ಪರೀಕ್ಷೆಗೆ ಹೆದರಿ ಪಿಹೆಚ್.ಡಿ ವಿದ್ಯಾರ್ಥಿನಿ ಪಿಜಿಯಲ್ಲಿ ಆತ್ಮಹತ್ಯೆ! | ಜನತಾ ನ್ಯೂಸ್
ಮೈಸೂರು : ಪಿಎಚ್ಡಿ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.
ಚಾಮರಾಜನಗರ ಮೂಲದ ರಶ್ಮಿ (29) ಮೃತ ದುರ್ದೈವಿ. ಎಂಎಸ್ಸಿ ರಸಾಯನಶಾಸ್ತ್ರ ಮುಗಿಸಿ ಪಿಎಚ್ಡಿ ಮಾಡುತ್ತಿದ್ದ ರಶ್ಮಿ, ಪರೀಕ್ಷೆ ಒತ್ತಡದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಿಹೆಚ್ ಡಿ ಮಾಡುತ್ತಿದ್ದಂತ ರಶ್ಮೀ ಸರಸ್ವತಿ ಪುರಂನಲ್ಲಿ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದರು. ಪರೀಕ್ಷೆಯ ಒತ್ತಡಕ್ಕೆ ಒಳಗಾಗಿ, ಇಂದು ಆತ್ಮಹತ್ಯೆಗೆ ಶರಣಾಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Mysuru