ಅಪಘಾತವಾಗಿದೆ ಎಂದು ಟ್ರಾಫಿಕ್‌ ಸೃಷ್ಟಿಸಿ ನೈಸ್‌ ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದವರ ಬಂಧನ! | ಜನತಾ ನ್ಯೂಸ್

12 Oct 2021
526

ಬೆಂಗಳೂರು : ಅಪಘಾತವಾಗಿದೆ ಎಂದು ಟ್ರಾಫಿಕ್‌ ಸೃಷ್ಟಿಸಿ ನೈಸ್‌ ರಸ್ತೆಯಲ್ಲಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ನ ಮೂವರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಎಸ್.ನಂಜೇಗೌಡ ಹಾಗೂ ಸುಬ್ರಮಣ್ಯಪುರ ಠಾಣೆಯ ಇನ್ಸ್​ಪೆಕ್ಟರ್ ಕೆ.ಆರ್.ಮಂಜುನಾಥ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸುನಿಲ್, ಹರೀಶ್ ಹಾಗೂ ನವೀನ್‌ ಕುಮಾರ್​ನನ್ನು ಬಂಧಿಸಿದ್ದಾರೆ.

ಬಂಧಿತರಿಂದ ಒಂದು ಮೊಬೈಲ್, ಕ್ರೆಡಿಟ್ ಕಾರ್ಡ್​ಗಳು, ಒಂದು ಚಾಕು, 32 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ‌.

ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ನಿವಾಸಿ ಶಿವಕುಮಾರ್ ಎಂಬುವರು ಮಾದನಾಯಕಹಳ್ಳಿ ಸಫಾರಿ ಇಂಡಸ್ಟ್ರೀಸ್ ತಯಾರಿಕಾ ಕಂಪೆನಿಯ ವೈರ್ ಹೌಸ್​​ನಲ್ಲಿ ಮ್ಯಾನೇಜರ್ ಆಗಿ ಕೆಲಸ‌ ಮಾಡುತ್ತಿದ್ದರು. ಇದೇ ತಿಂಗಳು 8 ರಂದು ರಾತ್ರಿ ಕೆಲಸ‌ ಮುಗಿಸಿಕೊಂಡು ತುಮಕೂರು ರಸ್ತೆ ಮೂಲಕ ಕ್ಯಾಂಟರ್ ವಾಹನವೊಂದರಲ್ಲಿ ಮನೆಗೆ ಹೋಗುತ್ತಿದ್ದರು‌. ಮಾರ್ಗಮಧ್ಯೆ ಬನ್ನೇರುಘಟ್ಟ ಬ್ರಿಡ್ಜ್ ಬಳಿ ಬರುವಾಗ ಪ್ರಯಾಣಿಕರ ಸೋಗಿನಲ್ಲಿದ್ದ ಆರೋಪಿಗಳು ಹೊಸೂರಿಗೆ ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದರು.‌ ವಾಹನ ಹತ್ತಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಅಸಲಿ ವರಸೆ ತೋರಿಸಿದ ಆರೋಪಿಗಳು ಚಾಕು ತೋರಿಸಿ ಹಲ್ಲೆ ಮಾಡಿ ಎಟಿಎಂ, ಕ್ರೆಡಿಟ್ ಕಾರ್ಡ್ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು‌‌.

ಈ ಘಟನೆ ನಡೆದ ಮರುದಿನ ರಾತ್ರಿಯೂ ಇದೇ ಗ್ಯಾಂಗ್ ನವರು ಮತ್ತೆ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು ಎನ್ನಲಾಗಿದೆ. ಕೂಡಲೆ ಅವರ ಫೋಟೋ ಹಾಗೂ ಮಾಹಿತಿಯನ್ನು ಸ್ಥಳೀತಯರು ಪೊಲೀಸರಿಗೆ ನೀಡಿದ್ದಾರೆ. ತಕ್ಷಣ ಪೊಲೀಸರು ಆರೋಪಿಗಳು ಬರುತ್ತಿದ್ದ ದಾರಿ ಮಧ್ಯೆ ಅಪಘಾತವಾಗಿದೆ ಎಂದು ಟ್ರಾಫಿಕ್ ಜಾಮ್ ಮಾಡಿದ್ದಾರೆ.

ನಂತರ ಅಲ್ಲಿ ಬಂದ ಆರೋಪಿಗಳನ್ನು ಗುರುತಿಸಿ ಅವರನ್ನು ಬಂಧಿಸಿ ಬೈಕ್, ಡೆಬಿಟ್ ಕಾರ್ಡ್, ಮೊಬೈಲ್ ಜಪ್ತಿ ಮಾಡಲಾಗಿದೆ.

RELATED TOPICS:
English summary :Bangalore

ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
ಗೊಬ್ಬರ ಕೇಳಿದ ರೈತರ ಮೇಲೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದರು: ಸಿದ್ದರಾಮಯ್ಯ | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
264 ಹೊಸ ಕೊರೋನಾ ಪ್ರಕರಣ ಪತ್ತೆ; 421 ಚೇತರಿಕೆ , 6 ಸಾವು! | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ: ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
ರಾಮಮಂದಿರ ನಿರ್ಮಾಣಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ?: ಕುಮಾರಸ್ವಾಮಿಗೆ ಸಿ.ಟಿ ರವಿ ಪ್ರಶ್ನೆ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
1 ರಿಂದ 5ನೇ ತರಗತಿ ಶಾಲೆ ಆರಂಭಿಸುವ ಶೀಘ್ರ ನಿರ್ಧಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಸಿಡಬ್ಲ್ಯೂಸಿ : ಸೋನಿಯಾಗಾಂಧಿ ಕಾರ್ಯಾವಧಿ ಮುಂದುವರಿಕೆ, ಮಗ ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ನಕಲಿ ಐಎಎಸ್ ಅಧಿಕಾರಿ, ಸರ್ಕಾರಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ವಂಚನೆ! | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಐಪಿಎಲ್ ಬೆಟ್ಟಿಂಗ್‌ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಸಚಿವರು ಕೇವಲ ಪ್ರಚಾರಕ್ಕೆ ಸೀಮಿತವಾಗದೆ ಸಿಬ್ಬಂದಿಗಳ ಗೋಳು ಕೇಳಲಿ: ದಿನೇಶ್ ಗುಂಡೂರಾವ್ | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಹರಿದ ಲಾರಿ, ಇಬ್ಬರು ಸ್ಥಳದಲ್ಲೇ ಸಾವು! | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#
ಕಲ್ಲಿದ್ದಲು ಕೊರತೆಯಿಂದ‌ ವಿದ್ಯುತ್ ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ: ಸಚಿವ ಸುನೀಲ್‌ | ಜನತಾ ನ್ಯೂ&#

ನ್ಯೂಸ್ MORE NEWS...