆದಿದ್ದಾನೆ.
ಮೈಸೂರಿನ ಕುವೆಂಪು ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.