ಭಾರತೀಯ ಚಿತ್ರರಂಗದ ಅತುನ್ನತ ಪ್ರಶಸ್ತಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ರಜನಿಕಾಂತ್ | ಜನತಾ ನ್ಯೂಸ್

25 Oct 2021
548

ನವದೆಹಲಿ : ತಮಿಳು ಚಿತ್ರರಂಗದ ಆರಾಧ್ಯದೈವ ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿ ನೀಡಿದ ಕೊಡುಗೆಗಾಗಿ ನಟ ರಜನಿಕಾಂತ್ ಅವರಿಗೆ ಇಂದು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ರಜನಿಕಾಂತ್ ಪತ್ನಿ ಲತಾ, ಮಗಳು ಸೌಂದರ್ಯ ಮತ್ತು ಅಳಿಯ ಧನುಷ್ ಹಾಜರಿದ್ದರು.

ಕನ್ನಡದ ಹೆಮ್ಮೆಯ ಅಭಿಮಾನಿಗಳ ದೇವರು, ಕರ್ನಾಟಕ ರತ್ನ ಡಾ.ರಾಜಕುಮಾರ್ ಅವರು 1995ರಲ್ಲಿ ಭಾರತೀಯ ಚಿತ್ರರಂಗದ ಈ ಅತುನ್ನತ ಪ್ರಶಸ್ತಿಗೆ ಭಾಜನರಾಗಿದ್ದರು. 2018ರಲ್ಲಿ ಅಮಿತಾಬ್ ಬಚ್ಚನ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ಕಳೆದ ಮೂರು ವರ್ಷಗಳಿಂದ ಯಾರೂ ನಾಮನಿರ್ದೇಶನಗೊಂಡಿರಲಿಲ್ಲ.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ತಮಿಳು ಚಿತ್ರರಂಗದ ತಲೈವಾ, “ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ತುಂಬಾ ಸಂತೋಷಪಡುತ್ತೇನೆ ಮತ್ತು ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ", ಎಂದಿದ್ದಾರೆ.

"ನಾನು ಈ ಪ್ರಶಸ್ತಿಯನ್ನು ನನ್ನ ಗುರು ಕೆ.ಬಾಲಚಂದರ್ ಸರ್ ಅವರಿಗೆ ಅರ್ಪಿಸುತ್ತೇನೆ ಮತ್ತು ನಾನು ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಹಾಗೆಯೇ, ನಾನು ಇದನ್ನು ನನ್ನ ಸಹೋದರ ತಿರು ಸತ್ಯನಾರಾಯಣ ರಾವ್ ಗಾಯಕ್ವಾಡ್‌ಗೆ ಅರ್ಪಿಸುತ್ತೇನೆ, ಅವರು ನನಗೆ ತಂದೆ ಸ್ವರೂಪವಾಗಿದ್ದರು ಮತ್ತು ನನ್ನಲ್ಲಿ ಆಧ್ಯಾತ್ಮಿಕತೆಯನ್ನು ತುಂಬುವ ಹೆಚ್ಚಿನ ಮೌಲ್ಯಗಳೊಂದಿಗೆ ನನ್ನನ್ನು ಬೆಳೆಸಿದರು”, ಎಂದು ಅವರು ಹೇಳಿದರು.

ರಜನಿಕಾಂತ ಅವರು ಈ ಸಂದರ್ಭದಲಿ ತಮ್ಮ ಆಪ್ತ ಸ್ನೇಹಿತ, ಬಸ್ ಚಾಲಕ ರಾಜ್ ಬಹದ್ದೂರ್ ಅವರನ್ನು ಸಹ ಸ್ಮರಿಸಿದ್ದು, "ನಾನು ಬಸ್ ಕಂಡಕ್ಟರ್ ಆಗಿದ್ದಾಗ ನನ್ನಲ್ಲಿ ನಟನೆಯ ಪ್ರತಿಭೆಯನ್ನು ಗುರುತಿಸಿದ ಮೊದಲ ವ್ಯಕ್ತಿ ಅವರು, ಮತ್ತು ನನ್ನನ್ನು ಸಿನಿಮಾ ಜಗತ್ತಿಗೆ ಪ್ರವೇಶಿಸಲು ಪ್ರೋತ್ಸಾಹಿಸಿದರು. ನನ್ನ ಎಲ್ಲಾ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಹ ಕಲಾವಿದರು, ವಿತರಕರು, ಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ", ಎಂದು ಹೇಳಿದ್ದಾರೆ.

ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು "ಅವರಿಲ್ಲದೆ ನಾನು ಯಾರೂ ಇಲ್ಲ" ಎಂದು ಹೇಳಿದರು. "ಅವರು ನನ್ನನ್ನು ಬದುಕಿಸುವ ದೇವರುಗಳು" ಎಂದು ರಜನಿಕಾಂತ್ ಅವರು ಹೇಳಿದ್ದಾರೆ.

1969ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು ಭಾರತೀಯ ಚಿತ್ರರಂಗದ ಕಲಾವಿದರಿಗೆ ಅತ್ಯುನ್ನತ ಗೌರವವಾಗಿದೆ. ಪ್ರಸ್ತುತ, ಪ್ರಶಸ್ತಿಯನ್ನು ಆಶಾ ಭೋಂಸ್ಲೆ, ನಿರ್ದೇಶಕ ಸುಭಾಷ್ ಘಾಯ್, ಮೋಹನ್ ಲಾಲ್, ಶಂಕರ್ ಮಹದೇವನ್ ಮತ್ತು ನಟ ಬಿಸ್ವಜೀತ್ ಚಟರ್ಜಿಗಳನ್ನೊಳಗೊಂಡ ಐದು ಸದಸ್ಯರ ತೀರ್ಪುಗಾರರು ನಿರ್ಧರಿಸಿದ್ದಾರೆ.

ರಜನಿಕಾಂತ್ ಅವರ ಅಳಿಯ ಧನುಷ್ ಅವರು ಅಸುರನ್‌ಗಾಗಿ ಅತ್ಯುತ್ತಮ ನಟನಾ ಗೌರವವನ್ನು, ಭೋಂಸ್ಲೆಗಾಗಿ ಮನೋಜ್ ಬಾಜಪೇಯಿ ಅವರೊಂದಿಗೆ ಹಂಚಿಕೊಂಡರು.

RELATED TOPICS:
English summary :Rajanikanth receives Indian film industries top most award Dada Saheb Palke award

ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2  ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2 ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ  | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಬಾಲಕಿ ಮೇಲೆ ಗ್ಯಾಂಗ್​ರೇಪ್,​ ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂ&#
ಬಾಲಕಿ ಮೇಲೆ ಗ್ಯಾಂಗ್​ರೇಪ್,​ ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂ&#

ನ್ಯೂಸ್ MORE NEWS...