ಆರ್ ಎಸ್ ಎಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಗ್ಗೆ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು! | ಜನತಾ ನ್ಯೂಸ್

08 Oct 2021
486

ಬೆಂಗಳೂರು : ಆರ್ ಎಸ್ ಎಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಗ್ಗೆ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು. ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಅಪ್ಪಟ ಸುಳ್ಳು ಎಂದರು.

ನಾವು ಅಡ್ವಾಣಿಯವರು ಒಂದು ಕಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವು. ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಯೋಜನೆ ಮಾಡಲಾಗಿತ್ತು. ಆರ್ ಎಸ್‌ಎಸ್ ನ ಆಗಿನ ಪರಿಸ್ಥಿತಿಯೇ ಬೇರೆ. ಅವತ್ತಿನ ಕಾರ್ಯಕ್ರಮದಲ್ಲಿ ಏನು ಹೇಳಬೇಕೋ ಹೇಳಿದ್ದೇನೆ. ಆದರೆ ಬೆಂಬಲ ಕೊಟ್ಟಿದ್ದೇನೆ ಎಂದರೆ ಏನು ಹೇಳುವುದು. ವಾಜಪೇಯಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ. ನಮಗೂ ಆರ್ ಎಸ್‌ಎಸ್ ಗೂ ಏನು ಸಂಬಂಧ ಇಲ್ಲ ಎಂದು ಅವರು ಹೇಳಿದರು.

ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆದರೆ ಹಣಕಾಸಿನ‌ ಸಮಸ್ಯೆ ಇದ್ದರೂ ಕಾರ್ಯಗತ ಮಾಡುತ್ತೇವೆ. ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದ್ದೆವು. ಆ ವೇಳೆ ಇದನ್ನೆಲ್ಲ‌ ನಿರೀಕ್ಷೆ ಮಾಡಿರಲಿಲ್ಲ. ಅಧಿಕಾರಕ್ಕೆ ಬಂದರೆ 28 ಸಾವಿರ ಕೋಟಿ ಸಾಲ‌ಮನ್ನಾ ಮಾಡುತ್ತೇನೆ ಎಂದು‌‌ ಕುಮಾರಸ್ವಾಮಿ ಹೇಳಿದ್ದರು. ಆಗ ಕುಮಾರಸ್ವಾಮಿ ಮಾತನ್ನು ನನಗೆ ನಂಬಲು‌ ಆಗಿರಲಿಲ್ಲ. ಹೇಗೆ ಸಾಲಮನ್ನಾ ಮಾಡುತ್ತಾನೆ‌‌ ಎಂದು ಅನುಮಾನ ಇತ್ತು. ಹೇಗೆ ಅಷ್ಟೊಂದು ಹಣ ಹೊಂದಿಸುತ್ತಾರೆ ಎಂದು. ಆದರೆ ವಿಧಿಯಾಟವೇ ಬೇರೆ ಇತ್ತು. ನಿಚ್ಚಳ ಬಹುಮತ ಕಳೆದ ಬಾರಿ ಆಗಲಿಲ್ಲ ಎಂದರು.

ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸೋನಿಯಾ ಗಾಂಧಿಗೆ ಹೇಳಿದ್ದೆ. ಕಾಂಗ್ರೆಸ್‌ಗೆ ಹೆಚ್ಚು ಸೀಟುಗಳು ಬಂದಿದ್ದವು. ನಾವು ಮುಖ್ಯಮಂತ್ರಿ ಸ್ಥಾನ ಪಡೆದರೆ ಅಭಾಸ ಆಗುತ್ತದೆ. ಹೀಗಾಗಿ ಖರ್ಗೆ ಅವರನ್ನೇ ಸಿಎಂ ಮಾಡಿ ಎಂದಿದ್ದೆ. ಖರ್ಗೆಯವರು ಕೂಡ ಅದಕ್ಕೆ ಒಪ್ಪಿದ್ದರು.. ಸೋನಿಯಾಗಾಂಧಿಗೆ ಒಪ್ಪಿಸುತ್ತೇನೆ ಎಂದು ಗುಲಾಮ್‌ನಬಿ ಆಜಾದ್ ಹೇಳಿದ್ದರು. ಆದರೆ ಕೊನೆಗೆ ಕುಮಾರಸ್ವಾಮಿ ಸಿಎಂ ಆಗಬೇಕೆಂದು ಒಪ್ಪಿಸಿದರು ಎಂದು ಹೇಳಿದರು.

ಇನ್ನೂ ಸಿದ್ದರಾಮಯ್ಯ ಅವರ ಎಲ್ಲಾ ಷರತ್ತಿನ ಜೊತೆಗೆ ಕುಮಾರಸ್ವಾಮಿ ಸಾಲ‌ಮನ್ನಾ ಮಾಡಿದರು. ಕುಮಾರಸ್ವಾಮಿ ಆರ್ಥಿಕ ತಜ್ಞ ಏನಲ್ಲ. ಸಿದ್ದರಾಮಯ್ಯ ಹಾಗೆ ಸಾಕಷ್ಟು ಬಾರಿ ಬಜೆಟ್ ಮಂಡಿಸಿಲ್ಲ. ಆದರೆ ಸಂಪನ್ಮೂಲ ಕ್ರೋಢೀಕರಿಸಿ ಯೋಜನೆ ತಂದರು. ಹಿಂದಿನ ಎಲ್ಲ‌ ಯೋಜನೆಗಳಿಗೆ ಹಣ‌ಹೊಂದಿಸಿದರು. ಹೇಳಿದ‌ ಮಾತನ್ನು ಕುಮಾರಸ್ವಾಮಿ ಮಾಡುತ್ತಾರೆ ಎಂಬುದನ್ನು ಸಾಬೀತು ಪಡಿಸಿದರು ಎಂದು ತಿಳಿಸಿದರು.

ಎರಡು ಉಪ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿರುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ನಾರಾಯಣರಾವ್ ನನ್ನ ಶಿಷ್ಯ ಆವರನ್ನು ಜಾತಿ ಮೇಲೆ ಬೆಳೆಸಲಿಲ್ಲ. ಬಸವಕಲ್ಯಾಣದಲ್ಲಿ 50 ಸಾವಿರ ಮುಸ್ಲೀಮರಿದ್ದಾರೆ. ಅದಕ್ಕೆ ಅನಿವಾರ್ಯ ಕಾರಣದಿಂದ ಅವರನ್ನು ನಿಲ್ಲಿಸಬೇಕಾಯಿತು. ನಾನು ಜಾತಿ ಮೇಲೆ ಯಾರನ್ನೂ ಬೆಳೆಸಿಲ್ಲ. ಸಿಂಧಗಿಯಲ್ಲಿ ಎಂ.ಸಿ. ಮನಗೂಳಿಗೆ ನಾನೇ ಟಿಕೆಟ್ ಕೊಡಿಸಿದ್ದೆ. ಅವರ ವಿರುದ್ಧ ಕಾಗ್ರೆಸ್ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದರು. ಆಗ ಮನಗೂಳಿಯನ್ನು ಗೆಲ್ಲಿಸಿಕೊಂಡು ಬಂದೆ. ಸಿಂದಗಿಗೆ ಕುಡಿಯುವ ನೀರು ಕೊಡಿಸಿದ್ದಕ್ಕೆ ನನ್ನ ಪ್ರತಿಮೆ ಮಾಡಿಸಿದರು. ನಾವು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ. ನಮ್ಮ ಅಭ್ಯರ್ಥಿ ಗೆಲ್ಲಿಸಿಕೊಡಿ ಎಂದು ಕೇಳಿದ್ದೇನೆ ಎಂದರು.

ಮುಸ್ಲೀಮರನ್ನೇನು ಇವರು ಗುತ್ತಿಗೆ ಪಡೆದಿದ್ದಾರಾ? ಕಾಂಗ್ರೆಸ್ ನವರು ಎಷ್ಟು ಜನ ಮುಸ್ಲೀಮರಿಗೆ ಅವಕಾಶ ಕೊಟ್ಟಿದ್ದಾರೆ, ರೆಹಮಾನ್ ಖಾನ್ ಏನಾದರು? ಎಲ್ಲದರ ಬಗ್ಗೆಯೂ ಚರ್ಚೆಯಾಗಲಿ ನಾನು ವಿಜಯಪುರದಲ್ಲಿ ಇರುತ್ತೇನೆ. ಜೆಡಿಎಸ್ ನ್ನು ಮುಗಿಸಲು ಪ್ರಯತ್ನ ಮಾಡುತ್ತಿದ್ದೀರಾ ಎಂದು ಎಚ್ ಡಿಡಿ ಪ್ರಶ್ನಿಸಿದರು.

RELATED TOPICS:
English summary :H D Devegowda

ನವೆಂಬರ್ 21ರಂದು ಹಿಂದುಳಿದ ಸಮುದಾಯಗಳ ಸಮಾವೇಶ: ಈಶ್ವರಪ್ಪ | ಜನತಾ ನ್ಯೂ&#
ನವೆಂಬರ್ 21ರಂದು ಹಿಂದುಳಿದ ಸಮುದಾಯಗಳ ಸಮಾವೇಶ: ಈಶ್ವರಪ್ಪ | ಜನತಾ ನ್ಯೂ&#
ರಾಮನಗರ ಚನ್ನಪಟ್ಟಣದ ನೀರಿನ ಟ್ಯಾಂಕ್‌ನಲ್ಲಿ ಮತ್ತೆ ಮಾಂಸದ ಮುದ್ದೆ ಪತ್ತೆ! | ಜನತಾ ನ್ಯೂ&#
ರಾಮನಗರ ಚನ್ನಪಟ್ಟಣದ ನೀರಿನ ಟ್ಯಾಂಕ್‌ನಲ್ಲಿ ಮತ್ತೆ ಮಾಂಸದ ಮುದ್ದೆ ಪತ್ತೆ! | ಜನತಾ ನ್ಯೂ&#
ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂ&#
ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂ&#
ಸ್ನೇಹಿತರ ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ! | ಜನತಾ ನ್ಯೂ&#
ಸ್ನೇಹಿತರ ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ! | ಜನತಾ ನ್ಯೂ&#
ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು | ಜನತಾ ನ್ಯೂ&#
ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು | ಜನತಾ ನ್ಯೂ&#
ನವೋದಯ ವಿದ್ಯಾಲಯದಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು | ಜನತಾ ನ್ಯೂ&#
ನವೋದಯ ವಿದ್ಯಾಲಯದಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು | ಜನತಾ ನ್ಯೂ&#
ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#
ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#

ನ್ಯೂಸ್ MORE NEWS...