ಹಿಂದೂ ಧರ್ಮದ ವಿರುದ್ಧ ವಾಗ್ದಾಳಿ ನಡೆಸುವ ಎಲ್ಲಾ ಪ್ರಯತ್ನವನ್ನೂ ರಾಹುಲ್ ಗಾಂಧಿ ಮಾಡುತ್ತಾರೆ - ಬಿಜೆಪಿ | ಜನತಾ ನ್ಯೂಸ್

12 Nov 2021
474

ನವದೆಹಲಿ : ಹಿಂದೂತ್ವ ಅಂದರೆ ಒಬ್ಬ ಸಿಖ್ ಹಾಗೂ ಮುಸ್ಲಿಂರನ್ನು ಹೊಡೆಯುವುದು, ಅಮಾಯಕರನ್ನು ಕೊಲ್ಲುವುದು, ಎಂದಿರುವ ರಾಹುಲ್ ಗಾಂಧಿ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಕ್ತಾರರಾದ ಸಂಬಿತ್ ಪಾತ್ರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಮತ್ತು ಗಾಂಧಿ ಪರಿವಾರ ಹಿಂದೂ ಧರ್ಮದ ವಿರುದ್ಧ "ರೋಗಗೃಸ್ತ ದ್ವೇಷ" ಹೊಂದಿವೆ, ಎಂದಿದ್ದಾರೆ.

ಸಲ್ಮಾನ್ ಖುರ್ಷಿದ್ ಅವರ ಅಯೋಧ್ಯೆ ಕುರಿತಾದ ಪುಸ್ತಕ ಮತ್ತು "ಹಿಂದುತ್ವ"ವನ್ನು ಐಸಿಸ್‌ನಂತಹ ಭಯೋತ್ಪಾದಕ ಗುಂಪುಗಳೊಂದಿಗೆ ಹೋಲಿಸುವ ಪ್ರಯತ್ನದ ಬೆನ್ನಲ್ಲೇ, ಇಂದು 51ವರ್ಷದ ವಾಯನಾಡು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಹಿಂದುತ್ವದ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.

ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡುವ ಪ್ರಹಾರ ಮಾಡುವ ಎಲ್ಲ ರೀತಿಯ ಪ್ರಯತ್ನವನ್ನೂ ರಾಹುಲ್ ಗಾಂಧಿ ಅವಶ್ಯವಾಗಿ ಮಾಡುತ್ತಾರೆ, ಎಂದಿದ್ದಾರೆ ಸಂಬಿತ್ ಪಾತ್ರ.

"ದೇವಸ್ಥಾನಕ್ಕೆ ಹೋಗುವ ಹುಡುಗರು ಕೆಟ್ಟವರರಾಗಿರುತ್ತಾರೆ, ಹುಡುಗಿಯರನ್ನು ಚುಡಾಯಿಸುವವರು", ಎಂದು ಹೇಳುವ ರಾಹುಲ್ ಗಾಂಧಿಯವರು ಚುನಾವಣೆಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. 2019ರ ಚುನಾವಣೆಗೂ ಮುನ್ನ ಇದೇ ಕಾಂಗ್ರೆಸ್ ಪಕ್ಷ ಸುಪ್ರಿಂಕೋರ್ಟ್ ನಲ್ಲಿ ಶ್ರೀರಾಮ ಮಂದಿರದ ವಿಚಾರಣೆಯನ್ನು ಮುಂದುಡುವಂತೆ ತುಂಬಾ ಪ್ರಯತ್ನಮಾಡಿತ್ತು. ಶ್ರೀರಾಮನ ಅಸ್ತಿತ್ವ ಕೇವಲ ಕಾಲ್ಪನಿಕ ಎಂಬ ಆಫಿಡಿವೇಟ್ ನ್ನು ಕೂಡ ಇದೇ ಕಾಂಗ್ರೆಸ್ ನೀಡಿತ್ತು, ಎಂದು ಸಂಬಿತ್ ಪಾತ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ರಾಹುಲ್ ಗಾಂಧಿಯವರು "ಹಿಂದೂ ಧರ್ಮ" ಮತ್ತು ಅದರ ಸಂಸ್ಕೃತಿಯನ್ನು ಟೀಕಿಸುವ ಚರಿತ್ರೆ ಹೊಂದಿದ್ದಾರೆ ಮತ್ತು ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುವ ಮತ್ತು ಸಮಾಜದಲ್ಲಿ "ದ್ವೇಷ"ವನ್ನು ಹರಡುವುದು ಕಾಂಗ್ರೆಸ್‌ನ "ಕೆಲಸ" ಎಂದು ಬಿಜೆಪಿ ನಾಯಕ ಘೋಷಿಸಿದರು.

"ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಪ್ರತಿ ಅವಕಾಶದಲ್ಲೂ ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುವುದು ಅವರ ಸ್ವಭಾವದಲ್ಲಿದೆ ... ಅವರು ಹೇಳುವುದು ಕಾಕತಾಳೀಯವಲ್ಲ ಆದರೆ ಒಂದು ಪ್ರಯೋಗವಾಗಿದೆ. ಮತ್ತು ಈ ಪ್ರಯೋಗಾಲಯದ ಮುಖ್ಯೋಪಾಧ್ಯಾಯರು ರಾಹುಲ್ ಗಾಂಧಿ", ಎಂದು ಸಂಬಿತ್ ಪಾತ್ರ ಉಲ್ಲೇಖಿಸಿದ್ದಾರೆ.

"ಕಾಂಗ್ರೆಸ್ ನಾಯಕರಲ್ಲಿ ಹಿಂದೂ ಧರ್ಮದ ಬಗ್ಗೆ ರೋಗಗೃಸ್ತ ದ್ವೇಷವಿದೆ ... ಮತ್ತು ಅವರು ಗಾಂಧಿ ಕುಟುಂಬದಿಂದ ಇದಕ್ಕೆ ಒತ್ತಡವನ್ನು ಪಡೆಯುತ್ತಾರೆ", ಎಂದು ಅವರು ಆರೋಪಿಸಿದರು.

ಗಾಂಧಿಯವರು "ಹಿಂದೂ ಧರ್ಮ" ಮತ್ತು "ಹಿಂದುತ್ವ"ಗಳ ನಡುವೆ ವ್ಯತ್ಯಾಸವನ್ನು ಏಕೆ ತೋರಿಸುತ್ತಾರೆ ಎಂದು ಕೇಳಿದಾಗ, ಉತ್ತರಿಸಿದ ಪತ್ರಾ ಅವರು, "ಅವರು ಇತರ ಧರ್ಮಗಳ ಬಗ್ಗೆ ಇದೇ ರೀತಿಯ ರೀತಿಯಲ್ಲಿ ಮಾತನಾಡಬಹುದೇ? ಖಂಡಿತ ಇಲ್ಲ. ಅವರು ಬೇರೆ ಯಾವುದೇ ಧರ್ಮದಲ್ಲಿ ಇದೇ ರೀತಿಯ ವಿಷಯಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಸಾರ್ವಕಾಲಿಕ ಹಿಂದೂ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಅವರು ಏಕೆ ಮಾಡುತ್ತಾರೆ ಎಂಬುದು ಪ್ರಶ್ನೆ, ಎಂದು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಮುಖಂಡರುಗಳು "ಹಿಂದೂ ತಾಲಿಬಾನ್, ಕೇಸರಿ ಭಯೋತ್ಪಾದನೆ"ಯಂತಹ ಪದಗಳನ್ನು ಬಳಸಿದ್ದನ್ನು ಉಲ್ಲೇಖಿಸಿದ ಪತ್ರಾ ಅವರು, ಶಶಿ ತರೂರ್, ದಿಗ್ವಿಜಯ್ ಸಿಂಗ್ ಮತ್ತು ಮಣಿಶಂಕರ್ ಅಯ್ಯರ್ ಅವರಂತಹ ನಾಯಕರು ನೀಡುವ ಹಿಂದೂ ಧರ್ಮದ ವಿರುದ್ಧದ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆಯಾಗಿರದೇ, ರಾಹುಲ್ ಗಾಂಧಿ ಅವರಿಂದ ನಿರ್ದೇಶಿಸಲ್ಪಟ್ಟ ಹೇಳಿಕೆ ಯಾಗಿರುತ್ತದೆ," ಎಂದು ಸಂಬಿತ್ ಪಾತ್ರ ತಿಳಿಸಿದ್ದಾರೆ.

RELATED TOPICS:
English summary :Rahul Gandhi always tries to attack Hindu religion - BJP

ಓಮಿಕ್ರಾನ್ ಕೋವಿಡ್ ರೂಪಾಂತರಿ ವೈರಸ್ : ನಿಯಂತ್ರಣ ಮತ್ತು ಸಕ್ರಿಯ ಕಣ್ಗಾವಲಿಗೆ ಕೇಂದ್ರದ ಸೂಚನೆ | ಜನತಾ ನ್ಯೂ&#
ಓಮಿಕ್ರಾನ್ ಕೋವಿಡ್ ರೂಪಾಂತರಿ ವೈರಸ್ : ನಿಯಂತ್ರಣ ಮತ್ತು ಸಕ್ರಿಯ ಕಣ್ಗಾವಲಿಗೆ ಕೇಂದ್ರದ ಸೂಚನೆ | ಜನತಾ ನ್ಯೂ&#
ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2  ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2 ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ  | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#

ನ್ಯೂಸ್ MORE NEWS...