ಬೆಂಗಳೂರಿನಿಂದ ನಾಪತ್ತೆಯಾದ ಮಕ್ಕಳು ಆಟೋ ಚಾಲಕನ ಸಮಯಪ್ರಜ್ಞೆಯಿಂದ ಮಂಗಳೂರಿನಲ್ಲಿ ಪತ್ತೆ! | ಜನತಾ ನ್ಯೂಸ್

12 Oct 2021
532

ಬೆಂಗಳೂರು : ಕಳೆದ ಭಾನುವಾರದಿಂದ ಹೆತ್ತವರ ನಿದ್ದಗೆಡಿಸಿದ್ದ 7 ಮಂದಿ ಮಕ್ಕಳಲ್ಲಿ ಮೂರು ಮಂದಿ ಸೋಮವಾರ ಬೆಂಗಳೂರಿನಲ್ಲಿ ಪತ್ತೆಯಾಗಿದ್ದರು. ಎರಡು ದಿನಗಳ ಹಿಂದೆ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ಬಿಸಿಎ ವಿದ್ಯಾರ್ಥಿನಿ ಹಾಗೂ ಮೂವರು ಮಕ್ಕಳು ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

ಮನೆ ತೊರೆದಿದ್ದ ಸೋಲದೇವಹಳ್ಳಿ ಠಾಣಾ ವ್ಯಾಪ್ತಿಯ ಎಜಿಬಿ ಲೇಔಟ್ ನಲ್ಲಿರುವ ಕ್ರಿಶ್ಚಲ್ ಅಪಾರ್ಟ್​​ಮೆಂಟ್​​ನ ನಿವಾಸಿಗಳಾದ ಬಿಸಿಎ ವ್ಯಾಸಂಗ ಮಾಡುತ್ತಿರುವ ಅಮೃತವರ್ಷಿಣಿ, 12 ವರ್ಷದ ರಾಯನ್ ಸಿದ್ದಾಂತ್, ಭೂಮಿ, ಚಿಂತನ್ ಎಂಬುವವರು ಪತ್ತೆ ಆಗಿದ್ದಾರೆ.

ಒಂದೇ ಅಪಾರ್ಟ್​​ಮೆಂಟ್​​ನಲ್ಲಿ ನಾಲ್ವರು ವಾಸವಾಗಿದ್ದರು. ಪರಸ್ಪರ ಸ್ನೇಹಿತರಾಗಿದ್ದ ಈ ಮಕ್ಕಳು ಎರಡು ದಿನಗಳ ಹಿಂದೆ‌ ಕ್ರೀಡೆಯಲ್ಲಿ ಆಸಕ್ತಿಯಿದ್ದು, ಸಾಧನೆ ಮಾಡಿ ಬರುವುದಾಗಿ ಪತ್ರ ಬರೆದು ಮನೆ ತೊರೆದಿದ್ದರು.

ಹೋಗುವಾಗ ಹಣ, ಚಿನ್ನ ಹಾಗೂ‌ ಫುಡ್ ಪ್ಯಾಕೇಟ್ ಹಾಗೂ ಇನ್ನಿತರೆ ವಸ್ತುಗಳನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದರು. ಈ ಸಂಬಂಧ ಪೋಷಕರು ನೀಡಿದ ದೂರಿನ ಮೇರೆಗೆ ಸೋಲದೇವಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಸೋಮವಾರ ರಾತ್ರಿ ಬೆಂಗಳೂರಿನಿಂದ ಖಾಸಗಿ ಬಸ್ ಹತ್ತಿದ್ದ ಅಮೃತವರ್ಷಿಣಿ ಮತ್ತು ಮೂವರು ಮಕ್ಕಳು ಮಂಗಳವಾರ ಬೆಳಗ್ಗೆ ಮಂಗಳೂರನ್ನು ಸೇರಿದ್ದರು. ಬೆಳಗ್ಗೆ 7 ಗಂಟೆ ಸುಮಾರಿಗೆ ಮಂಗಳೂರಿನ ಜ್ಯೋತಿ ವೃತ್ತದ ಬಳಿ ಬಸ್‌ನಿಂದ ಇಳಿದ ನಾಲ್ವರು ಪಕ್ಕದಲ್ಲೇ ಆಟೋ ಪಾರ್ಕ್ ಮಾಡಿದ್ದ ಆಟೋ ಚಾಲಕರ ಕಣ್ಣಿಗೆ ಬಿದ್ದಿದ್ದಾರೆ.

ಮಕ್ಕಳು ಸಿಕ್ಕ ಸಿಕ್ಕವರಲ್ಲಿ ಮೊಬೈಲ್ ಕೇಳಿ ಕಾಲ್ ಮಾಡೋಕೆ ಪ್ರಯತ್ನ ಮಾಡುತ್ತಿದ್ದರು. ಕೆಲವರಲ್ಲಿ ಪಕ್ಕದಲ್ಲಿ ಲಾಡ್ಜ್ ಎಲ್ಲಿದೆ ಅಂತಾ ಕೇಳುತ್ತಿದ್ದರು. ಇನ್ನೂ ಕೆಲವರ ಬಳಿ ಇಲ್ಲಿ ಆಭರಣ ಒತ್ತೆ ಇಡುವ ಅಂಗಡಿ ಎಲ್ಲಿದೆ ಅಂತಾ ಕೇಳುತ್ತಿದ್ದರು.

ಈ ನಾಲ್ವರು ಮಕ್ಕಳು ಕಾಣೆಯಾಗಿದ್ದ ಬಗ್ಗೆ ಮಾಧ್ಯಮಗಳಲ್ಲಿ ಅವರ ಫೋಟೋ ಮತ್ತು ಸುದ್ದಿ ಪ್ರಕಟವಾಗಿತ್ತು. ಆಟೋ ಚಾಲಕರೊಬ್ಬರು ಮಕ್ಕಳ ಚಲನ-ವಲನ ಗಮನಿಸಿ ಇವರು ಬೆಂಗಳೂರಿನಿಂದ ಕಾಣೆಯಾಗಿರುವ ಮಕ್ಕಳು ಎಂಬುದನ್ನು ಖಾತರಿಪಡಿಸಿಕೊಂಡು ವಿಳಾಸ ತೋರಿಸುವುದಾಗಿ ಹೇಳಿ ಚಾಲಾಕಿತನದಿಂದ ಅವರನ್ನು ತಮ್ಮ ಆಟೋದಲ್ಲಿ ಕೂರಿಸಿಕೊಂಡು ಸೀದಾ ಪಾಂಡೇಶ್ವರ್ ಫೋಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಫೋಲೀಸರಿಗೆ ಮಕ್ಕಳನ್ನು ಒಪ್ಪಿಸುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ.

ವಿಚಾರಣೆ ನಡೆಸಿದಾಗ ಬೆಂಗಳೂರಿನಿಂದ ಬಂದಿರುವುದಾಗಿ ಮಕ್ಕಳು ಒಪ್ಪಿಕೊಂಡಿದ್ದಾರೆ. ಆಟೋ ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ಯಾಂಡಲ್​ವುಡ್​ನ ಸಿನಿಮಾವೊಂದರ ಮಾದರಿಯಂತೆ ಮಂಗಳೂರಿಗೆ ಹೋಗಿ ಕಾಡುಮೇಡುಗಳಲ್ಲಿ ಟ್ರಕ್ಕಿಂಗ್ ಮಾಡಲು ಈ ಮಕ್ಕಳು ಮುಂದಾಗಿದ್ದರು, ಮನೆಯಲ್ಲಿ ಟ್ರಿಪ್‍ಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಸ್ನೇಹಿತರೆಲ್ಲ ಸೇರಿ ಹೋಗುತ್ತೇವೆಂದರೂ ಕಳುಹಿಸುತ್ತಿರಲಿಲ್ಲ. ಹೀಗಾಗಿ ನಾವುಗಳೆಲ್ಲ ವಾಕಿಂಗ್‍ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಬಂದು ಟ್ರಿಪ್‍ಗೆ ಬಂದೆವು ಎಂದು‌ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ‌.

RELATED TOPICS:
English summary :Bangalore

ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#

ನ್ಯೂಸ್ MORE NEWS...