ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿ, ಡ್ರಗ್ ಪೆಡ್ಲರ್: ನಳೀನ್ ಕುಮಾರ್ ಕಟೀಲ್ | ಜನತಾ ನ್ಯೂಸ್
ಹುಬ್ಬಳ್ಳಿ : ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿ ಮತ್ತು ಡ್ರಗ್ ಪೆಡ್ಲರ್ ಎಂದು ವರದಿಗಳು ಹೇಳಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಮಾತನಾಡಿದ ಕಟೀಲ್, ರಾಹುಲ್ ಗಾಂಧಿಗೆ ಪಕ್ಷವನ್ನೇ ಸಂಭಾಳಿಸಲು ಆಗುತ್ತಿಲ್ಲ; ಸೋನಿಯಾ ಗಾಂಧಿಗೂ ಆಗುತ್ತಿಲ್ಲ. ರಾಹುಲ್ ಗಾಂಧಿ ಡ್ರಗ್ ಪೆಡ್ಲರ್. ಇದನ್ನು ನಾನು ಹೇಳುತ್ತಿಲ್ಲ. ಕೆಲ ಮಾಧ್ಯಮಗಳೇ ಹೇಳುತ್ತಿವೆ. ಕಾಂಗ್ರೆಸ್ನವರು ಪಕ್ಷ ಕಟ್ಟಲು ವಿಲವಿಲ ಒದ್ದಾಡುತ್ತಿದ್ದಾರೆ. ಇಂಥವರು ನಮ್ಮ ಪ್ರಧಾನಿ ಬಗ್ಗೆ ಹೆಬ್ಬೆಟ್ಟು ಅಂತ ಟೀಕೆ ಮಾಡ್ತಾರೆ ಎಂದು ಕಿಡಿಕಾರಿದ್ದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯಾಧ್ಯಕ್ಷರು ತಿಹಾರ್ ಜೈಲಿಗೆ ಹೋಗಿದ್ದರು. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋದ್ರಾ..? ಇಲ್ಲಾ ಸಂಗ್ರಾಮದ ಕಥೆ ಬರೆಯಲು ಹೋಗಿದ್ರಾ..? ಇಂಥವರು ನಮ್ಮ ಮೋದಿ ಬಗ್ಗೆ ಟೀಕಿಸುತ್ತಾರೆ ಎಂದು ಕಿಡಿಕಾರಿದರು.