ಅಪ್ಪು ಅಮರ : ಕೋಟ್ಯಂತರ ಜನರ ಮನಃ ಗೆದ್ದ ಸಿಎಂ ಬಸವರಾಜ ಬೊಮ್ಮಾಯಿ | ಜನತಾ ನ್ಯೂಸ್

31 Oct 2021
583

ಬೆಂಗಳೂರು : ಕರ್ನಾಟಕ ರತ್ನ ಡಾ.ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ದಂಪತಿಗಳ ಮುದ್ದಿನ ಮಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾದ ಬಳಿಕ ಅವರನ್ನು ಆಸ್ಪತ್ರೆಯಿಂದ ಅಂತಿಮ ಸಂಸ್ಕಾರದ ವರೆಗೂ 3 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಡೆದುಕೊಂಡ ರೀತಿ ತೆಗೆದುಕೊಂಡ ಕ್ರಮಗಳು ಕೋಟ್ಯಂತರ ಜನರಿಂದ ಸಾರ್ವಜನಿಕವಾಗಿ ಸಾಕಷ್ಟು ಪ್ರಶಂಸೆಗೆ ಕಾರಣವಾಗಿದೆ.

ಅಭಿಮಾನಿಗಳ ಅಪ್ಪು ಹಣೆಯನ್ನು ಮುತ್ತು ಕೊಡುತ್ತಿರುವ ಬಾವುಕರಾದ ಸಿಎಂ ಬಸವರಾಜ್ ಬೊಮ್ಮಾಯಿ ಚಿತ್ರ ಕೋಟ್ಯಂತರ ಜನರ ಮನಸೂರೆಗೊಂಡಿದೆ.

ಕರಾಳ ಶುಕ್ರವಾರದಂದು "ಅಪ್ಪು" ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ಹೊರಬೀಳುತ್ತಿದ್ದಂತೆ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಮುಖ್ಯಮಂತ್ರಿಯವರು ಆಸ್ಪತ್ರೆ ತಲುಪಿದ ಬಳಿಕ ಸ್ವಲ್ಪ ಮಟ್ಟಿಗೆ ಸಮಾಧಾನ ತಂದುಕೊಟ್ಟಿತು. ಆದರೆ ಈ ಸಮಾಧಾನ ಹೆಚ್ಚು ಗಂಟೆಗಳ ಕಾಲ ಉಳಿಯಲಿಲ್ಲ.

ಪುನೀತ್ ರಾಜಕುಮಾರ್ ಇನ್ನಿಲ್ಲ ಎಂಬುವ ಸುದ್ದಿ ಪ್ರಕಟವಾಗುತ್ತಿದ್ದಂತೆ, ಇನ್ನೇನು ಇಡೀ ರಾಜ್ಯ ಮತ್ತೊಮ್ಮೆ(ಅಣ್ಣಾವ್ರ ಅಂತಿಮಯಾತ್ರೆಯಂತಹ) ಭೀಕರ ಸ್ಥಿತಿಗಳಿಗೆ ಇನ್ನೊಮ್ಮೆ ಸಾಕ್ಷಿಯಾಗಲಿದೆಯೇ? ಮುಂದೇನು? ಎಂದು ಚಿಂತಿಸುವ ಅಷ್ಟರಲ್ಲಿ ಆಸ್ಪತ್ರೆಯಲ್ಲೇ ಇದ್ದ ಸಿಎಂ ಬೊಮ್ಮಾಯಿ ಎಲ್ಲಾ ಕಾರ್ಯಗಳನ್ನು ರಾಜ್ಯ ಸರ್ಕಾರವೇ ಹೊತ್ತುಕೊಂಡು ಸರ್ಕಾರೀ ಗೌರವದ ಸಕಲ ಸಿದ್ಧತೆಗೆ ಆದೇಶ ಹೊರಡಿಸಿದ್ದರು.

ತಮ್ಮ ಪ್ರೀತಿಯ ಅಪ್ಪುವನ್ನು ಕಳೆದುಕೊಂಡು ದುಃಖದಿಂದ ಅಕ್ಷರಸಹ ನೊಂದ ಅಭಿಮಾನಿಗಳ ಮನಸ್ಸನ್ನು ಸೂಕ್ಷ್ಮವಾಗಿ ಅರಿತವರಂತೆ ಸಾರ್ವಜನಿಕರಿಗೆ ಅಂತಿಮದರ್ಶನ ಅವಸ್ಥೆಗಳಲ್ಲೂ ಒಂದಿಷ್ಟು ಟೀಕೆಗೆ ಆಸ್ಪದ ನೀಡದಂತೆ ಸ್ವತಃ ಮುಂದೆ ನಿಂತು ನೋಡಿಕೊಂಡಿದ್ದಾರೆ.

29ನೇ ತಾರೀಕು ಶುಕ್ರವಾರ ಮುಂಜಾನೆ ಆಸ್ಪತ್ರೆಯಿಂದ ಹಿಡಿದು 10:30 ರಾತ್ರಿಯವರೆಗೂ ಅಪ್ಪು ಅವರ ಪಾರ್ಥಿವ ಶವದೊಂದಿಗೆ ತಮ್ಮ ಬಹುತೇಕ ಪೂರ್ತಿ ಸಚಿವ ಸಂಪುಟ ದೊಂದಿಗೆ ಕುಳಿತಿದ್ದ ಸಿಎಂ ಎಲ್ಲರ ಗಮನ ಸೆಳೆದರು.

ರಾತ್ರಿ ಸರ್ಕಾರಿ ಆದೇಶದ ಅಧಿಕೃತ ಜಾರಿಯ ನಂತರ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರೀಯ ಧ್ವಜವನ್ನು ಸ್ವತಃ ತಾವೇ ಹೊದಿಸಿದ ಬಳಿಕವೂ ಕೆಲಕಾಲ ಅಲ್ಲೇ ಕೂತಿದ್ದರು ಸಿಎಂ ಬೊಮ್ಮಾಯಿ. ಅದೇ ಸಮಯದಲ್ಲಿ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ಕ್ರಿಯೆಗೆ ಬೇಕಾದ ಎಲ್ಲ ಸೌಕರ್ಯಗಳನ್ನು, ವ್ಯವಸ್ಥೆಗಳನ್ನೂ ಚಾಚೂ ತಪ್ಪದಂತೆ ನೋಡಿಕೊಳ್ಳಲಾಗಿದೆ.

ಇಂದು ಅಂತಿಮಯಾತ್ರೆಗೂ ಮುನ್ನ ಬೆಳಿಗ್ಗೆ 4ಗಂಟೆಗೆ ಕಂಠೀರವ ಸ್ಟೇಡಿಯಂನಲ್ಲಿ ಭಾವುಕರಾದಂತೆ ಕಂಡು ಬಂದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಪಾರ್ಥಿವ ಶರೀರ ವನ್ನು ಮುಚ್ಚಿಟ್ಟಿದ್ದ ಗ್ಲಾಸ್ ಕವರ್ ಅನ್ನು ತೆಗೆಸಿ ಅಪ್ಪು ಅವರ ತಲೆಯನ್ನು ನೇವರಿಸುತ್ತಾ ಹಣೆಗೆ ಒಂದೆರಡು ಮುತ್ತಿಕ್ಕಿ ಕೆನ್ನೆ ಮೈಯನ್ನೆಲ್ಲ ಎರಡು ಕೈಗಳಿಂದ ಮುಟ್ಟಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ ದೃಶ್ಯ ಮನಃಕಲಕುವಂತಿತ್ತು. ತಂದೆಯೊಬ್ಬ ತನ್ನ ಹೆತ್ತ ಮಗನನ್ನು ಕಳೆದುಕೊಂಡ ಈ ಭಾವುಕ ದೃಶ್ಯಗಳು ಕೋಟ್ಯಾಂತರ ಹೃದಯಗಳನ್ನು ಗೆದ್ದಿದೆ.

ಇದಾದ ಬಳಿಕ 4:00 ಗಂಟೆಯಿಂದ ನಿಗದಿಯಾದಂತೆ ಕಂಠೀರವ ಸ್ಟೇಡಿಯಂನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ತಾವೇ ಖುದ್ದು ನಿಂತು ಮುಂದಾಳತ್ವದಿಂದ ಅಂತಿಮಯಾತ್ರೆ ಪ್ರಾರಂಭಿಸಿದ್ದಾರೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಸಕಲ ಸರ್ಕಾರಿ ಗೌರವದ ಬಳಿಕ ಅವರ ಪಾರ್ಥಿವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಸಿಎಂ ತಾವೇ ಖುದ್ದಾಗಿ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅವರಿಗೆ ಹಸ್ತಾಂತರಿಸಿದರು.

ಕೋಟ್ಯಾಂತರ ಪುನೀತ್ ರಾಜಕುಮಾರ್ ಅಭಿಮಾನಿಗಳು ಸೇರಿದಂತೆ ದೇಶಾದ್ಯಂತ ಜನರು ರಾಜ್ಯಾದ್ಯಂತ ಕನ್ನಡಿಗರು ಎಲ್ಲರೂ ಮೆಚ್ಚುವಂತೆ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸ್ವತಃ ಮುಂದೆ ನಿಂತು ಮುತುವರ್ಜಿವಹಿಸಿ ನಡೆಸಿಕೊಟ್ಟಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಮೂಲಕ ಸಾರ್ವಜನಿಕವಾಗಿ ಪಕ್ಷಾತೀತವಾಗಿ ಶ್ಲಾಘನೆಗೆ ಭಾಜನರಾಗಿದ್ದಾರೆ.

RELATED TOPICS:
English summary :Appu Amar : CM Bommai steals crores of peoples heart

ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2  ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2 ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ  | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಬಾಲಕಿ ಮೇಲೆ ಗ್ಯಾಂಗ್​ರೇಪ್,​ ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂ&#
ಬಾಲಕಿ ಮೇಲೆ ಗ್ಯಾಂಗ್​ರೇಪ್,​ ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂ&#

ನ್ಯೂಸ್ MORE NEWS...