ಕಟ್ಟಿಗೆ ತರಲು ಹೋದ ಬಾಲಕಿ ಅನುಮಾನಾಸ್ಪದ ಸಾವು! | ಜನತಾ ನ್ಯೂಸ್
ಕಲಬುರಗಿ : ಮನೆ ಸಮೀಪದ ಗುಡ್ಡಕ್ಕೆ ಕಟ್ಟಿಗೆ ತರಲೆಂದು ಹೋಗಿದ್ದ ಹದಿನೈದು ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಕಲಬುರಗಿ ತಾಲೂಕಿನ ಪಾಣೇಗಾಂವ್ ಎಂಬಲ್ಲಿ ನಡೆದಿದೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ವಿಷ ಕುಡಿಸಿರುವ ಆರೋಪ ಕೇಳಿಬಂದಿದೆ. ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಕಳೆದ ರಾತ್ರಿ ಸಾವನ್ನಪ್ಪಿದ್ದಾಳೆ.
ಪಾಣೆಗಾಂವ್ ಗ್ರಾಮದ ಸುನಿಲ್, ಸ್ನೇಹಿತನ ವಿರುದ್ಧ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಹಳೆ ವೈಷಮ್ಯದಿಂದ ವಿಷ ಕುಡಿಸಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಫರಹತಬಾದ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
English summary :Kalburgi