ಬೆಂಗಳೂರಿನಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಆರೋಪಿ ಬಂಧನ | ಜನತಾ ನ್ಯೂಸ್

14 Oct 2021
744

ಬೆಂಗಳೂರು : ಹರ್ಬಲ್ ಲೈಫ್ ಮೆಡಿಸಿನ್ ಕೊಡುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪದ ಮೇಲೆ ಈಕೆಯನ್ನು ಬಂಧಿಸಲಾಗಿದೆ.

ನಗರದಲ್ಲಿ ಹೈಟೆಕ್​ ಹನಿಟ್ರ್ಯಾಪ್​ ನಡೆಸುತ್ತಿದ್ದ ಮಹಿಳೆಯೊಬ್ಬಳಿಂದ ವಂಚನೆಗೊಳ್ಳಗಾದ ಕಂಟ್ರಾಕ್ಟರ್​ ಒಬ್ಬರು ಈ ಸಂಬಂಧ ದೂರು ನೀಡಿದ್ದರು. ಈ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತೆಯನ್ನು ವಿದ್ಯಾ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಸಿವಿಲ್ ಕಾಂಟ್ರಾಕ್ಟರ್ ಲೋಹಿತ್ ಎಂಬುವವರು ಈಕೆ ವಿರುದ್ಧ ದೂರು ನೀಡಿದ್ದರು. ಫೋಟೋಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪದ ಮೇಲೆ ಈಕೆಯನ್ನು ಬಂಧಿಸಲಾಗಿದೆ.

ಘಟನೆ :
ಹರ್ಬಲ್ ಲೈಫ್ ಪ್ರಾಡಕ್ಟ್ ಹೆಸರಿನಲ್ಲಿ ಸಿವಿಲ್​ ಕಂಟ್ರಾಕ್ಟರ್ ಲೋಹಿತ್​ ಅವರನ್ನು ಇಬ್ಬರು ಹುಡುಗರು ಭೇಟಿಯಾಗಿದ್ದರು. ಈ ವೇಳೆ ತಮ್ಮ ಉತ್ಪನ್ನದ ಕುರಿತು ತಿಳಿಸಿದ ಅವರು ಈ ಪ್ರೋಡಕ್ಟ್​ ಬೇಕಿದ್ದರೆ, ಈ ನಂಬರ್​ಗೆ ಕರೆ ಮಾಡಿ ಎಂದು ವಿದ್ಯಾ ನಂಬರ್​ ಕೊಟ್ಟಿದ್ದರು. ಈ ವೇಳೆ ಕರೆ ಮಾಡಿದಾಗ, ಆರೋಪಿತೆ ವಿದ್ಯಾ ಜೊತೆ ಹರ್ಬಲ್ ಲೈಫ್ ಪ್ರೊಡಕ್ಟ್ ಖರೀದಿ ವಿಚಾರವಾಗಿ ಲೋಹಿತ್​ಗೆ ಸ್ನೇಹ ಬೆಳೆದಿದೆ. ಇದಾದ ಬಳಿಕ ಇಬ್ಬರ ನಡುವಿನ ಸಂಭಾಷಣೆ ಸ್ನೇಹಕ್ಕೆ ತಿರುಗಿದೆ.

ಇಬ್ಬರ ನಡುವಿನ ಪರಿಚಯ ರೆಸಾರ್ಟ್‌ಗೆ ಹೋಗಿ ಏಕಾಂತದಲ್ಲಿ ಕಳೆಯುವ ಹಂತಕ್ಕೆ ತಲುಪಿತ್ತು. ಇಬ್ಬರೂ ಒಮ್ಮೆ ಕನಕಪುರ ರಸ್ತೆಯಲ್ಲಿರುವ ಗುಹಾಂತರ ರೆಸಾರ್ಟ್‌ಗೆ ಹೋಗಿದ್ದಾರೆ. ಆನಂತರ ಲೋಹಿತ್ ಮತ್ತು ವಿದ್ಯಾ ಸ್ನೇಹಿತರು ಒಡಗೂಡಿ ಅಗಲಗುರ್ಕಿ ರೆಸಾರ್ಟ್‌ಗೆ ಹೋಗಿ ತಂಗಿದ್ದಾರೆ. ಈ ವೇಳೆ ವಿದ್ಯಾ ಮತ್ತು ಲೋಹಿತ್ ಏಕಾಂತವಾಗಿ ಸಿಮ್ಮಿಂಗ್ ಪೂಲ್‌ನಲ್ಲಿ ಈಜಾಡಿದ್ದಾರೆ. ಆನಂತರ ಕೊಠಡಿಗೆ ಹೋಗಿ ಏಕಾಂತವಾಗಿ ಕಾಲ ಕಳೆದಿದ್ದಾರೆ.

ಇದಾದ ಬಳಿಕ ವಿದ್ಯಾ ತಾವಿಬ್ಬರು ರೆಸಾರ್ಟ್​ನಲ್ಲಿ ಜೊತೆಗಿದ್ದ ಪೋಟೋವನ್ನು ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ರೆಸಾರ್ಟ್​ನಲ್ಲಿ ಜೊತೆಗಿದ್ದ ಪೋಟೊವನ್ನು ತೋರಿಸಿ 1 ಕೋಟಿ ರೂ ಹಣ ನೀಡುವಂತೆ ಗೆಳೆಯನೊಂದಿಗೆ ಬಂದಿ ವಿದ್ಯಾ ಲೋಹಿತ್​ಗೆ ಬೇಡಿಕೆ ಇಟ್ಟಿದ್ದಾಳೆ.

ವಿದ್ಯಾ ಜತೆ ಏಕಾಂತವಾಗಿ ಕಳೆದ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದರೆ ಮರ್ಯಾದೆ ಹೋಗುತ್ತದೆ ಎಂದು ಭಯಗೊಂಡ ಲೋಹಿತ್ ಒಂದಷ್ಟು ಹಣ ಕೊಟ್ಟು ಇತ್ಯರ್ಥ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದರೆ ಕಡಿಮೆ ಹಣಕ್ಕೆ ಒಪ್ಪದ ವಿದ್ಯಾ ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಹೀಗೆ ದಿನ ಕಳೆಯುತ್ತಿದ್ದ ಗುತ್ತಿಗೆದಾರ ಲೋಹಿತ್‌ಗೆ ಪೆನ್ ಡ್ರೈವ್ ಕೊಟ್ಟು ಕಳಿಸಿದ್ದು, ಅದನ್ನು ನೋಡಿ ಮತ್ತಷ್ಟು ಗಾಬರಿಯಾಗಿದ್ದಾನೆ.

ಇಷ್ಟಕ್ಕೂ ಲೋಹಿತ್​ ಜಗ್ಗದಿದ್ದಾಗ ವಿದ್ಯಾ ಮದುವೆಯಾಗಿ ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ್ದಾಳೆ. ಇದಾದ ಬಳಿಕ ಲೋಹಿತ್​ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಇನ್ನು ಆರೋಪಿತೆ ವಿದ್ಯಾ ಇದೇ ರೀತಿ ಅನೇಕರಿಗೆ ಹನಿಟ್ರ್ಯಾಪ್​ ಮಾಡಿರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲದೇ ಈಕೆ ತಾನು ತಮಿಳುನಾಡು ಕಾಂಗ್ರೆಸ್ ಸದಸ್ಯೆ ಎಂದು ಹೇಳಿಕೊಂಡು ವಂಚಿಸಿರುವುದು ತನಿಖೆ ವೇಳೆ ಬಯಲಾಗಿದೆ.

RELATED TOPICS:
English summary :Bangalore

ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ತವರಿಗೆ ಬಂದಿದ್ದ ತಂಗಿಯನ್ನೇ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ! | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ನಾಪತ್ತೆಯಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಹುಡುಕಿ ಕೆಲಸಕ್ಕೆ ಹಚ್ಚಿ: ಸಿಎಂಗೆ ಸಿದ್ದರಾಮಯ್ಯ ಆಗ್ರಹ | ಜನತಾ ನ್ಯೂ&#
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ದೀಪಾವಳಿಯಂದು ಕಡ್ಡಾಯವಾಗಿ ಗೋಮಾತೆಗೆ ಪೂಜೆ ಸಲ್ಲಿಸಬೇಕು ಸರ್ಕಾರದಿಂದ ಆದೇಶ! | ಜನತಾ ನ್
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಎಳ್ಳು ನೀರು ಬಿಡಲು ಸಿದ್ದರಾಮಯ್ಯ ಸಿದ್ದರಾಗಿದ್ದಾರೆ: ಬಿಜೆಪಿ ವ್ಯಂಗ್ಯ | ಜನತಾ ನ್ಯೂ&#
ಸಿದ್ದರಾಮಯ್ಯ ಕಂಡರೆ ಕುರುಬರಿಗೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್ | ಜನತಾ ನ್ಯೂ&#
ಸಿದ್ದರಾಮಯ್ಯ ಕಂಡರೆ ಕುರುಬರಿಗೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್ | ಜನತಾ ನ್ಯೂ&#
ಹೃದಯ ವಿದ್ರಾವಕ ಘಟನೆ: ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ! | ಜನತಾ ನ್ಯೂ&#
ಹೃದಯ ವಿದ್ರಾವಕ ಘಟನೆ: ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ! | ಜನತಾ ನ್ಯೂ&#
ಬೆಂಗಳೂರಿನಲ್ಲಿ ನಿಷೇಧಿತ 1 ಸಾವಿರ ಮುಖಬೆಲೆಯ, 5 ಕೋಟಿಯಷ್ಟು ಕಲರ್ ಜೆರಾಕ್ಸ್ ನೋಟುಗಳ ವಶ..! | ಜನತಾ ನ್ಯೂ&#
ಬೆಂಗಳೂರಿನಲ್ಲಿ ನಿಷೇಧಿತ 1 ಸಾವಿರ ಮುಖಬೆಲೆಯ, 5 ಕೋಟಿಯಷ್ಟು ಕಲರ್ ಜೆರಾಕ್ಸ್ ನೋಟುಗಳ ವಶ..! | ಜನತಾ ನ್ಯೂ&#
ನನ್ನ ಸಾವಿಗೆ ಕೆಟ್ಟ ಶಿಕ್ಷಣ ವ್ಯವಸ್ಥೆಯೇ ಕಾರಣ, ವೀಡಿಯೋ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ | ಜನತಾ ನ್ಯೂ&#
ನನ್ನ ಸಾವಿಗೆ ಕೆಟ್ಟ ಶಿಕ್ಷಣ ವ್ಯವಸ್ಥೆಯೇ ಕಾರಣ, ವೀಡಿಯೋ ಮಾಡಿ ವಿದ್ಯಾರ್ಥಿ ಆತ್ಮಹತ್ಯೆ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 10 ಸಾವು, 290 ಹೊಸ ಪ್ರಕರಣ : ಬೆಂಗಳೂರಿನಲ್ಲಿ 137 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 10 ಸಾವು, 290 ಹೊಸ ಪ್ರಕರಣ : ಬೆಂಗಳೂರಿನಲ್ಲಿ 137 | ಜನತಾ ನ್ಯೂ&#
2 ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು | ಜನತಾ ನ್ಯೂ&#
2 ಪ್ರಕರಣಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು | ಜನತಾ ನ್ಯೂ&#
ಶಾಲೆಗೆಂದು ಹೇಳಿ ಈಜಲು ಹೋದ ಬಾಲಕ ಕೆರೆ ಪಾಲು! | ಜನತಾ ನ್ಯೂ&#
ಶಾಲೆಗೆಂದು ಹೇಳಿ ಈಜಲು ಹೋದ ಬಾಲಕ ಕೆರೆ ಪಾಲು! | ಜನತಾ ನ್ಯೂ&#

ನ್ಯೂಸ್ MORE NEWS...