ಯುವಕನ ಕೊಲೆ, ಯುವತಿಯ ತಂದೆ-ತಾಯಿ ಸೇರಿ 10 ಮಂದಿ ಅರೆಸ್ಟ್! | ಜನತಾ ನ್ಯೂಸ್

08 Oct 2021
466

ಬೆಳಗಾವಿ : ಜಿಲ್ಲೆಯ ಖಾನಾಪುರ ಹೊರವಲಯದಲ್ಲಿ ಸೆ.28ರಂದು ನಡೆದಿದ್ದ ಯುವಕನ ಕೊಲೆ ಪ್ರಕರಣದಲ್ಲಿ ಮೃತನ ಪ್ರೇಯಸಿಯ ತಂದೆ-ತಾಯಿ ಸೇರಿ 10 ಮಂದಿಯನ್ನ ಬಂಧಿಸಿದ್ದಾರೆ.

ಯುವತಿ ತಂದೆ ಈರಪ್ಪ ಕಂಬಾರ, ತಾಯಿ ಸುಶೀಲಾ ಕಂಬಾರ, ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ್, ಕುತಬುದ್ದೀನ್ ಬೇಪಾರಿ, ಪ್ರಲ್ಹಾದ್ ಸುಗತೆ, ಮಂಜುನಾಥ ಗೋಂದಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಸೇರಿ ಒಟ್ಟು 10 ಆರೋಪಿಗಳನ್ನ ಬಂಧಿಸಲಾಗಿದೆ.

ಖಾನಾಪುರದ ಯುವಕ ಅರ್ಬಾಜ್​ ಮುಲ್ಲಾ(24) ಮೃತ ದುರ್ದೈವಿ. ವಾಹನಗಳ ಬ್ರೋಕರ್ ‌ಆಗಿ ಕೆಲಸ ಮಾಡುತ್ತಿದ್ದ ಅರ್ಬಾಜ್ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಈರಪ್ಪ-ಸುಶೀಲಾ ದಂಪತಿಯ ಹಿರಿಯ ಪುತ್ರಿ ಹಾಗೂ ಅರ್ಬಾಜ್ ಕಳೆದ 4 ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹಲವು ಸಲ ರಾಜಿ ಪಂಚಾಯತ್ ಮಾಡಿ ಇಬ್ಬರನ್ನೂ ಬೇರ್ಪಡಿಸುವ ಪ್ರಯತ್ನ ನಡೆಸಿದ್ದರು ಆದರೆ ಅದು ಕೈಗೊಡಲಿಲ್ಲ.

ನಂತರದಲ್ಲಿ ಯುವತಿ ತಂದೆ ಈರಪ್ಪ ಕುಂಬಾರ ಮತ್ತು ತಾಯಿ ಸುಶೀಲಾ ಕುಂಬಾರ ಇಬ್ಬರೂ ಮಗಳ ಪ್ರಿಯಕರನ ಕೊಲೆಗೆ ಸಂಚು ರೂಪಿಸಿದ್ದರು. ಪುಂಡಲಿಕ ಅಲಿಯಾಸ್​ ಮಹಾರಾಜ್ ಮುತಗೇಕರ್ ಎಂಬಾತನಿಗೆ ಸುಪಾರಿ ಕೊಟ್ಟಿದ್ದರು.

ಸೆ.28ರಂದು ಅರ್ಬಾಜ್​ನನ್ನು ಕರೆಸಿಕೊಂಡ ಪುಂಡಲೀಕನ ತಂಡ ಕೊಲೆ ಮಾಡಿ ಅನುಮಾನ ಬಾರದಂತೆ ರೈಲ್ವೆ ಹಳಿ ಮೇಲೆ ಶವ ಎಸೆದು ಹೋಗಿದ್ದರು. ಮಗನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ನಾಜಿಮಾ ಶೇಕ್ ಸೆ.29ರಂದು ರೈಲ್ವೆ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದರು.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿವೈಎಸ್​ಪಿ ಶಿವಾನಂದ ಕಟಗಿ ನೇತೃತ್ವದ ತಂಡ ತನಿಖೆ ನಡೆಸಿದ್ದು, ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಅರ್ಬಾಜ್​ನನ್ನು ಪ್ರೇಯಸಿ ಕುಟುಂಬಸ್ಥರೇ ಸೇರಿಕೊಂಡು ಕೊಲೆ ಮಾಡಿಸಿರುವುದು ತಿಳಿದುಬಂದಿದೆ.

RELATED TOPICS:
English summary :Belagavi

ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಸಿದ್ದರಾಮಯ್ಯ ಕಂಡರೆ ಕುರುಬರಿಗೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್ | ಜನತಾ ನ್ಯೂ&#
ಸಿದ್ದರಾಮಯ್ಯ ಕಂಡರೆ ಕುರುಬರಿಗೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್ | ಜನತಾ ನ್ಯೂ&#
ಹೃದಯ ವಿದ್ರಾವಕ ಘಟನೆ: ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ! | ಜನತಾ ನ್ಯೂ&#
ಹೃದಯ ವಿದ್ರಾವಕ ಘಟನೆ: ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ! | ಜನತಾ ನ್ಯೂ&#
ಬೆಂಗಳೂರಿನಲ್ಲಿ ನಿಷೇಧಿತ 1 ಸಾವಿರ ಮುಖಬೆಲೆಯ, 5 ಕೋಟಿಯಷ್ಟು ಕಲರ್ ಜೆರಾಕ್ಸ್ ನೋಟುಗಳ ವಶ..! | ಜನತಾ ನ್ಯೂ&#
ಬೆಂಗಳೂರಿನಲ್ಲಿ ನಿಷೇಧಿತ 1 ಸಾವಿರ ಮುಖಬೆಲೆಯ, 5 ಕೋಟಿಯಷ್ಟು ಕಲರ್ ಜೆರಾಕ್ಸ್ ನೋಟುಗಳ ವಶ..! | ಜನತಾ ನ್ಯೂ&#
ನನ್ನ ಸಾವಿಗೆ ಕೆಟ್ಟ ಶಿಕ್ಷಣ ವ್ಯವಸ್ಥೆಯೇ ಕಾರಣ, ವೀಡಿಯೋ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ | ಜನತಾ ನ್ಯೂ&#
ನನ್ನ ಸಾವಿಗೆ ಕೆಟ್ಟ ಶಿಕ್ಷಣ ವ್ಯವಸ್ಥೆಯೇ ಕಾರಣ, ವೀಡಿಯೋ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 10 ಸಾವು, 290 ಹೊಸ ಪ್ರಕರಣ : ಬೆಂಗಳೂರಿನಲ್ಲಿ 137 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 10 ಸಾವು, 290 ಹೊಸ ಪ್ರಕರಣ : ಬೆಂಗಳೂರಿನಲ್ಲಿ 137 | ಜನತಾ ನ್ಯೂ&#
2 ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು | ಜನತಾ ನ್ಯೂ&#
2 ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು | ಜನತಾ ನ್ಯೂ&#
ಶಾಲೆಗೆಂದು ಹೇಳಿ ಈಜಲು ಹೋದ ಬಾಲಕ ಕೆರೆ ಪಾಲು! | ಜನತಾ ನ್ಯೂ&#
ಶಾಲೆಗೆಂದು ಹೇಳಿ ಈಜಲು ಹೋದ ಬಾಲಕ ಕೆರೆ ಪಾಲು! | ಜನತಾ ನ್ಯೂ&#

ನ್ಯೂಸ್ MORE NEWS...