ಪಂಜಾಬ್ ಸಿಎಂ ಚನ್ನಿ ಮಗನ ಮದುವೆಗೆ ಗೈರಾದ ಸಿಧು ಕೊಟ್ಟ ಹೇಳಿಕೆ ಏನು? | ಜನತಾ ನ್ಯೂಸ್

11 Oct 2021
550

ಮೊಹಾಲಿ : ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರ ಮಗ ನವಜಿತ್ ಸಿಂಗ್ ಅವರ ವಿವಾಹ ಭಾನುವಾರ(ಅಕ್ಟೋಬರ್ 10, 2021) ಮೊಹಾಲಿಯಲ್ಲಿ ನಡೆದಿದೆ. ಸಿಖ್ ಆಚರಣೆಗಳ ಪ್ರಕಾರ "ಆನಂದ್ ಕರಾಜ್" ಅನ್ನು ಗುರುದ್ವಾರ ಸಚ್ಚಾ ಧನ್ ನಲ್ಲಿ ನಡೆಸಿದ್ದು ವಿಶೇಷವಾಗಿತ್ತು.

ಪಂಜಾಬ್ ರಾಜ್ಯದ ಕಾಂಗ್ರೆಸ್ ಘಟಾನುಘಟಿಗಳಿಂದ ತುಂಬಿತುಳುಕುತ್ತಿದ್ದ ಮುಖ್ಯಮಂತ್ರಿ ಚನ್ನಿ ಮಗನ ಮದುವೆ ಸಂದರ್ಭದಲ್ಲಿ ಪಂಜಾಬ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಗೈರು ಹಾಜರಿ ಎದ್ದು ಕಾಣುತ್ತಿದ್ದುದು ವಿಶೇಷ ಎನ್ನಲಾಗಿದೆ. ಸಿಎಂ ಚನ್ನಿ ವಿರುದ್ಧ ಸಿಧು ನಿರಂತರ ರಾಜಕೀಯ ಹೇಳಿಕೆ ನಿಡುತ್ತಿದ್ದರೂ, ಸಿಎಂ ಮಗನ ಮದುವೆಗೆ ಹಾಜರಾಗುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ, ನವಜೋತ್ ಸಿಂಗ್ ಸಿಧು ಮಾತೆ ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡಲು ಜಮ್ಮುವಿನಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ, ಎಂದು ಸಮಜಾಯಿಷಿ ನೀಡಲಾಗಿದೆ.

"ನವರಾತ್ರಿಯ ಸಮಯದಲ್ಲಿ ಆದಿ ತಾಯಿಯ ದರ್ಶನವು ಸಮನ್ವಯಗೊಳಿಸುತ್ತಿದೆ ... ಆತ್ಮದಿಂದ ಎಲ್ಲಾ ಕೊಳೆಯನ್ನು ತೊಳೆಯುತ್ತದೆ !! ಮಾತಾ ವೈಷ್ಣೋ ದೇವಿಯ ಚರಣ ಕಮಲದಲ್ಲಿರಲು ಆಶಿರ್ವಾದ ಪಡೆದಿದ್ದೇನೆ" ಎಂದು ಸಿದ್ದು ಟ್ವೀಟ್ ಮಾಡಿದ್ದಾರೆ ಮತ್ತು ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇನ್ನೂಳಿದಂತೆ, ಸಿಎಂ ಚನ್ನಿ ಮಗನ ಮದುವೆಯಲ್ಲಿ ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್, ಉಪ ಮುಖ್ಯಮಂತ್ರಿಗಳಾದ ಸುಖಜಿಂದರ್ ಸಿಂಗ್ ರಾಂಧವಾ, ಒಪಿ ಸೋನಿ, ಸಚಿವರಾದ ಮನ್ ಪ್ರೀತ್ ಸಿಂಗ್ ಬಾದಲ್, ಬ್ರಹ್ಮ ಮೊಹಿಂದ್ರಾ, ಪರ್ಗತ್ ಸಿಂಗ್, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಶಾಸಕ ರಾಣಾ ಗುರ್ಮಿತ್ ಸೋಧಿ, ಸಂಸದ ಮನೀಶ್ ತಿವಾರಿ ಸರಳ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.

RELATED TOPICS:
English summary :Sidhu statement after skipping Panjab CM Channi son marriage

ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂ&#
ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನ! | ಜನತಾ ನ್ಯೂ&#
ಸ್ನೇಹಿತರ ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ! | ಜನತಾ ನ್ಯೂ&#
ಸ್ನೇಹಿತರ ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ! | ಜನತಾ ನ್ಯೂ&#
ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು | ಜನತಾ ನ್ಯೂ&#
ವಾಹನ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್​ನಿಂದ ಬಿದ್ದು ಇಬ್ಬರ ಸಾವು | ಜನತಾ ನ್ಯೂ&#
ನವೋದಯ ವಿದ್ಯಾಲಯದಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು | ಜನತಾ ನ್ಯೂ&#
ನವೋದಯ ವಿದ್ಯಾಲಯದಲ್ಲಿ 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು | ಜನತಾ ನ್ಯೂ&#
ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#
ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆ! | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಸಿದ್ದರಾಮಯ್ಯ ಕಂಡರೆ ಕುರುಬರಿಗೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್ | ಜನತಾ ನ್ಯೂ&#
ಸಿದ್ದರಾಮಯ್ಯ ಕಂಡರೆ ಕುರುಬರಿಗೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್ | ಜನತಾ ನ್ಯೂ&#
ಹೃದಯ ವಿದ್ರಾವಕ ಘಟನೆ: ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ! | ಜನತಾ ನ್ಯೂ&#
ಹೃದಯ ವಿದ್ರಾವಕ ಘಟನೆ: ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ! | ಜನತಾ ನ್ಯೂ&#

ನ್ಯೂಸ್ MORE NEWS...