ಮತ್ತು ಬರಿಸುವ ಚಾಕಲೇಟ್ ನೀಡಿ ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್! | ಜನತಾ ನ್ಯೂಸ್
ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಶಾಲೆಗೆ ಹೋಗುತ್ತಿದ್ದ 16 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಬಗ್ಗೆ ದೂರು ದಾಖಲಾಗಿದೆ.
ಅಪ್ರಾಪ್ತೆ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್ ರೇಪ್ ಕೃತ್ಯ ನಿನ್ನೆ ನಡೆದಿದ್ದು. ಬಂಟ್ವಾಳದ ಎಸ್ ವಿ ಎಸ್ ಶಾಲೆಯ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಬಾಲಕಿಗೆ ಮತ್ತು ಬರಿಸುವ ಚಾಕಲೇಟ್ ನೀಡಿ ಅಪಹರಿಸಸಲಾಗಿದೆ. ಬಳಿಕ ಆಕೆಯನ್ನು ಬಂಟ್ವಾಳದ ಅಮ್ಟಾಡಿಯ ರೂಂ ಒಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ.
ಸಂತ್ರಸ್ತ ಅಪ್ರಾಪ್ತೆಯನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಐದು ಜನ ಆರೋಪಿಗಳಿಂದ ಈ ಗ್ಯಾಂಗ್ರೇಪ್ ನಡೆದಿದೆ ಎನ್ನಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.